Home_Page_Advt
Home_Page_Advt
Breaking News

ಸಾಲೆತ್ತೂರಿನಲ್ಲಿ ಹಾಲು, ಪತ್ರಿಕಾ ಏಜೆಂಟ್‍ಗೆ ಹಲ್ಲೆ ಆರೋಪ: ವಿಟ್ಲ ಎಸ್.ಐ ವಿನೋದ್ ರೆಡ್ಡಿ ವಿರುದ್ಧ ಡಿವೈಎಸ್ಪಿಗೆ ದೂರು

  • ನಾನ್ಯಾರಿಗೂ ಹಲ್ಲೆ ನಡೆಸಿಲ್ಲ, ನನ್ನ ಕರ್ತವ್ಯವನ್ನು ಪಾಲಿಸಿದ್ದೇನೆ ಎಸ್ ಐ ಸ್ಪಷ್ಟನೆ

ವಿಟ್ಲ: ಪತ್ರಿಕೆ ಹಾಗೂ ಹಾಲು ಮಾರಾಟಕ್ಕೆ ಕರ್ಫ್ಯೂನಿಂದ ವಿನಾಯಿತಿ ಇದ್ದರು ವಿಟ್ಲ ಪೋಲೀಸ್ ಠಾಣಾ ಎಸ್.ಐ ವಿನೋದ್ ರೆಡ್ಡಿಯವರರು ಅಂಗಡಿಯೊಳಗೆ ಏಕಾಏಕಿಯಾಗಿ ನುಗ್ಗಿ ತನಗೆ ಹಾಗೂ ನನ್ನ ಅಂಗಡಿಯ ಸಿಬಂದಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಾಲೆತ್ತೂರಿನ ಹಾಲು ಮತ್ತು ಪತ್ರಿಕಾ ಏಜೆಂಟ್ ರೊಬ್ಬರು ಬಂಟ್ವಾಳ ಡಿವೈಎಸ್ಪಿರವರಿಗೆ ದೂರು ನೀಡಿದ್ದಾರೆ.

ಸಾಲೆತ್ತೂರು ಗ್ರಾ.ಪಂನ ನಾಟೆಕಲ್ಲು ನಿವಾಸಿ ಅಬ್ದುಲ್ಲರವರ ಪುತ್ರ, ಸಾಲೆತ್ತೂರಿನ ನಾಬ್ ಮಿಲ್ಕ್ ಪಾರ್ಲರ್ ಮಾಲಕ ಶಿಖಂದರ್ ಬಾತಿಶ್ ರವರು ದೂರು ನೀಡಿದವರಾಗಿದ್ದು, ಮಾ.23ರಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ಸಿಬಂದಿಗಳ ಜೊತೆ ಆಗಮಿಸಿದ ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರು ಏಕಾಏಕಿ ಅಂಗಡಿಯೊಳಗೆ ನುಗ್ಗಿ ನಮ್ಮ ಅಂಗಡಿಯ ಸಿಬಂದಿ ನವಾಝ್‍ನನ್ನು ಅಂಗಡಿಯಿಂದ ಹೊರೆಗೆ ಎಳೆದು ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ನಾನು ಅವನು‌ ನಮ್ಮ ಸಂಸ್ಥೆಯ ಸಿಬಂದಿ ಅವನಿಗೆ ಯಾಕೆ ಹಲ್ಲೆ ನಡೆಸುತ್ತಿದ್ದೀರಿ ಎಂದು ವಿಚಾರಿಸುತ್ತಿದ್ದಂತೆ  ನನ್ನ ಅಂಗಿಯ ಕಾಲರ್ ಪಟ್ಟಿ ಹಿಡಿದು ನಮ್ಮಿಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಕಿವಿಯ ಭಾಗಕ್ಕೆ ಭಲವಾದ ಹೊಡೆತ ನೀಡಿದ್ದಾರೆ. ಇದರಿಂದ ನನಗೆ ಗಾಯವಾಗಿದೆ.

