ತಿಂಗಳಾಡಿ ಶಾಲಾ ವಿದ್ಯಾರ್ಥಿಗಳಿಂದ ಕಡಮಜಲು ಕೃಷಿ ಕ್ಷೇತ್ರಕ್ಕೆ ಭೇಟಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿ ಸ.ಉ.ಹಿ.ಪ್ರಾ.ಶಾಲೆಯ ಸೃಷ್ಠಿ ಇಕೋ ಕ್ಲಬ್ ವತಿಯಿಂದ ಕಡಮಜಲು ಕೃಷಿ ಕ್ಷೇತ್ರ ಭೇಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಡಮಜಲು ಸುಭಾಷ್ ರೈ ಯವರು ಎಲ್ಲರನ್ನೂ ಸ್ವಾಗತಿಸಿ ಕೃಷಿ ಬೆಳೆಗಳಾದ ಅಡಿಕೆ,ತೆಂಗು.ಗೇರು,ಕೊಕ್ಕೊ,ರಬ್ಬರ್ ಬಗ್ಗೆ ಮಾಹಿತಿಯನ್ನು ನೀಡಿದರು. ನಂತರ ಅವರ ಮನೆಯಲ್ಲಿ ಅಳವಡಿಸಿಕೊಂಡಿರುವ ಬಯೋಗ್ಯಾಸ್ ಪ್ಲಾಂಟ್, ಬಯೋಗ್ಯಾಸ್ ತ್ಯಾಜ್ಯ ನಿರ್ವಹಣೆ,ರಬ್ಬರ್ ಶೀಟ್ ಯಂತ್ರ,ರಬ್ಬರ್ ಸ್ಮೋಕ್ ಹೌಸ್,ಅಸ್ತ್ರ ಒಲೆ,ಅಡಿಕೆ ಒಣಗಿಸುವ ಸೋಲಾರ್ ವ್ಯವಸ್ಥೆ,ಹೈನುಗಾರಿಕೆ ಮುಂತಾದ ಪರಿಸರ ಪೂರಕ ಕ ಮಗಳ ಬಗ್ಗೆ ತಿಳಿಸುತ್ತಾ ವಿದ್ಯಾರ್ಥಿಗಳ ಸಂದೇಹಗಳಿಗೆ ಉತ್ತರಿಸಿದರು.ವಿದ್ಯಾರ್ಥಿಗಳಿಗೆ ಲಘು ಉಪಹಾರ ನೀಡಿದ ನಂತರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಲಾಯತು. .ವಿದ್ಯಾರ್ಥಿಗಳು ಕಡಮಜಲು ಕೃಷಿ ಕ್ಷೇತ್ರವನ್ನು ಸುತ್ತಾಡುತ್ತಾ ಖುಷಿಯಿಂದ ಸಂಭ್ರಮಿಸಿದರು. 30 ವಿದ್ಯಾರ್ಥಿಗಳೊಂದಿಗೆ ಕ್ಲಬ್ ನ ಅಧ್ಯಕ್ಷ ದೀಕ್ಷಿತ್ ಎನ್, ಮಾರ್ಗದರ್ಶಿ ಶಿಕ್ಷಕಿ ಶೃತಿ ಎ ಮತ್ತು ಟಿಜಿಟಿ ಶಿಕ್ಷಕ ನಿರಂಜನ ಎಮ್ ಜೆ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.