Home_Page_Advt
Home_Page_Advt
Breaking News

ಸಮಾಜಕ್ಕೆ ಮಾದರಿ, ಯುವಕರ ಒಗ್ಗೂಡಿಕೆಯ-ತಾಲೂಕು ಯುವ ಬಂಟರ ಸಂಘ. ಪುತ್ತೂರು

✍…ವಿಶೇಷ ವರದಿ- ಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರ ಕಲ್ಪನೆಯಂತೆ, ತಾಲೂಕು ಯುವ ಬಂಟರ ಸಂಘದ ಸ್ಥಾಪನೆಯನ್ನು ಸಹಕಾರಿ ಧುರಿಣ ಜೀವನ್ ಭಂಡಾರಿರವರ ಆಶಯದಂತೆ ಮಾಡಿ, ಇಂದು ಸಂಸ್ಥೆಯು ಹೆಮ್ಮೆರವಾಗಿ ಬೆಳೆಯುತ್ತಿದೆ. ಪುತ್ತೂರಿನ ಬಂಟರ ಯುವ ಸಂಘಟನೆಯ ಶಕ್ತಿಯನ್ನು ನೀವು ಕಣ್ಣಾರೆ ಕಾಣಬಹುದು. ಇಲ್ಲಿ ತಾಲೂಕಿನ ಬಲಿಷ್ಠವಾದ ತಂಡ ಇದೆ, ತಂಡಕ್ಕೆ ಸಮರ್ಥವಾದ ಪದಾಧಿಕಾರಿಗಳ ಕಾವಲು ಇದೆ, ಇಲ್ಲಿ ಸಂಘಟನಾತ್ಮಕವಾದ ಕಾರ್‍ಯ ಚಟುವಟಿಕೆಯ ಉದ್ದೇಶ ಇದೆ, ಆದರ ಫಲವೇ ಇಂದು ಪುತ್ತೂರು ತಾಲೂಕು ಯುವ ಬಂಟರ ಸಂಘ ಅವಿಭಜಿತ ಜಿಲ್ಲೆಯಲ್ಲಿ ಮಾದರಿ ಸಂಘಟನೆ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡು ಬಂದಿದೆ ಎಂಬುದಕ್ಕೆ 2020ನೇ ಫೆ. 22 ರ ಯುವ ಬಂಟರ ದಿನಾಚರಣೆ ಕಾರ್‍ಯಕ್ರಮವೇ ಸಾಕ್ಷಿಯಾಗಿದೆ. ಸಾವಿರಾರು ಮಂದಿ ಶ್ರೀ ಸತ್ಯನಾರಾಯಣ ಪೂಜೆಯನ್ನು ಮಾಡಿಸುವ ಮೂಲಕ, ತಮ್ಮಲ್ಲಿ ಇರುವ ಧಾರ್ಮಿಕವಾದ ನಂಬಿಕೆಗೆ ಪ್ರೇರಣೆಯಾದರು. ೧೫೦೦ಕ್ಕೂ ಹೆಚ್ಚು ಮಂದಿ ಸಮಾಜ ಭಾಂದವರು ಕಾರ್‍ಯಕ್ರಮದಲ್ಲಿ ಭಾಗವಹಿಸುವ ಮೂಲಕ, ಯುವ ಬಂಟರ ಕಾರ್‍ಯಕ್ರಮಕ್ಕೆ ಪ್ರೋತ್ಸಾಹಗಾರರಾದರು. ಸದಾ ಸಮಾಜ ಮುಖಿ ಚಂತನೆಯ ತುಡಿತವನ್ನು ಹೊಂದಿರುವ ಪ್ರಕಾಶ್ ರೈ ಸಾರಕರೆಯವರ 2 ನೇ ಅವಧಿಯ ಪ್ರಥಮ ಕಾರ್‍ಯಕ್ರಮ ಸರ್ವರೀತಿಯಿಂದಲ್ಲೂ ಅಚ್ಚುಕಟ್ಟಾಗಿ ನಡೆದು, ಸಮಾಜ ಭಾಂದವರ ವಿಶ್ವಾಸಕ್ಕೆ ಪಾತ್ರವಾಗಿದೆ. ಬೆಳಿಗ್ಗೆಯಿಂದ ಸಂಜೆಯ ತನಕ ನಡೆದ ವಿವಿಧ ಬಗೆಯ ವೈವಿಧ್ಯಮಯ ಕಾರ್‍ಯಕ್ರಮಗಳು ಅರ್ಥಪೂರ್ಣವಾಗಿತ್ತು, ಭಾಗವಹಿಸಿದ್ದ ಅತಿಥಿಗಳಾದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸಿನಿತಾರೆಯರಾದ ಶೈನ್ ಶೆಟ್ಟಿ,ಶಿಲ್ಪಾ ಶೆಟ್ಟಿ . ಲಕ್ಷ ಶೆಟ್ಟಿ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಸಹಕಾರಿ ಧುರಿಣ ಶಶಿಕುಮಾರ್ ರೈ ಬಾಲ್ಯೋಟ್ಟುರವರುಗಳ ಮಾತು ಯುವ ಬಂಟರನ್ನು ಮತ್ತಷ್ಟು ಕ್ರೀಯಾಶೀಲವಾಗಿಸುವಲ್ಲಿ ಹೆಜ್ಜೆಯ ಹಾದಿಯನ್ನು ತೋರಿಸಿದೆ.

