Home_Page_Advt
Home_Page_Advt
Breaking News

ರಾಷ್ಟ್ರೀಯ ಮಟ್ಟದ ಮಿಸೆಸ್ ಇಂಡಿಯಾ ಕರ್ನಾಟಕ ಆಯ್ಕೆಗೆ ಫೆ.23ಕ್ಕೆ ಪುತ್ತೂರಿನಲ್ಲಿ ಆಡಿಶನ್-ಜಿಲ್ಲಾಮಟ್ಟಕ್ಕೆ ಆಯ್ಕೆ

ಪುತ್ತೂರು: ಭಾರತ ದೇಶದ ಅತಿ ದೊಡ್ಡ ಫ್ಯಾಶನ್ ಹಬ್ಬಗಳಲ್ಲಿ ಒಂದಾದ ಮಿಸೆಸ್ ಇಂಡಿಯಕ್ಕೆ ಜಿಲ್ಲಾಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ಮಾ.೮ರಂದು ಮಂಗಳೂರಿನಲ್ಲಿ ನಡೆಯಲಿರುವ ಪೂರ್ವ ಭಾವಿಯಾಗಿ ಆಡಿಶನ್‌ಗಳು ಬೇರೆ ಬೇರೆ ತಾಲೂಕು ಕೇಂದ್ರ ಗಳಲ್ಲಿ ನಡೆಯುತ್ತಿದ್ದು ಪುತ್ತೂರಿನಲ್ಲಿ ಫೆ.27ರಂದು ಪುತ್ತೂರು ಕ್ಲಬ್‌ನಲ್ಲಿ ನಡೆಯಲಿದೆ ಎಂದು ಪಾತ್‌ವೇ ಎಂಟರ್‌ಪ್ರೈಸಸ್ ಮಾಲಕ ದೀಪಕ್ ಗಂಗೂಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪ್ರತಿಭಾ ಸೌನ್ಶಿಮಟ್ ಇನಿಶಿಯೇಟಿವ್, ಪಾತ್ ವೇ ಎಂಟರ್‌ಪ್ರೈಸಸ್ ಹಾಗೂ ಮರ್ಸಿ ಲೇಡಿಸ್ ಸಲೂನ್ ಸಹ ಯೋಗದಲ್ಲಿ ಮಿಸೆಸ್ ಇಂಡಿಯಾದ ಮಿಸೆಸ್ ಮಂಗಳೂರು ಸ್ಪರ್ಧೆ ಮಾ.8 ರಂದು ಮಂಗಳೂರಿನ ಮೋತಿ ಮಹಲ್ ಹೊಟೇಲ್‌ನ ಸಭಾಂಗಣದಲ್ಲಿ ಮಹಿಳಾ ದಿನಾಚರಣೆಯ ದಿನ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಉಡುಪಿ, ಮಂಗಳೂರು, ಕಾರ್ಕಳ, ಸುರತ್ಕಲ್‌ನಲ್ಲಿ ಆಡಿಶನ್‌ಗಳು ನಡೆಯುತ್ತಿದ್ದು, ಪುತ್ತೂರಿ ನಲ್ಲಿ ಕೊನೆಯ ಅಡಿಶನ್ ನಡೆಯಲಿದೆ. ಮದುವೆಯಾದ ಮಹಿಳೆಯರು ಸೂಕ್ತ ಅರ್ಹತೆಯೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ದೇಶದ ನಾನಾ ಭಾಗದ ೧೫ಕ್ಕೂ ಅಧಿಕ ನುರಿತ ತೀರ್ಪುಗಾರರು ಸ್ಪರ್ಧಾಕೂಟದಲ್ಲಿ ಭಾವವಹಿಸಲಿದ್ದಾರೆ. ಅಡಿಶನ್‌ನಲ್ಲಿ ಆಯ್ಕೆಯಾದವರಿಗೆ ಹಲವಾರು ಫ್ಯಾಶನ್ ಕುರಿತ ತರಬೇತಿಗಳನ್ನು ತರಬೇತುದಾರರ ಮೂಲಕ ನೀಡಲಾಗುತ್ತದೆ. ಇಲ್ಲಿ ಆಯ್ಕೆಯಾದವರು ಮುಂದೆ ರಾಜ್ಯಮಟ್ಟದ ಸ್ಪರ್ಧೆ ಯಲ್ಲಿ ಭಾಗವಹಿಸಬೇಕು. ಅಲ್ಲಿ ಆಯ್ಕೆಯಾದವರಿಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಮರ್ಸಿ ಲೇಡಿಸ್ ಸೆಲೂನ್ ಮಾಲಕಿ ಮರ್ಸಿ ವೀಣಾ ಡಿ’ಸೋಜಾ, ಕ್ರೌನ್ ವಿಜೇತರಾದ ಶಿವಕನ್ಯಾ, ಪುತ್ತೂರು ಕಾರ್ಯಕ್ರಮ ಸಂಯೋಜಕ ಅಮಿತ್ ಪ್ರಭು, ಮಿಸಸ್ ಇಂಡಿಯಾ ಕರ್ನಾಟಕ ಮಂಗಳೂರು ಇದರ ತರಬೇತುದಾರರಾದ ವೀಣಾ ಉಪಸ್ಥಿತರಿದ್ದರು.

