Home_Page_Advt
Home_Page_Advt
Breaking News

ದೆಹಲಿಯಲ್ಲೂ ಗುಜರಾತ್‌ನಲ್ಲಿ ಕಂಡ ಮಾರಣ ಹೋಮ: ಮುಸ್ಲಿಮರ ವಿರುದ್ಧ ದಾಳಿ ಆರೋಪಿಸಿ ಎಸ್‌ಡಿಪಿಐ ಪ್ರತಿಭಟನೆಯಲ್ಲಿ ಕೆ.ಎ ಸಿದ್ಧಿಕ್

  • ಭಯವಿಲ್ಲದ ಭಾರತ ಕಟ್ಟಲು ರಸ್ತೆಗಿಳಿದು ಬನ್ನಿ – ಜಾಬೀರ್ ಅರಿಯಡ್ಕ

ಪುತ್ತೂರು: ದೆಹಲಿಯ ಶಹೀನ್‌ಬಾಗ್‌ನಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆದರೆ ಅದನ್ನು ಹತ್ತಿಕುವ ನಿಟ್ಟಿನಲ್ಲಿ ಸಂಘಿಗಳು ಪೊಲೀಸರ ಕೈ ಜೋಡಿಸುವ ಮೂಲಕ ಪ್ರತಿಭಟನೆಯ ದಿಕ್ಕು ತಪ್ಪಿಸುವ ಷಡ್ಯಂತ್ರ ನಡೆಯುತ್ತಿದ್ದು, ಕಳೆದ ಎರಡು ದಿನಗಳಿಂದ ಗುಜರಾತ್‌ನಲ್ಲಿ ಕಂಡ ಮಾರಣ ಹೋಮವನ್ನು ದೆಹಲಿಯಲ್ಲೂ ನಡೆಯುತ್ತಿದೆ ಎಂದು ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಕೆ.ಎ ಸಿದ್ಧೀಕ್ ಅವರು ಹೇಳಿದರು.

ದೆಹಲಿಯಲ್ಲಿ ನಡೆದ ಹಿಂಸಾಚಾರ ವಿರುದ್ಧ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಫೆ. ೨೬ರಂದು ಎಸ್‌ಡಿಪಿಐ ಪಕ್ಷದ ವತಿಯಿಂದ ಇಲ್ಲಿನ ಗಾಂಧಿಕಟ್ಟೆಯ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಮೋದಿ ಸರಕಾರ ಬಂದ ಬಳಿಕ ಇಲ್ಲಿನ ಜನಸಾಮಾನ್ಯರಿಗೆ ಅನ್ಯಾಯ ಆಗುತ್ತಿದೆ. ಈ ನಿಟ್ಟಿನಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಿದೆ. ದೆಹಲಿಯಲ್ಲಿ ಮುಸಲ್ಮಾನರು ನಡೆಸುವ ಶಾಂತಿಯುತ ಪ್ರತಿಭಟನೆಗೆ ಗೋಪಾಲ್ ಎಂಬ ವ್ಯಕ್ತಿ ಕೈಯಲ್ಲಿ ಪಿಸ್ತೂಲ್ ಹಿಡಿದು ಪ್ರತಿಭಟನಾ ಕಾರರ ಬಳಿ ಬಂದಾಗಲೂ ಪೊಲೀಸರು ಆತನನ್ನು ತಡೆಯದೆ ಆತನೊಂದಿಗೆ ಕೈ ಜೋಡಿಸಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ಎರಡು ದಿನಗಳಿಂದ ಸುಮಾರು ೧೮ ಮಂದಿ ಮುಸಲ್ಮಾನರ ಮಾರಣ ಹೋಮ ಆಗಿದೆ. ಇಷ್ಟೊಂದು ದೊಡ್ಡ ಘಟನೆ ನಡೆದರೂ ಅಲ್ಲಿನ ನಾಯಕ ಅರವಿಂದ ಕ್ರೇಜಿವಾಲ್‌ನನ್ನು ಅಮೀತ್ ಶಾ ಭೇಟಿ ಮಾಡಿದ ಮಾರನೆ ದಿನ ದಾಳಿ ನಡೆದಿದೆ. ಅರವಿಂದ ಕ್ರೇಜಿವಾಲ್ ಮೌನವಹಿಸಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ ನಡೆದಿದೆ ಎಂದ ಅವರು ಇದರ ಹಿಂದೆ ಆರ್ ಎಸ್ ಎಸ್ ಗೂಂಡಾಗಳು ಇದ್ದಾರೆ. ಅವರೇ ದೆಹಲಿಯಲ್ಲಿ ಮಾರಣಹೋಮ ಮಾಡಿದವರು. ಅವರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ನಮಗೆ ನ್ಯಾಯ ಸಿಗದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ಏನೆ ಆಗಲಿ ಅಂತಿಮ ವಿಜಯ ನಮಗೆಲ್ಲ ಎಂಬ ಪಕ್ಷದ ದೇಯ ವಾಕ್ಯದಂತೆ ಸರಕಾರದಿಂದ ನ್ಯಾಯ ಸಿಗದಿದ್ದರೆ ನ್ಯಾಯ ಕೊಡಲು ನಾವು ಸಿದ್ಧ ಎಂದರು.