ಯುವ ಬಂಟರ ಪ್ರತಿಭೆಗೆ ವೇದಿಕೆ
ತಾಲೂಕಿನದ್ಯಾಂತ ಸಾವಿರ ಸಾವಿರ ಯುವ ಪ್ರತಿಭೆಗಳು ಇದ್ದಾರೆ, ಅರಿಗೆ ಸೂಕ್ತವಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹವನ್ನು ನೀಡುವ ಕಾರ್‍ಯಕ್ಕೆ ತಾಲೂಕಿನ ಯುವ ಬಂಟರ ಸಂಘ ಹೆಜ್ಜೆ ಇಟ್ಟಿರುವುದು ಖುಷಿಯನ್ನು ತರುವ ವಿಚಾರವಾಗಿದೆ.

ಆರಂಭ- 2008
2008ರಲ್ಲಿ ತಾಲೂಕಿನ ಯುವ ಬಂಟರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ, ಇದೀಗ 13 ವರುಷದತ್ತ ಹೆಜ್ಜೆ ಇಟ್ಟಿದೆ.

“ಸಮಾಜ ಸೇವೆಯ ತುಡಿತದೊಂದಿಗೆ”

ಸಂಘದ ಸ್ಥಾಪಕಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಳಿಕ ಅಧ್ಯಕ್ಷ ಪದವಿಯನ್ನು ಹಂತ ಹಂತವಾಗಿ ಪಡೆದವರು ರಾಕೇಶ್ ರೈ ಕೆಡೆಂಜಿ, ಕೃಷ್ಣಪ್ರಸಾದ್ ಆಳ್ವ ಆಳ್ವರ ಮನೆ ಉಪ್ಪಳಿಗೆ, ರಮೇಶ್ ರೈ ಡಿಂಬ್ರಿ( ಪಿಜಿನಡ್ಕಗುತ್ತು) ರೋಶನ್ ರೈ ಬನ್ನೂರು, ಸೀತಾರಾಮ ಶೆಟ್ಟಿ ಕಂಬಳತಡ್ಢ, ಕುಂಟುಪುಣಿಗುತ್ತು ರವೀಂದ್ರ ರೈ ನೆಕ್ಕಿಲು, ಪ್ರಸ್ತುತ ೨ ನೇ ಅವಧಿಯಲ್ಲಿ ಅಧ್ಯಕ್ಷರಾಗಿ ಪ್ರಕಾಶ್ ರೈ ಸಾರಕರೆ, ಪ್ರಧಾನ ಕಾರ್‍ಯದರ್ಶಿಯಾಗಿ ಬೊಳಿಂಜೆಗುತ್ತು ರವಿಪ್ರಸಾದ್ ಶೆಟ್ಟಿ ಬನ್ನೂರು, ಕೋಶಾಧಿಕಾರಿ ನವೀನ್ ರೈ ಪಂಜಳ, ಜೊತೆ ಕಾರ್‍ಯದರ್ಶಿ ಪ್ರಶಾಂತಿ ಎಸ್ ರೈ,  ತಲಾ 9 ಮಂದಿ ಉಪಾಧ್ಯಕ್ಷರುಗಳು, ಸಂಚಾಲಕರುಗಳು, ಸಂಘಟನಾ ಕಾರ್‍ಯದರ್ಶಿಗಳು ಪ್ರಸ್ತುತ ತಲಾ 9 ಮಂದಿ ಉಪಾಧ್ಯಕ್ಷರುಗಳು, ಸಂಚಾಲಕರುಗಳು ಹಾಗೂ ಸಂಘಟನಾ ಕಾರ್‍ಯದರ್ಶಿಗಳು, ತಲಾ 6 ಮಂದಿ ಗೌರವ ಆಹ್ವಾನಿತರು, ಖಾಯಂ ಆಹ್ವಾನಿತರು,ವಿಶೇಷ ಆಹ್ವಾನಿತರು ಸಂಘದ ಬೆಳವಣಿಗೆಯಲ್ಲಿ ದುಡಿಯುತ್ತಿದ್ದಾರೆ

