Home_Page_Advt
Home_Page_Advt
Home_Page_Advt
Breaking News

ಸವಣೂರು: ಶಾಂತಿನಗರದಲ್ಲಿ ರೋಝ್‌ವುಡ್ ಎಂಟರ್‌ಪ್ರೈಸಸ್ ಶುಭಾರಂಭ ಸವಣೂರಿನ ಸಮಗ್ರ ಅಭಿವೃದ್ಧಿಗೆ ಹೊಸ ಉದ್ಯಮಗಳು ಪೂರಕ-ಸೀತಾರಾಮ ರೈ

  • ಸವಣೂರು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ-ಇಂದಿರಾ ಬಿ.ಕೆ
  • ಉದ್ದಿಮೆಗಳಿಂದ ಉದ್ಯೋಗವಕಾಶ ಸೃಷ್ಠಿ-ಸತ್ಯಶಂಕರ ಭಟ್
  • ಜನರ ಪ್ರೀತಿಗಳಿಸುವ ಸಂಸ್ಥೆಯಾಗಿ ಬೆಳೆಯಲಿ-ದಿನೇಶ್ ಮೆದು
  • ಸವಣೂರು ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದೆ-ಅರ್ತಿಕೆರೆ
  • ಉದ್ಯಮಗಳಿಂದ ಊರು ಅಭಿವೃದ್ಧಿ-ನಾಗರಾಜ

 

 

ಪುತ್ತೂರು: ಪೀಠೋಪಕರಣಗಳ ಮತ್ತು ಮರದ ಕೆಲಸಗಳ `ರೋಝ್‌ವುಡ್ ಎಂಟರ್‌ಪ್ರೈಸಸ್’ ಸವಣೂರು ಸಮೀಪದ ಶಾಂತಿನಗರದಲ್ಲಿ ಮಾ.16ರಂದು ಶುಭಾರಂಭಗೊಂಡಿತು. ಚಾಪಳ್ಳ ಮಸೀದಿ ಗೌರವಾಧ್ಯಕ್ಷ ಸಯ್ಯದ್ ಹಾಮಿದುಲ್ ಹಾದಿ ತಂಙಳ್ ಮಂಜೇಶ್ವರ ದುವಾಶೀರ್ವಚನಗೈದು ಶುಭ ಹಾರೈಸಿದರು.

ಉದ್ಘಾಟಿಸಿದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು ಮಾತನಾಡಿ ಬೆಳೆಯುತ್ತಿರುವ ಸವಣೂರಿಗೆ ಹೊಸ ಉದ್ಯಮಗಳು ಬರುವಾಗ ಬಹಳ ಖುಷಿಯಾಗುತ್ತದೆ, ಇಲ್ಲಿ ಶುಭಾರಂಭಗೊಂಡ ರೋಝ್‌ವುಡ್ ಎಂಟರ್‌ಪ್ರೈಸಸ್ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ಉದ್ದಿಮೆಗಳಿಂದ ಉದ್ಯೋಗವಕಾಶ ಸೃಷ್ಠಿ-ಸತ್ಯಶಂಕರ ಭಟ್
ಯಂತ್ರೋಪಕರಣಗಳನ್ನು ಉದ್ಘಾಟಿಸಿದ ಪುರುಷರಕಟ್ಟೆ ಎಸ್.ಜಿ ಗ್ರೂಪ್ಸ್‌ನ ಆಡಳಿತ ನಿರ್ದೇಶಕ ಸತ್ಯಶಂಕರ ಭಟ್ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ದಿಮೆ ಪ್ರಾರಂಭಗೊಳ್ಳುವುದರಿಂದ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಠಿಯಾಗುತ್ತದೆ, ಉದ್ಯಮದಲ್ಲಿ ಸೋಲು-ಗೆಲುವು ಸಹಜ, ತಾಳ್ಮೆ ಮತ್ತು ಪ್ರೇರಣೆಯಿದ್ದಾಗ ಒಂದು ದಿನ ಯಶಸ್ಸು ಖಚಿತವಾಗಿ ಸಿಗುತ್ತದೆ ಎಂದು ಹೇಳಿದರು.

ಜನರ ಪ್ರೀತಿಗಳಿಸುವ ಸಂಸ್ಥೆಯಾಗಿ ಬೆಳೆಯಲಿ-ದಿನೇಶ್ ಮೆದು
ಎ.ಪಿ.ಎಂ.ಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ ಇಲ್ಲಿ ಶುಭಾರಂಭಗೊಂಡ ರೋಝ್‌ವುಡ್ ಎಂಟರ್‌ಪ್ರೈಸಸ್ ಜನರ ಪ್ರೀತಿಗಳಿಸುವ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು.

