Home_Page_Advt
Home_Page_Advt
Breaking News

ಬಿಳಿನೆಲೆ -ಪರ್ಲ-ಸನ್ನಾರ ರಸ್ತೆ ಕಾಂಕ್ರೀಟಿಕರಣ

ಕಡಬ: ಬಿಳಿನೆಲೆ ಪರ್ಲ-ಸನ್ನಾರ ರಸ್ತೆ ಶಾಸಕರ 5ಲಕ್ಷ ಅನುದಾನದಲ್ಲಿ ಕಾಂಕ್ರೀಟಿಕರಣ ನಡೆಯುತ್ತಿದ್ದು ತಾ.ಪಂ ಮಾಜಿ ಸದಸ್ಯರಾದ ಬಿಜೆಪಿ ಮುಖಂಡರಾದ ಉದಯಕುಮಾರ್ ಬಿ ಹಾಗೂ ಸರೋಜಿನಿ ಜಯಪ್ರಕಾಶ್‌ರವರು ಪೆ. 22ರಂದು ಕಾಮಾಗಾರಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾ.ಪಂ ಮಾಜಿ ಸದಸ್ಯ ಉದಯ ಕುಮಾರ್ ಬಿರವರು ನಮ್ಮ ಬಿಳಿನೆಲೆ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಿಂದ ಅತೀ ಹೆಚ್ಚಿನ ಅಭಿವೃದ್ಧಿಯಾಗುತ್ತಿದ್ದು, ಗ್ರಾಮೀಣ ರಸ್ತೆಗಳನ್ನು ಕಾಂಕ್ರೀಕರಣ ಹಾಗೂ ಡಾಮರೀಕರಣ ಮಾಡಲಾಗುತ್ತಿದ್ದು ಕಿರು ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು. ತಾ.ಪಂ ಮಾಜಿ ಸದಸ್ಯೆ ಸರೋಜಿನಿಜಯಪ್ರಕಾಶ್‌ಯವರು ಈಗಾಗಲೇ ಶಾಸಕರ ಅನುದಾನದಿಂದ ನಡೆಯುತ್ತಿರುವ ಕಾಮಾಗಾರಿಗಳ ಬಗ್ಗೆ ವಿವರಿಸಿ ಬಿಳಿನೆಲೆ ಪರ್ಲ-ಸನ್ನಾರ ರಸ್ತೆ ೫ ಲಕ್ಷದಲ್ಲಿ ಕಾಂಕ್ರೀಟಿಕರಣ ಆಗುತ್ತಿದ್ದರೆ, ಮದೆಪರ್ಲ ರಸ್ತೆಗೆ ರೂ. 3ಲಕ್ಷ ,ಸೂಡ್ಲು-ಚಿಟ್ಟೆಗುಡ್ಡೆ ರಸ್ತೆಗೆ ೨೦ಲಕ್ಷ ಸೂಡ್ಲು ರಸ್ತೆಗೆ ೧೦ಲಕ್ಷ ಬೈಲು ಉಂಡಿಲ ರಸ್ತೆಗೆ ೧೦ಲಕ್ಷ, ಪುತ್ತಿಲ ಬೈಲು ರಸ್ತೆಗೆ 10ಲಕ್ಷ ಅನುದಾನದಲ್ಲಿ ಕಾಂಕ್ರೀಟಿಕರಣ ನಡೆಯುತ್ತಿದ್ದರೆ ಸೂಡ್ಲು ಕಿರುಸೇತುವೆ ನಿರ್ಮಾಣಕ್ಕೆ ೮ಲಕ್ಷ ಹಾಗೂ ಬೈಲು ಉದ್ಮಯ ಸೇತುವೆ ನಿರ್ಮಾಣಕ್ಕೆ ೬೫ಲಕ್ಷ ಅನುದಾನ ಒದಗಿಸಲಾಗಿದೆ ಎಂದು ಶಾಸಕರು ನೀಡಿದ ಅನುದಾನದಿಂದ ನಡೆಯುತ್ತಿರುವ ಕಾಮಾಗಾರಿಗಳ ಬಗ್ಗೆ ವಿವರಿಸಿದರು.ಈ ಸಂದರ್ಭದಲ್ಲಿ ಬಿಳಿನೆಲೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕಿ ಉಮಾವತಿ ಕಳಿಗೆ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿಳಿನೆಲೆ ವಲಯಾಧ್ಯಕ್ಷ ಸತೀಶ್ ಎರ್ಕ, ಬಿಳಿನೆಲೆ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ವಿನಯ ಪುತ್ತಿಲ, ಕಾರ್ಯದರ್ಶಿ ಧರ್ಮಪಾಲ, ಪ್ರಮುಖರಾದ ಚಂದ್ರಶೇಖರ ಸನ್ನಾರ, ಕೇಶವ ಪರ್ಲ, ಸುಂದರ ಗೌಡ, ಚಿತ್ರಾವತಿ, ಕೃಷ್ಣಪ್ಪ ಗೌಡ ಸನ್ನಾರ, ಪ್ರಕಾಶ್ ಕೊಂಬೋಳಿ, ದಿನೇಶ್ ಸನ್ನಾರ, ದಯಾನಂದ ನಾಯ್ಕ, ದಿನೇಶ್ ಮದೆಪರ್ಲ, ತೀರ್ಥಕುಮಾರ್‌ತೋಟದ ಮೂಳೆ , ನಾಗೇಶ್ ಸನ್ನಾರ, ಬಾಲಕೃಷ್ಣ ಸನ್ನಾರ, ಶ್ರೀದರ ಬೈಲು, ಹರ್ಷಿತ್ ಸೂಡ್ಲು, ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.