ಕುಡ್ಲಕ್ಕೆ ಸಿಕ್ಕ ಕ್ರೌನ್‌ಗಳು:
ಕಳೆದ ಬಾರಿ ನಡೆದ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಮಂಗಳೂರಿನಿಂದ ಆಯ್ಕೆಯಾಗಿ ಮಿಸೆಸ್ ಇಂಡಿಯಾ ಕರ್ನಾಟಕದಲ್ಲಿ ವಿಜೇತರಾಗಿ ಅಂತಿಮ ಹಂತ ತಲುಪಿದವರಲ್ಲಿ ಜೂಲಿಯಟ್ ಸೂಪರ್ ಕ್ಲಾಸಿಕ್ ವಿಭಾಗದಲ್ಲಿ ಪ್ರಥಮ ರನ್ನರ್ ಅಪ್ ಹಾಗೂ ಇಂದಿರಾ ಮೆನನ್ ತೃತೀಯ ರನ್ನರ್ ಅಪ್ ಕಿರೀಟ ಪಡೆದಿದ್ದರು ಹಾಗೂ ಶಿವಕನ್ಯಾ ಮಿಸೆಸ್ ಇಂಡಿಯಾ ಸ್ಟೆ ಲಿಶ್ ಐಕಾನ್ ಟೈಟಲ್ ಪಡೆದಿದ್ದರು-ದೀಪಕ್ ಗಂಗೂಲಿ

3 ವಿಭಾಗದಲ್ಲಿ ಸ್ಪರ್ಧೆ:
ಮದುವೆಯಾದ ಮಹಿಳೆಯರಿಗೆ 3 ವಿಭಾಗದಲ್ಲಿ ಈ ಸ್ಪರ್ಧೆ ನಡೆಯಲಿದ್ದು, 20ರಿಂದ 4೦, 4೦ರಿಂದ 60 ಮತ್ತು 60ರಿಂದ ಮೇಲ್ಪಟ್ಟ ಮಹಿಳೆಯರಿಗೆ ಸ್ಪರ್ಧೆ ನಡೆಯಲಿದೆ. ಹೆಚ್ಚಾಗಿ ಮಹಿಳೆಯರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛೆ ಇದ್ದರೂ. ಅವರಿಗೆ ಯಾವ ರೀತಿಯಲ್ಲಿ ಭಾಗಿಯಾಗಬೇಕೆಂಬ ಮನೋಭಾವನೆ ಇರುತ್ತದೆ. ಇದಕ್ಕಾಗಿ ಆರಂಭದಲ್ಲಿ ಅವರಿಗೆ ತರಬೇತಿಯನ್ನು ಕೂಡಾ ಸಂಸ್ಥೆಯ ಮೂಲಕ ನೀಡಲಾಗುತ್ತದೆಅಮಿತ್ ಪ್ರಭು, ಕಾರ್ಯಕ್ರಮ ಸಂಯೋಜಕರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.