ಸಂಯುಕ್ತ ಜಮಾಅತ್ ಪುತ್ತೂರು ತಾಲೂಕು ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರ್ತಿಕೆರೆ ಮಾತನಾಡಿ ಸವಣೂರು ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದ್ದು ಸೀತಾರಾಮ ರೈ ಅವರು ಸವಣೂರು ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದು ಹೇಳಿದರು. ಸವಣೂರು ಮೆಸ್ಕಾಂ ಅಭಿಯಂತರರಾದ ನಾಗರಾಜ ಮಾತನಾಡಿ ಉದ್ಯಮಗಳು ಪ್ರಾರಂಭಗೊಳ್ಳುವುದರಿಂದ ಊರು ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ಸವಣೂರು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ-ಇಂದಿರಾ ಬಿ.ಕೆ
ಅಧ್ಯಕ್ಷತೆ ವಹಿಸಿದ ಸವಣೂರು ಗ್ರಾ.ಪಂ ಅಧ್ಯಕ್ಷೆ ಇಂದಿರಾ ಬಿ.ಕೆ ಮಾತನಾಡಿ ಸವಣೂರು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ, ಇಲ್ಲಿ ಶುಭಾರಂಭಗೊಂಡ ಸಂಸ್ಥೆಯು ಹೊಸತನಕ್ಕೆ ಆದ್ಯತೆ ನೀಡಬೇಕು, ಜನರಿಗೆ ಇಷ್ಟವಾದವುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು ಎಂದರು. ಲಾಭದ ಒಂದಂಶವನ್ನು ಬಡವರ ಶಿಕ್ಷಣಕ್ಕೆ, ಅನಾರೋಗ್ಯ ಪೀಡಿತರಿಗೆ, ಬಡವರಿಗೆ ನೀಡುವಂತಾಗಲಿ ಎಂದು ಹೇಳಿದರು.ಚಾಪಳ್ಳ ಮಸೀದಿ ಅಧ್ಯಕ್ಷ ಉಮರ್ ಹಾಜಿ ಕೆನರಾ, ಬಡಕ್ಕೋಡಿ ಮಸೀದಿ ಅಧ್ಯಕ್ಷ ಇಬ್ರಾಹಿಂ ಹಾಜಿ ಅರ್ತಿಕೆರೆ, ಡಾ.ಸುಬ್ರಹ್ಮಣ್ಯ ಭಟ್ ಹಾಗೂ ರೋಝ್‌ವುಡ್ ಎಂಟರ್‌ಪ್ರೈಸಸ್‌ನ ಮಾಲಕ ಇಬ್ರಾಹಿಂ ಗಡಿಪಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಲವಾರು ಮಂದಿ ಆಗಮಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.ಖಾಲಿದ್, ಮನ್ಸೂರ್, ಅಬೂಬಕ್ಕರ್, ನಝೀರ್ ಮುಂಡತ್ತಡ್ಕ, ಮೊಹಮ್ಮದ್ ಸುಹೈಲ್, ಗಫೂರ್, ಇಬ್ರಾಹಿಂ ಸಾಗರ್, ಎ.ಕೆ ರಝಾಕ್, ಇಬ್ರಾಹಿಂ ಅರ್ತಿಕೆರೆ ಹಾಗೂ ಹಂಝ ಅತಿಥಿಗಳನ್ನು ಗೌರವಿಸಿದರು. ರೋಝ್‌ವುಡ್ ಎಂಟರ್‌ಪ್ರೈಸಸ್‌ನ ಮಾಲಕ ಇಬ್ರಾಹಿಂ ಗಡಿಪಿಲ, ಪಾಲುದಾರರಾದ ನಝೀರ್ ಮುಂಡತ್ತಡ್ಕ, ಮಹಮ್ಮದ್ ಸುಹೈಲ್ ಮತ್ತಿತರರು ಅತಿಥಿಗಳನ್ನು ಸತ್ಕರಿಸಿದರು. ಸಾಮಾಜಿಕ ಕಾರ್ಯಕರ್ತ ಹೈದರಾಲಿ ಐವತ್ತೊಕ್ಲು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ರೋಝ್‌ವುಡ್ ಎಂಟರ್‌ಪ್ರೈಸಸ್‌ನಲ್ಲಿ ಪೀಠೋಪಕರಣಗಳ ಮತ್ತು ಮರದ ಕೆಲಸಗಳು ನಡೆಯಲಿದೆ. ಆಧುನಿಕ ಅಡುಗೆ ಮನೆಯ ವಿನ್ಯಾಸ, ಕಪಾಟು, ಸೋಪಾ ಸೆಟ್, ಒಳಾಂಗಣ ವಿನ್ಯಾಸಗಳ ಸೇವೆಗಳು ನಮ್ಮಲ್ಲಿ ಲಭ್ಯವಿದೆ. ಗ್ರಾಹಕರು ಸಹಕರಿಸಬೇಕಾಗಿ ವಿನಂತಿ-ಇಬ್ರಾಹಿಂ ಗಡಿಪಿಲ, ಮಾಲಕರು-ನಝೀರ್ ಮುಂಡತ್ತಡ್ಕ, ಮಹಮ್ಮದ್ ಸುಹೈಲ್(ಪಾಲುದಾರರು)

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.