ಶೈನ್ ಶೆಟ್ಟಿ ಆಗಮನದೊಂದಿಗೆ 2020ರ ಸಾಲಿನ ಶೈನ್ ಆರಂಭ
ಬಿಗ್ ಬಾಸ್ ಅವೃತಿಯ 7 ರ ವಿಜೇತ ಕಿರುತೆರೆಯ ನಾಯಕ ಕುಂದಾಪುರ ಮೂಲದ ಬಂಟ ಸಮಾಜದ ಯುವ ಪ್ರತಿಭೆ ಶೈನ್ ಶೆಟ್ಟಿರವರು ಪುತ್ತೂರು ತಾಲೂಕು ಯುವ ಬಂಟರ ಸಂಘದ 2020ರ ಸಾಲಿನ ಆರಂಭದ ಕಾರ್‍ಯಕ್ರಮ” ಯುವ ಬಂಟರ ದಿನಾಚರಣೆ”ಗೆ ಆಗಮಿಸಿ, ಯುವ ಬಂಟರಲ್ಲಿ ಸಾಧನೆಯಿಂದ ಯಶಸ್ಸು ಪಡೆಯಲು ಸಾಧ್ಯ ಎಂಬ ಬೀಜವನ್ನು ಬಿತ್ತಿ, ಕಾರ್‍ಯಕ್ರಮದ ಯಶಸ್ಸಿಗೆ ಶೈನಿಂಗ್ ತಂದು ಕೊಟ್ಟು, ಯುವ ಬಂಟರ ಒಗ್ಗೂಡಿಕೆಗೆ ಮತ್ತಷ್ಟು ಪ್ರೇರಣಾಧಾಯಿ ಆದರು. ತಾಲೂಕಿನ ಪ್ರತಿ ಗ್ರಾಮ, ಗ್ರಾಮಗಳಲ್ಲಿ ಇರುವ ಯುವ ಬಂಟರನ್ನು ಒಗ್ಗೂಡಿಸಿ ಕೊಂಡು, ನಗರ ಪ್ರದೇಶದಲ್ಲೂ ಇರುವ ಯುವಕರನ್ನು ತಮ್ಮ ಸಂಘಟನೆಯ ಮೂಲಕ ಅರ್ಥಪೂರ್ಣ ಕಾರ್‍ಯಕ್ರಮ ನಡೆಸಲು ತಾಲೂಕು ಯುವ ಬಂಟರ ಸಂಘಟನೆ ಹೆಜ್ಜೆ ಇಟ್ಟಿದೆ.

ಇಲ್ಲಿದೆ ಪ್ರೋತ್ಸಾಹ ಮತ್ತು ಸಹಕಾರ
ತಾಲೂಕು ಯುವ ಬಂಟರ ಸಂಘದ ಕಾರ್‍ಯ ಚಟುವಟಿಕೆಗೆ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಮತ್ತು ಬಂಟರ ಸಂಘ ಪುತ್ತೂರು ತಾಲೂಕು ಇವರ ಸಮರ್ಥ ಮಾರ್ಗದರ್ಶನ, ತಾಲೂಕು ಮಹಿಳಾ ಬಂಟರ ಸಂಘ ಮತ್ತು ವಿದ್ಯಾರ್ಥಿ ಬಂಟರ ಸಂಘದ ಸಹಕಾರ ಇದೆ ಎಂಬುದು ಇಲ್ಲಿ ಉಲ್ಲೇಖನೀಯ.  2020 ನೇ ಸಾಲಿನ ತಾಲೂಕು ಯುವ ಬಂಟರ ಸಂಘಕ್ಕೆ ಇನ್ನಷ್ಟು ಮಹತ್ವದ ಕಾರ್‍ಯಕ್ರಮಗಳನ್ನು ಸಂಘಟಿಸುವ ತುಡಿತ ಇದೆ, ಅದು ಈಡೇರುವ ಮೂಲಕ, ಬಂಟ ಸಮಾಜದ ಮಾದರಿ ಸಂಘಟನೆಯಾಗಿ ಯುವ ಬಂಟರ ಸಂಘವು ಬೆಳೆದು ಬಂದಿರುವುದು ಸಂತಸದ ವಿಚಾರ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.