ನನ್ನ ತಮ್ಮ ಇರ್ಫಾನ್ ಹೆಸರಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತ್‍ನಿಂದ ಪರವಾನಿಗೆ ಪಡೆದು ಸಾಲೆತ್ತೂರಿನಲ್ಲಿ ಹಲವು ವರ್ಷಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳು ಹಾಗೂ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದೇವೆ. ನಂದಿನಿ ಹಾಲಿನ ಸಂಸ್ಥೆಯ ಅಧಿಕೃತ ಪರವಾನಿಗೆ ಇರುವ ಏಜೆಂಟ್ ನಾವಾಗಿದ್ದೇವೆ. ಕೊರೋನ ವೈರಸ್ ತಡೆಗೆ ರಾಜ್ಯದಲ್ಲಿ ಲಾಕ್‍ಡೌನ್ ಘೋಷಿಸಲಾಗಿದೆ. ಆದರೆ ದಿನ ಬಳಕೆಯ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಇದ್ದು ಈ ಬಗ್ಗೆ ಜಿಲ್ಲಾಧಿಕಾರಿಯ ಆದೇಶವೂ ಇದೆ. ಪತ್ರಿಕೆ ಹಾಗೂ ಹಾಲು ದಿನ ಬಳಕೆಯ ವಸ್ತುಗಳೆಂದು ಘೋಷಿಸಿಲಾಗಿದ್ದು ಅದರಂತೆ ನಾವು ಬೆಳಗ್ಗೆಯಿಂದ ಅಂಗಡಿ ತೆರದು ಹಾಲು ಮತ್ತು ಪತ್ರಿಕೆ ಮಾರಾಟ ಮಾಡುತ್ತಿದ್ದೆವು. ಅಂಗಡಿಗೆ ನುಗ್ಗಿರುವ ಎಸ್ ಐ ವಿನೋದ್ ರೆಡ್ಡಿ ರವರು ಅಂಗಡಿ ಬಂದ್ ಮಾಡಲೂ ಅವಕಾಶ ನೀಡದೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಅಂಗಡಿಯ ಸಿಸಿ ಕೆಮರಾದಲ್ಲಿ ದೃಶ್ಯಾವಳಿಗಳು ದಾಖಲಾಗಿದೆ. ಹಲ್ಲೆ ನಡೆಸಿದ ಎಸ್ ಐ ವಿನೋದ್ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ಡಿವೈಎಸ್ ಪಿ ರವರಿಗೆ‌ ನೀಡಿದ‌ ದೂರಿನಲ್ಲಿ ವಿವರಿಸಿದ್ದಾರೆ.

ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ
ನಾವ್ಯಾರೊಂದಿಗೂ ಧ್ವೇಷ ಸಾಧನೆಗೆ ಇಳಿದಿಲ್ಲ, ನಮ್ಮ ದೇಶದ ಜನರ ಆರೋಗ್ಯದ ಹಿತದೃಷ್ಠಿಯಿಂದ ಸರಕಾರ ಹೊರಡಿಸಿರುವ ಆದೇಶದಂತೆ ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇಂತಹ ಸಮಯದಲ್ಲಿ ಜನರು ನಮ್ಮೊಂದಿಗೆ ಸಹಕರಿಸಬೇಕು, ನಾವು ಹೇಳುತ್ತಿರುವುದು ಅವರ ಒಳ್ಳೆಯದಕ್ಕಾಗಿ ಹೊರತು ನಮ್ಮ ಸ್ವಾರ್ಥಕ್ಕಾಗಿ ಅಲ್ಲ. ನಿನ್ನೆ ಅಷ್ಟೆ ಬೆಳಗ್ಗಿನಿಂದ ನಮ್ಮ ಠಾಣಾ ವ್ಯಾಪ್ತಿಯ ಹೆಚ್ಚಿನ ಕಡೆಗಳಲ್ಲಿ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸುತ್ತಿದ್ದರು. ನಾವು ಎಲ್ಲಾ ಕಡೆಗಳಿಗೂ ತೆರಳಿ ಅಂಗಡಿಗಳನ್ನು ಮುಚ್ಚುಗಡೆಗೊಳಿಸಿದ್ದೇವೆ. ಸಾಲೆತ್ತೂರಿನಲ್ಲು ನಡೆದಿರುವುದಷ್ಟೆ. ಅಲ್ಲಿನ ಅಂಗಡಿಗಳನ್ನು ಮುಚ್ಚುವಂತೆ ಎಲ್ಲರಲ್ಲೂ ಕೇಳಿಕೊಂಡೆವು. ಆದರೆ ನಮ್ಮ ಮಾತಿಗೆ ಬೆಲೆ ಕೊಡದೆ ಶಿಖಂದರ್ ಬಾತಿಷ್ ಅನ್ನುವವರ ಅಂಗಡಿ ತೆರೆದುಕೊಂಡೇ ಇತ್ತು. ಇದರಿಂದಾಗಿ ಅವನ‌ ಅಂಗಡಿ ಬಳಿ ತೆರಳಿ ಆತನನ್ನು ಗದರಿಸಿ ಅಂಗಡಿ ಬಾಗಿಲು ಹಾಕುವಂತೆ ಹೇಳಿದ್ದೇನೆ ಆದರೆ ನಾನ್ಯಾರಿಗೂ ಹಲ್ಲೆ ನಡೆಸಿಲ್ಲ. ಇನ್ನು ಮುಂದಿನ ದಿನಗಳಲ್ಲಿಯೂ ಸಾರ್ವಜನಿಕರು ಕಾನೂನನ್ನು ಪಾಲಿಸಿಕೊಂಡು ನಮ್ಮೊಂದಿಗೆ ಸಹಕರಿಸಿ. ಕಾನೂನನ್ನು ಕೈಗೆತ್ತಿಕೊಂಡರೆ ಯಾರನ್ನೂ ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ – ವಿನೋದ್ ರೆಡ್ಡಿ ಎಸ್.ಐ ವಿಟ್ಲ ಪೊಲೀಸ್ ಠಾಣೆ

ಕಾನೂನಿಗೆ ತಲೆಬಾಗುತ್ತೇವೆ. ಆದರೆ ಎಸ್.ಐ ಯವರ ವರ್ತನೆ‌ ಸರಿಯಲ್ಲ
ಕಾನೂನಿಗೆ ನಾವು ತಲೆ ಬಾಗುತ್ತೇವೆ. ನಾವು ಸರಕಾರದ ಪ್ರತಿಯೊಂದೂ ಆದೇಶಗಳನ್ನು ಪಾಲಿಸಿಕೊಂಡು ಬಂದವರು. ಕರ್ಫ್ಯೂನಲ್ಲಿ ಹಾಲು ಹಾಗೂ ಪತ್ರಿಕೆ ಮಾರಾಟದ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಾನು ಈ ಭಾಗದ ಜನರಿಗೆ ಸಹಕಾರಿಯಾಗಲೆಂದು ಅಂಗಡಿ ತೆರೆದಿದ್ದೆ‌. ನಮ್ಮ ಅಂಗಡಿ‌ ಮಾತ್ರವಲ್ಲ ಸಾಲೆತ್ತೂರಿನಲ್ಲಿ ಹೆಚ್ಚಿನ ಅಂಗಡಿ ಬಾಗಿಲು ತೆರೆದಿದ್ದವು. ಪೊಲೀಸರು ಬಂದು ಬಂದ್ ಮಾಡುವಂತೆ ಸೂಚಿಸಿದ್ದರೆ ನಾವು‌ ಮಾಡುತ್ತಿದ್ದೆವು. ಆದರೆ ಏಕಾಏಕಿಯಾಗಿ ಅವರು ಅಂಗಡಿಗೆ ಬಂದು ನಮ್ಮ ಮೇಲೆ ಹಲ್ಲೆ ನಡೆಸಿರುವುದು ಅಷ್ಟೊಂದು ಉತ್ತಮ ಬೆಳವಣಿಗೆಯಲ್ಲ – ಶಿಖಂದರ್ ಬಾತಿಶ್ ಅಂಗಡಿ ಮಾಲಕರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.