Home_Page_Advt
Home_Page_Advt
Breaking News

ಮಾಚಿಲ ಉಳ್ಳಾಲ್ತಿ ಕ್ಷೇತ್ರದಲ್ಲಿ ಯಶಸ್ವಿ ಬ್ರಹ್ಮಕಲಶೋತ್ಸವ- ಅಭಿನಂದನಾ ಸಭೆ ಎಲ್ಲರ ಸಹಕಾರದಿಂದ ಬ್ರಹ್ಮಕಲಶ ಸಂಭ್ರಮದಿಂದ ನಡೆದಿದೆ- ವೆಂಕಪ್ಪ ಗೌಡ ಮಾಚಿಲ

ಕಾಣಿಯೂರು: ಎಲ್ಲರ ಸಹಕಾರದಿಂದ ಬ್ರಹ್ಮಕಲಶೋತ್ಸವವು ಯಶಸ್ವಿಯಾಗಿ ಸಂಭ್ರಮದಿಂದ ನಡೆದಿದೆ. ಎಲ್ಲರ ತನುಮನದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಯಶಸ್ವಿ ಬ್ರಹ್ಮಕಲಶೋತ್ಸವಕ್ಕೆ ಕೈಜೋಡಿಸಿದ ಪ್ರತಿಯೊಬ್ಬರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಉಳ್ಳಾಲ್ತಿ ಮೂಲ ಕ್ಷೇತ್ರ ಮಾಚಿಲ ಕುಂಬ್ಲಾಡಿ ಹಾಗೂ ಪರಿವಾರ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವೆಂಕಪ್ಪ ಗೌಡ ಮಾಚಿಲ ಹೇಳಿದರು. ಅವರು ಜ.೩೦ ರಿಂದ ಫೆ ೩ ರ ತನಕ ನಡೆದ ಉಳ್ಳಾಲ್ತಿ ಮೂಲ ಕ್ಷೇತ್ರ ಮಾಚಿಲ ಕುಂಬ್ಲಾಡಿ ಹಾಗೂ ಪರಿವಾರ ದೈವಗಳ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶ ಸಂಭ್ರಮದ ಯಶಸ್ವಿಗೆ ಸಹಕರಿಸಿದವರಿಗೆ ಫೆ ೨೩ರಂದು ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ರಹ್ಮಕಲಶ ಸಂಭ್ರಮದಲ್ಲಿ ಸಹಕರಿಸುವ ಭಾಗ್ಯ ಎಲ್ಲರಿಗೂ ದೊರಕಿತ್ತು. ಇಡೀ ಊರಿಗೆ ಊರೇ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದು, ಮಾತ್ರವಲ್ಲ ಪರವೂರಿನ ಜನತೆ ಮೆಚ್ಚುವ ರೀತಿಯಲ್ಲಿ ನಡೆದಿದೆ ಎಂದರು. ಈ ಸಂದರ್ಭದಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷೆ ಚಂದ್ರಕಲಾ ಜಯರಾಮ್ ಅರುವಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಯು.ಪಿ ರಾಮಕೃಷ್ಣ ಗೌಡ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋನಪ್ಪ ಗೌಡ ಉಳವ, ಆಡಳಿತ ಮೊಕ್ತೇಸರ ನಾರ್ಣಪ್ಪ ಗೌಡ ಮಾಚಿಲ. ಗೌ ಡ, ಉಪಾಧ್ಯಕ್ಷ ವಿಜಯಕುಮಾರ್ ಸೊರಕೆ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ವಿಶ್ವನಾಥ ಗೌಡ ಅಂಬುಲ, ಜೀರ್ಣೋಧ್ದಾರ ಸಮಿತಿ ಉಪಾಧ್ಯಕ್ಷರಾದ ಪ್ರವೀಣ್ ಕುಂಟ್ಯಾನ, ಪರಮಮೇಶ್ವರ ಗೌಡ ಮಿಯೋಲ್ಪೆ, ಧರ್ಣಪ್ಪ ಗೌಡ ಅಂಬುಲ, ಶ್ರೀ ನಾಲ್ಕಂಭ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಆನಂದ ಗೌಡ ಖಂಡಿಗ, ಮೋನಪ್ಪ ಗೌಡ ಮಾಚಿಲ, ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಳದ ಮೊಕ್ತೇಸರರಾದ ಮಾಚಿಲ ನಾರ್ಣಪ್ಪ ಗೌಡ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ ಕಂಪ, ದೇವಣ್ಣ ಗೌಡ ಅಂಬುಲ, ಗಣಪತಿ ಭಟ್, ಭಾಗೀರಥಿ ಕುಂಬ್ಲಾಡಿ, ವನಿತಾ ಕುಂಬ್ಲಾಡಿ, ತನಿಯ ಕುಂಬ್ಲಾಡಿ, ಶ್ರೀ ನಾಲ್ಕಂಭ ಉಳ್ಳಾಲ್ತಿ ಕ್ಷೇತ್ರದ ಕ್ಷೇತ್ರಶರಾದ ಮಾಚಿಲ ಪೆರ್ಗಡೆ ಗೌಡ, ಸಹಕ್ಷೇತ್ರೇಶರಾದ ರಾಧಾಕೃಷ್ಣ ಮಾಚಿಲ, ಬ್ರಹ್ಮಕಲಶ ಸಮಿತಿ ಜತೆ ಕಾರ್ಯದರ್ಶಿ ಪ್ರೀತಮ್ ಮಾಚಿಲ, ಕೋಶಾಧಿಕಾರಿ ಮೋಹನ ಖಂಡಿಗ, ಆಡಳಿತ ಪಂಗಡ ಸಂಚಾಲಕ ವಿಶ್ವನಾಥ ಕಂಪ, ಕಾರ್ಯದರ್ಶಿ ಕೇಶವ ಖಂಡಿಗ, ಸಹಸಂಚಾಲಕ ವಿಶ್ವನಾಥ ಖಂಡಿಗ, ಜತೆ ಕಾರ್ಯದರ್ಶಿ ವಸಂತ ವಜ್ರಡ್ಕ, ಕೋಶಾಧಿಕಾರಿ ಜನಾರ್ದನ ಕೇಳಗಿನಕೇರಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದರ್ಶಿ ವಿಜಿತ್ ಮಾಚಿಲ ವಂದಿಸಿದರು. ಕಾರ್ಯಕ್ರಮದದಲ್ಲಿ ಖರ್ಚು ವೆಚ್ಚದ ಕುರಿತ ಲೆಕ್ಕಪತ್ರ ಮಂಡಿಸಲಾಯಿತು. ಬಳಿಕ ಸಹಕರಿಸಿದವರನ್ನು ಅಭಿನಂದಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.