Home_Page_Advt
Home_Page_Advt
Home_Page_Advt
Breaking News

3ನೇ ದಿನಕ್ಕೆ ಕಾಲಿಟ್ಟ ಲಾಕ್‌ಡೌನ್ – ದಿನಸಿ, ಹಾಲು, ಮೆಡಿಕಲ್ ಶಾಪ್‌ಗಳಲ್ಲಿ ಮುಗಿಬಿದ್ದ ಜನರು -ಅಗತ್ಯ ವಸ್ತುಗಳಿಗೆ ಹೊರತು ಪಡಿಸಿ, ಉಳಿದವುಗಳಿಗೆ ನಿರ್ಬಂಧ

ಜೀವನವಶ್ಯಕ ವಸ್ತುಗಳ ಖರೀದಿಗೆ ಆತಂಕ ಬೇಡ – ಜಿಲ್ಲಾಧಿಕಾರಿ ಟ್ವೀಟ್

ಪೇಟೆ, ಗ್ರಾಮಾಂತರದ ಸಣ್ಣಪುಟ್ಟ ದಿನಸಿ ಅಂಗಡಿಗಳಲ್ಲಿ ಸಾಮಾಗ್ರಿಗಳ ಕೊರತೆ
ಹಳ್ಳಿಯಿಂದ ಪೇಟೆ ಕಡೆ ಮುಖ ಮಾಡಿದ ಜನತೆ !

ಪುತ್ತೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ೨೧ ದಿನಗಳ ಕಾಲ ದೇಶದಾದ್ಯಂತ `ಲಾಕ್‌ಡೌನ್’ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಮಾ.೨೪ರ ರಾತ್ರಿ ಘೊಷಣೆ ಮಾಡಿದ್ದೇ ತಡ ಮಾ.25ರಂದು ಬೆಳ್ಳಂ ಬೆಳಗ್ಗೆ ಜನರು ದಿನಸಿ ಅಂಗಡಿಗಳ ಬಾಗಿಲು ತೆರೆಯುವ ಮುಂದೆಯೇ ಅಂಗಡಿ ಮುಂದೆ ಜಮಾಯಿಸಿದ್ದರು.

ಏಪ್ರಿಲ್ ೧೪ರ ತನಕ ದೇಶದೆಲ್ಲೆಡೆ ಲಾಕ್‌ಡೌನ್ ಮಾಡಿದ್ದರೂ ಜನಸಾಮಾನ್ಯರಿಗೆ ದೈನಂದಿನ ಜೀವನಕ್ಕೆ ತೊಂದರೆಯಾಗದಂತೆ ಅಗತ್ಯ ವಸ್ತುಗಳ ಖರೀದಿ ಕುರಿತು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶ ಮುಂದುವರಿಯಲಿದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಮ್.ಲಕ್ಷ್ಮೀಪ್ರಸಾದ್ ಅವರು ಪತ್ರಿಕಾ ಮಾದ್ಯಮದ ಮೂಲಕ ತಿಳಿಸಿದ್ದರೂ ಜನರು ಬೆಳಗ್ಗಿನಿಂದಲೇ ದಿನಸು ಅಂಗಡಿಗಳ ಮುಂದೆ ಜಮಾಯಿಸಿದ್ದರು. ಈ ನಡುವೆ ಪೇಟೆಯಲ್ಲಿ ಮತ್ತು ಗ್ರಾಮಾಂತರ ಪ್ರದೇಶದಲ್ಲಿರುವ ಸಣ್ಣಪುಟ್ಟ ದಿನಸಿ ಅಂಗಡಿಗಳಲ್ಲಿ ಸಾಮಾಗ್ರಿಗಳ ಕೊರತೆಯೂ ಕಂಡು ಬಂತು. ಹಳ್ಳಿ ಪ್ರದೇಶದ ಜನರು ಪೇಟೆಯ ಕಡೆ ಮುಖ ಮಾಡಿದ ಮತ್ತು ಅವರು ಪೇಟೆಗೆ ತಲುಪುತ್ತಲೇ ಮಧ್ಯಾಹ್ನದ 12 ಗಂಟೆ ಗಡು ಸಮೀಪಿಸಿದ್ದರಿಂದ ಪೇಟೆ ಎಂಟ್ರಿಗೆ ಅವಕಾಶ ವಂಚಿತರಾಗಿ ಹಿಂದಕ್ಕೆ ಹೋದ ಘಟನೆಯೂ ನಡೆಯಿತು.

