Home_Page_Advt
Home_Page_Advt
Home_Page_Advt
Breaking News

ಕೊರೊನಾ ಹಿನ್ನಲೆ: ವಿದೇಶದಿಂದ ಆಗಮಿಸಿದ ಬೆಟ್ಟಂಪಾಡಿಯ ವ್ಯಕ್ತಿಯೋರ್ವರ ಮನೆಗೆ ತಹಶೀಲ್ದಾರ್, ಆರೋಗ್ಯಾಧಿಕಾರಿ ಭೇಟಿ

ಪುತ್ತೂರು: ವಿದೇಶದಿಂದ ಆಗಮಿಸಿದ ಬೆಟ್ಟಂಪಾಡಿಯ ವ್ಯಕ್ತಿಯೊಬ್ಬರ ಮನೆಗೆ ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಪುತ್ತೂರು ತಹಶೀಲ್ದಾರ್, ಕಂದಾಯ ಇಲಾಖೆ, ಗ್ರಾ.ಪಂ.ಅಧಿಕಾರಿಗಳು ಹಾಗೂ ಆಶಾಕಾರ್ಯಕರ್ತೆಯರು ಮಾ.20ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಗ್ಗೆ ವರದಿಯಾಗಿದೆ.

ಬೆಟ್ಟಂಪಾಡಿ ಗ್ರಾಮದ ಬೀಂತಡ್ಕ ನಿವಾಸಿಯೊಬ್ಬರು ಮಕ್ಕಾದಲ್ಲಿ ಉದ್ಯೋಗದಲ್ಲಿದ್ದು ಮಾ.೧೫ರಂದು ಮನೆಗೆ ಆಗಮಿಸಿದ್ದರು. ಮಕ್ಕಾದಿಂದ ವಿಮಾನ ಮೂಲಕ ಆಗಮಿಸಿದ ಇವರು ಕೇರಳದ ಕಣ್ಣೂರು ಜಿಲ್ಲೆಯ ವಿಮಾನ ನಿಲ್ದಾಣದಲ್ಲಿ ಕೊರೊನಾ ತಪಾಸಣೆಗೆ ಒಳಗಾಗಿ ಮನೆಗೆ ಆಗಮಿಸಿದ್ದರು. ಈ ಬಗ್ಗೆ ನೆರೆಹೊರೆಯ ಮನೆಯವರಿಂದ ಮಾಹಿತಿ ತಿಳಿದ ಆಶಾಕಾರ್ತೆಯರು ಬೆಟ್ಟಂಪಾಡಿ ಗ್ರಾ.ಪಂಗೆ ಮಾಹಿತಿ ನೀಡಿ ವ್ಯಕ್ತಿಯ ಮೆನೆಗೆ ತೆರಳಿ ಜಾಗ್ರತೆ ವಹಿಸುವಂತೆ ಮನವಿ ಮಾಡಿದ್ದರು. ಬಳಿಕ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು, ತಾಲೂಕು ಆರೋಗ್ಯಾಧಿಕಾರಿ ಅಶೋಕ್ ಕುಮಾರ್, ಬೆಟ್ಟಂಪಾಡಿ ಗ್ರಾಮ ಕರಣಿಕ ಕನಕರಾಜ್‌ರವರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ೧೪ ದಿನ ಆರೋಗ್ಯದ ಬಗ್ಗೆ ಗಮನ ಹರಿಸಬೇಕು.

ಅನಾರೋಗ್ಯ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಅಲ್ಲದೆ ಮನೆಯಿಂದ ಹೊರಗೆ ಬಾರದಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬೆಟ್ಟಂಪಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶಾಂತರಾಮ, ಕಾರ್ಯದರ್ಶಿ ಬಾಬು ನಾಯ್ಕ, ಉಪಾಧ್ಯಕ್ಷೆ ಭವಾನಿ, ಗ್ರಾಮ ಸಹಾಯಕ ವಿಜಯ ಪಾರ ಹಾಗೂ ಆಶಾಕಾರ್ಯಕರ್ತೆ ರಾಧಾ ಮಾಲಡ್ಕ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. Jayantha Nadubailu

    Stupidity. Mak will not save from corona. If that person is +ve . All who visited has to quarantined. I don’t to who these will spread by that time.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.