Home_Page_Advt
Home_Page_Advt
Breaking News

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಏಳ್ಮುಡಿ ನಿವಾಸಿ ಸ್ಟೆಲ್ಲಾ ಪಾಯಿಸ್ ನಿಧನ


ಪುತ್ತೂರು: ಹಲವು ಸಮಯಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಏಳ್ಮುಡಿ ನಿವಾಸಿ ಸ್ಟೆಲ್ಲಾ ಪಾಯಿಸ್(74ವ)ರವರು ಮಾ.23ರಂದು ಸ್ವಗೃಹದದಲ್ಲಿ ನಿಧನರಾದರು.

ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನ ನಿವೃತ್ತ ಅಧಿಕಾರಿಯಾಗಿದ್ದ ದಿ. ಮೈಕಲ್ ಪಾಯಿಸ್ ಅವರ ಪತ್ನಿಯಾಗಿದ್ದ ಸ್ಟೆಲ್ಲಾ ಪಾಯಿಸ್ ಅವರು ಹಲವು ಸಮಯಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಇತ್ತೀಚೆಗೆ ಮಂಗಳೂರಿನಲ್ಲಿ ಅವರಿಗೆ ಸರ್ಜರಿ ಮಾಡಲಾಗಿತ್ತು. ಈ ನಡುವೆ ಅವರು ಚೇತರಿಕೆಗೊಂಡು  ಮನೆಯಲ್ಲೇ ಆರೈಕೆ ಪಡೆಯುತ್ತಿದ್ದು ಇದೀಗ ಅವರು ಮೃತಪಟ್ಟಿದ್ದಾರೆ. ಮೃತರು ಮಂಗಳೂರಿನಲ್ಲಿ ಉದ್ಯಮಿಯಾಗಿರುವ ಮನೋಜ್ ಪಾಯಿಸ್, ವಿದೇಶದಲ್ಲಿರುವ ವಿನೋದ್ ಪಾಯಿಸ್ ಮತ್ತು ಸುಧೀರ್ ಪಾಯಿಸ್, ಪುತ್ತೂರಿನಲ್ಲಿ ಎರಡು ಪೆಟ್ರೋಲ್ ಪಂಪ್ ನಡೆಸುತ್ತಿರುವ ರಿತೇಶ್ ಪಾಯಿಸ್ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಮಾ.24 ರಂದು ಸಂಜೆ ಪುತ್ತೂರು ಏಳ್ಮುಡಿ ಸಿಮೆತರಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.