Home_Page_Advt
Home_Page_Advt
Home_Page_Advt
Breaking News

ಊಟದ ವ್ಯವಸ್ಥೆ ಮತ್ತು ತುರ್ತು ರಕ್ತದ ಪೂರೈಕೆಗೆ ಸಂಪರ್ಕಿಸಿ: ಪುತ್ತೂರು ಯಂಗ್ ಬಿಗ್ರೇಡ್, ಎಸ್ಸೆಸ್ಸೆಫ್ ಬ್ಲಡ್ ಸೈಬೊ, ಎಸ್ಕೆಎಸ್ಸೆಸ್ಸೆಫ್‌ನಿಂದ ಸಾಮಾಜಿಕ ಸ್ಪಂದನೆ

ಪುತ್ತೂರು: ಕೊರೋನಾ ವೈರಸ್‌ನಿಂದಾಗಿ ಸಾಕಷ್ಟು ಸಾವು-ನೋವುಗಳು ಸಂಭವಿಸುತ್ತಿದ್ದು, ಈ ನಿಟ್ಟಿನಲ್ಲಿ ದೇಶ, ರಾಜ್ಯಗಳು ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇನ್ನು 31ದಿನ ದೇಶ ವ್ಯಾಪಿ ಲಾಕ್‌ಡೌನ್ ಆಗಿರುವುದರಿಂದ ಸಂಪೂರ್ಣವಾಗಿ ಸ್ತಬ್ಧಗೊಂದಿದೆ. ಆದರೆ ಇದೀಗ ಕೆಲವೊಂದು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ, ಆಸ್ಪತ್ರೆಯಲ್ಲಿರುವ ರೋಗಿಗಳ ಸಹಾಯಕರಿಗೆ, ಹೊರ ಊರಿನಿಂದ ಬಂದವರಿಗೆ ಮತ್ತು ರಸ್ತೆಯ ಬದಿಯಲ್ಲಿರುವ ಅಶಕ್ತರಿಗೆ ಊಟ, ರೇಶನ್, ರಕ್ತದ ಅಗತ್ಯಗಳು ಕಂಡು ಬಂದಾಗ ಪೂರೈಸಲು ತಾಲೂಕಿನ ಸಾಮಾಜಿಕ ಸಂಘಟನೆಗಳು ಸೇವೆಗಾಗಿ ಮುಂದೆಬಂದಿದೆ.

ಯಂಗ್ ಬ್ರಿಗೇಡ್ ಸೇವಾದಳದಿಂದ ಮಧ್ಯಾಹ್ನ ಊಟದ ಪೂರೈಕೆ:
ಕೊರೋನಾ ವೈರಸ್‌ನ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗಾಗಲೇ ಮಾ.23ರಿಂದ ಲಾಕ್‌ಡೌನ್‌ಗೆ ಅದೇಶವನ್ನು ನೀಡಿದ್ದು ಇದರಿಂದಾಗಿ ಪುತ್ತೂರು ನಗರದಲ್ಲಿ ಹೋಟೆಲ್ ಅಂಗಡಿಗಳು ಬಂದ್ ಇರುವುದರಿಂದ ಹೊರ ಊರಿನಿಂದ ಬಂದಂತಹ ವ್ಯಕ್ತಿಗಳು ಅಥವಾ ಅಸ್ಪತ್ರೆಯಲ್ಲಿರುವ ರೋಗಿಗಳ ಸಹಾಯಕರಿಗೆ ಮತ್ತು ಅಶಕ್ತರಿಗೆ ಮಧ್ಯಾಹ್ನದ ಊಟಕ್ಕಾಗಿ ಅಲೆದಾಡುವ ಸನ್ನಿವೇಶಗಳು ಎದುರಾಗಬಾರದೆಂಬ ಸದುದ್ದೇಶದಿಂದ ಪುತ್ತೂರಿನ ಯಂಗ್ ಬ್ರಿಗೇಡ್ ಸೇವಾದಳದಿಂದ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಸರಕಾರಿ ಆಸ್ಪತ್ರೆ, ಚೇತನಾ ಆಸ್ಪತ್ರೆಯಲ್ಲಿರುವ ರೋಗಿಗಳ ಸಹಾಯಕರಿಗೆ, ನಗರ ಬೀದಿಯಲ್ಲಿದ್ದ ಅಶಕ್ತರಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು.