ಭಯವಿಲ್ಲದ ಭಾರತ ಕಟ್ಟಲು ರಸ್ತೆಗಿಳಿದು ಬನ್ನಿ:
ಪಿಎಫ್‌ಐ ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕ ಅವರು ಮಾತನಾಡಿ ಮೋದಿ ಸರಕಾರ ಗುಜರಾತ್ ಮಾದರಿಯಲ್ಲಿ ದೆಹಲಿ ಮುಸಲ್ಮಾನರನ್ನು ಮುಗಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ. ೨೦೦೨ರಲ್ಲಿ ಗುಜರಾತನಲ್ಲಿ ನಡೆದ ಘಟನೆಯನ್ನು ತೋರಿಸಿ ದೆಹಲಿಯಲ್ಲಿ ಮುಸಲ್ಮಾನರನ್ನು ಭಯಪಡಿಸಿ ಮುಂದೆ ದೆಹಲಿಯ ಘಟನೆಯನ್ನು ತೋರಿಸಿ ಇತರ ಕಡೆಯಲ್ಲೂ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಸಲಿದ್ದಾರೆ ಎಂದು ಆರೋಪಿಸಿದ ಅವರು ಮುಸಲ್ಮಾನರಿಗೆ ಅನ್ಯಾಯ ಆಗದಂತೆ ನೋಡುತ್ತಾರೆಂಬ ಪೊಲೀಸರ ಮೇಲೆ ಭರವಸೆ ಇತ್ತು. ಇವತ್ತು ದೆಹಲಿಯ ಲಜ್ಜೆಗೆಟ್ಟ ಪೊಲೀಸರಿಂದ ಆ ಭರವಸೆಯೂ ಹೋಗಿದೆ. ಪೊಲೀಸರ ಹೃದಯದಲ್ಲಿ ಕೇಸರಿ ಇದೆ ಎಂಬುದು ನಮಗೆ ಅರ್ಥ ಆಗಿದೆ. ಬಾಬರಿ ಮಸೀದಿ ಧ್ವಂಸ ಮಾಡುವ ಸಂದರ್ಭದಲ್ಲಿ ನರಸಿಂಹ ರಾವ್ ಅವರು ಸುಮ್ಮನಿದ್ದರು. ಇವತ್ತು ದೆಹಲಿಯ ಘಟನೆಯಲ್ಲೂ ನಮಗೆ ನ್ಯಾಯ ಸಿಗುತ್ತಿಲ್ಲ. ದೇಶದಲ್ಲಿ ನ್ಯಾಯ ಸಿಗುತ್ತಿಲ್ಲ ಎಂದಾಗ ನಾವೆಲ್ಲ ಮುಂದೆ ಶಾಹದತ್ ಗಾಗಿ ಸನ್ನದರಾಗಬೇಕು ಎಂದರು. ಮುಂದಿನ ದಿನಗಳಲ್ಲಿ ನಮಗೆ ಸಮಯವಕಾಶವಿಲ್ಲ. ನಮ್ಮ ಕೈಯಲ್ಲಿ ಶಕ್ತಿಯುತ ಆಯುಧ ಹೊರತು ಪೊಲೀಸರ ಭರವಸೆ ಬೇಡ ಎಂದ ಅವರು ಭಯವಿಲ್ಲದ ಭಾರತ ಕಟ್ಟಲು ಒಂದಾಗಿ ರಸ್ತೆಗಿಳಿದು ಬನ್ನಿ ಎಂದರು. ಎಸ್‌ಡಿಪಿಐ ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಶ್ರಫ್ ಬಾವು, ಖಜಾಂಚಿ ಇಕ್ಬಾಲ್ ಕೆಂಪಿ, ಸದಸ್ಯ ಹಮೀದ್ ಸಾಲ್ಮರ, ರಿಯಾಝ್ ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.