ತುರ್ತು ಸೇವೆಗೆ ವಿನಾಯಿತಿ:
ಮುಂಜಾನೆ ಗಂಟೆ 6 ರಿಂದ 12 ಗಂಟೆಯ ತನಕ ಅಗತ್ಯವಸ್ತುಗಳ ಖರೀದಿಗೆ ಅವಕಾಶದ ಬಳಿಕ ಗಂಟೆ 11.30 ಆಗುತ್ತಿದ್ದಂತೆ ವಾಹನಗಳ ಅನಗತ್ಯ ಪ್ರವೇಶಗಳಿಗೆ ಪೊಲೀಸರು ಸಂಪೂರ್ಣ ತಡೆ ಹಾಕಿದರು. ಈ ನಡುವೆ ತುರ್ತು ಸೇವೆಗೆ ವಿನಾಯಿತಿಯೂ ನೀಡಿದರು. ಪುತ್ತೂರು ನಗರಸಭೆ ಪ್ರವೇಶದ ದರ್ಬೆ ವೃತ್ತದಲ್ಲಿ ಕಾಣಿಯೂರು, ಕುಂಬ್ರ ಭಾಗಗಳಿಂದ ಬರುತ್ತಿದ್ದ ಎಲ್ಲಾ ವಾಹನಗಳನ್ನು ಪರಿಶೀಲಿಸಿ ಅಗತ್ಯವೆಂದು ಕಂಡು ಬಂದರೆ ಮಾತ್ರ ನಗರ ಪ್ರವೇಶಕ್ಕೆ ಅನುಮತಿ ನೀಡಿದರು. ಕೆಮ್ಮಾಯಿ, ಕಬಕ, ಹಾರಾಡಿ, ಪಡೀಲು, ಸಾಲ್ಮರ ಸೇರಿದಂತೆ ಹಲವು ಕಡೆಗಳಲ್ಲಿ ಅನಗತ್ಯ ವಾಹನಗಳ ಓಡಾಟಕ್ಕೆ ಅವಕಾಶ ನೀಡಿಲ್ಲ.

ದಿನಸಿ ಸಾಮಾಗ್ರಿಗಾಗಿ ಸರಥಿ ಸಾಲಿನಲ್ಲಿ ನಿಲ್ಲಬೇಕಾಯಿತು:
ದಿನಸಿ ಸಾಮಾಗ್ರಿಗಳಾಗಿ ಕೆಲವೊಂದು ದಿನಸಿ ಅಂಗಡಿಗಳಲ್ಲಿ ಮತ್ತು ಮೆಡಿಕಲ್ ಶಾಪ್‌ಗಳಲ್ಲಿ ಸರಥಿ ಸಾಲಿನಲ್ಲಿ ನಿಂತು ತಮಗೆ ಬೇಕಾದ ಸಾಮಾಗ್ರಿ ಪಡೆಯುತ್ತಿರುವುದು ಕಂಡು ಬಂತ್ತು. ಇಲ್ಲಿನ ಎಪಿಎಂಸಿ, ಮುಖ್ಯರಸ್ತೆ, ದರ್ಬೆ, ಬೊಳುವಾರು ಕಡೆಗಳಲ್ಲಿ ದಿನಸಿ ಸಾಮಾಗ್ರಿಗಳಾಗಿ ಗ್ರಾಹಕರು ಸರಥಿ ಸಾಲಿನಲ್ಲಿ ನಿಂತರು.

ಗೂಡ್ಸ್ ವಾಹನಗಳ ಸರಥಿ ಸಾಲು:
ಬಹುತೇಕ ಮನೆಗಳಿಗೆ ಹೋಮ್ ಡೆಲಿವರಿ ಮತ್ತು ಗ್ರಾಮೀಣ ಪ್ರದೇಶಕ್ಕೆ ವಸ್ತುಗಳನ್ನು ಸರಬರಾಜು ಮಾಡುವ ಗೂಡ್ಸ್ ವಾಹನಗಳು ಹೋಲ್‌ಸೇಲ್ ಅಂಗಡಿಗಳ ಮುಂದೆ ಸರಥಿ ಸಾಲಿನಲ್ಲಿ ನಿಂತು ಕೊಂಡಿತ್ತು.

ಮೈಕಾ ಅನೌನ್ಸ್:
ಬೆಳಗ್ಗೆ ಗಂಟೆ 6 ರಿಂದ ಮಧ್ಯಾಹ್ನ ಗಂಟೆ 12 ರ ತನಕ ದಿನಸಿ ಮತ್ತು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು ಬಳಿಕ ಅಂಗಡಿಗಳನ್ನು ಬಂದ್ ಮಾಡುವಂತೆ ಮತ್ತು ಜನರು ಮನೆಗೆ ಹೋಗುವಂತೆ ನಗರಸಭೆ ಮತ್ತು ಪೊಲೀಸ್ ಇಲಾಖೆ ಕಡೆಯಿಂದ ವಾಹನದಲ್ಲಿ ಅನೌನ್ಸ್‌ಮೆಂಟ್‌ನ್ನು ಆಗಾಗೆ ಪೇಟೆಯಲ್ಲಿ ಮಾಡುತ್ತಿದ್ದರು.

ಜೀವನವಶ್ಯಕ ವಸ್ತುಗಳ ಖರೀದಿಗೆ ಆತಂಕ ಬೇಡ
ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ ಗಂಟೆ 12 ಗಂಟೆಯ ತನಕ ಜೀವನಶ್ಯವಕ ವಸ್ತುಗಳ ಖರೀದಿಗೆ ಯಾವುದೇ ಆತಂಕ ಬೇಡ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಟ್ವೀಟ್ ಮಾಡಿದ್ದಾರೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.