ಊಟದ ಅವಶ್ಯಕತೆಯಿರುವವರು ಪೂರ್ವಾಹ್ನ 11 ಗಂಟೆಯ ಮುಂಚಿತವಾಗಿ 9483775780, 9148733095, 9481549128, 9743671745 ಕ್ಕೆ ಕರೆ ಮಾಡಬಹುದಾಗಿದೆ. ಮಾ.24ರಂದು 45 ಮಂದಿಗಳು ಕರೆ ಮಾಡಿದ್ದು ಮುಂದಿನ ದಿನಗಳು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುದು ಎಂದು ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜೀತ್ ಬಂಗೇರ ತಿಳಿಸಿದ್ದಾರೆ.

ಎಸ್ಸೆಸ್ಸೆಫ್ ಬ್ಲಡ್ ಸೈಬೋದಿಂದ ರಕ್ತದ ಪೂರೈಕೆ:
ಲಾಕ್‌ಡೌನ್ ರಾಜ್ಯಾದ್ಯಾಂತ ವಿಸ್ತರಿಸಿದ್ದ ಹಿನ್ನಲೆಯಲ್ಲಿ ಪುತ್ತೂರಿನ ಅಸುಪಾಸಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ರಕ್ತದ ಅಗತ್ಯ ಕಂಡು ಬಂದಲ್ಲಿ ಅತೀ ಶೀಘ್ರವಾಗಿ ರಕ್ತದ ಪೂರೈಕೆಗಾಗಿ ದ.ಕ ಜಿಲ್ಲಾ ಎಸ್ಸೆಸ್ಸೆಫ್ ಬ್ಲಡ್ ಸೈಬೊದ ಪುತ್ತೂರು ಡಿವಿಷನ್‌ನ ರಕ್ತದಾನಿಗಳು 24*7 ತನ್ನ ಸೇವೆಯಲ್ಲಿರುತ್ತಾರೆ. ರೋಗಿಗಳಿಗೆ ರಕ್ತದ ಅವಶ್ಯಕತೆ ಬಂದಲ್ಲಿ 9945104217, 9731129491, 9591273693,  9900296099 ಗೆ ಸಂಪರ್ಕಿಸಬಹುದಾಗಿದೆ. ಮಾ.24ರಂದು ರಕ್ತದ ಅವಶ್ಯಕತೆಗೆ ಕರೆ ಬಂದಿದ್ದು ಪೂರೈಕೆಯ ಕಾರ್ಯ ನಡೆದಿದೆ. ಲಾಕ್‌ಡೌನ್ ಮಾ.30ರವರೆಗೆ ಇರುವುದರಿಂದ ಡಿವಿಷನ್‌ನ ಬ್ಲಡ್ ಸೈಬೊದ ಕಾರ್ಯಕರ್ತರು ಸಮಾಜಸೇವೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಕೈಜೋಡಿಸಲಿದ್ದೇವೆ ಎಂದು ಎಸ್ಸೆಸ್ಸೆಫ್ ಪುತ್ತೂರು ಡಿವಿಜನ್ ಬ್ಲಡ್ ಸೈಬೊ ಉಸ್ತುವಾರಿ ಮುಹಮ್ಮದ್ ಹಾರೀಶ್ ಅಡ್ಕ ತಿಳಿಸಿದ್ದಾರೆ.

ಪುತ್ತೂರು ವಿಖಾಯದಿಂದ ರೇಶನ್ ವಿತರಣೆ:
ತುರ್ತು ಸೇವೆಗಾಗಿ ಎಸ್ಕೆಎಸ್ಸೆಸ್ಸೆಫ್ ಪುತ್ತೂರು ವಿಖಾಯ ವಲಯದ ತಂಡವು ಪುತ್ತೂರು ವ್ಯಾಪ್ತಿಯಲ್ಲಿ ಮಾ.31ರವರೆಗೆ ಸಾರ್ವಜನಿಕರಿಗೆ ತಕ್ಷಣಕ್ಕೆ ಸ್ಪಂದಿಸುವಂತೆ ಕಾರ್ಯಕರ್ತರೂ ಸನ್ನದ್ಧರಾಗಿದ್ದಾರೆ. ಲಾಕ್‌ಡೌನ್ ನಗರದಲ್ಲಿರುವುದರಿಂದ ಹಲವು ಕಡೆ ಚೆಕ್‌ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಬಕ, ದರ್ಬೆ ಯಲ್ಲಿರುವ ಪೊಲೀಸರಿಗೆ ಮಧ್ಯಾಹ್ನ ವೇಳೆಯ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಯಾವುದೇ ತುರ್ತು ಸಂಧರ್ಭದಲ್ಲಿಯೂ ಆಗತ್ಯ ವಸ್ತುಗಳ ಪೂರೈಕೆಯನ್ನು ಮಾಡಲು ವಿಖಾಯ ತಂಡವು ಸಜ್ಜಾಗಿದೆ ತಂಡದ ಪ್ರಮುಖರು ತಿಳಿಸಿದ್ದಾರೆ. 5 ಅರ್ಹ ಬಡ ಕುಟುಂಬಗಳಿಗೆ ವಿಖಾಯದಿಂದ ಬೇಕಾಗುವ ಅಗತ್ಯ ರೇಶನ್‌ನನ್ನು ವಿತರಿಸಲಾಯಿತು. ಆಗತ್ಯ ಸಂದರ್ಭಗಳಲ್ಲಿ 9448887579, 9740060386,  7899216640, 7019417497,  7899583201,  9844025945 ಕ್ಕೆ ಕರೆ ಮಾಡಬಹುದೆಂದು ತಿಳಿಸಿದ್ದಾರೆ.

ಕೊರೋನಾದ ಮಹಾಭೀತಿಯಿಂದಾಗಿ ಈಗಾಗಲೇ ಲಾಕ್‌ಡೌನ್‌ನಿಂದಾಗಿ ಸಾರ್ವಜನಿಕರಿಗೆ ಮತ್ತು ಪೊಲೀಸರಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಈಗಾಗಲೇ ಎಸ್ಕೆಎಸ್ಸೆಸ್ಸೆಫ್‌ನ ಪುತ್ತೂರು ವಲಯದ ವಿಖಾಯ ತಂಡವು ಮಾ.31ರವರೆಗೆ ಸೂಕ್ತ ಕ್ರಮಗಳೊಂದಿಗೆ ಕಾರ್ಯನಿರ್ವಹಿಸಲಿದೆ. ಮಾ.24ರಂದು ಲಾಕ್‌ಡೌನ್ ನಿಮಿತ್ತ ಕರ್ತವ್ಯ ನಿರ್ವಹಿಸಿದ್ದ ಪೊಲೀಸರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮತ್ತು ಡಯಾಲಿಸಸ್‌ನ ಚಿಕಿತ್ಸೆಗಾಗಿ ಒರ್ವ ವ್ಯಕ್ತಿಗೆ ಅಂಬುಲೆನ್ಸ್‌ನ ಖರ್ಚಿನ ವ್ಯವಸ್ಥೆಯನ್ನು ಮಾಡಲಾಯಿತು. ಮಾ.೩೧ರವರೆಗೆ ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳೊಂದಿಗೆ ಜೊತೆ ಸೇರಿ ಸೇವೆ ಸಲ್ಲಿಸಲಿದ್ದೇವೆಆಸಿಫ್ ಕಬಕ ಕಾರ್ಯದರ್ಶಿ, ವಿಖಾಯ ಪುತ್ತೂರು ವಲಯ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.