Home_Page_Advt
Home_Page_Advt
Breaking News

ಸಾರ್ವಜನಿಕರೇ.. ಮಾಸ್ಕ್ ಧರಿಸದೇ ಹೊರ ಬರಬೇಡಿ..!

ಪುತ್ತೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಭಾರತ ಲಾಕ್ ಡೌನ್ ನ ಎರಡನೇ ದಿನವಾದ ಮಾ. 26 ರಂದು ಪುತ್ತೂರಿನಲ್ಲಿ ಪೊಲೀಸರಿಂದ ನೂತನ ಕಾರ್ಯಾಚರಣೆ ನಡೆದಿದೆ. ಅಗತ್ಯ ಸಾಮಾಗ್ರಿಗಳಿಗೆ ಹೊರಬರುವ ಸಾರ್ವಜನಿಕರು ಮಾಸ್ಕ್ ಧರಿಸದೇ ಹೊರಬರುವಂತಿಲ್ಲ. ಮೆಡಿಕೇರ್ ಮಾಸ್ಕ್ ಇಲ್ಲದಿದ್ದರೂ ಕರವಸ್ತ್ರ ಧರಿಸಿಯಾದರೂ ಸಂಚರಿಸಬೇಕು. ದರ್ಬೆ ವೃತ್ತದ ಬಳಿ ಸರ್ಕಲ್ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ರವರ ನೇತೃತ್ವದಲ್ಲಿ ಪೊಲೀಸರು ಬಿಗಿ ಕಾರ್ಯಾಚರಣೆ ಯಲ್ಲಿ ತೊಡಗುದ್ದಾರೆ. ಮಾಸ್ಕ್ ಧರಿಸದೆ ಯಾವೊಂದು ವಾಹನಗಳನ್ನೂ ಬಿಡುತ್ತಿಲ್ಲ. ಕೊರೊನಾ ವೈರಾಣು ಹರಡುವಿಕೆಯ ತೀವ್ರತೆ ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರ್ಯಾಚರಣೆ ಯಲ್ಲಿ ತೊಡಗಿದ್ದಾರೆನ್ನಲಾಗಿದೆ. ಅಂಗಡಿ ಮುಂಗಟ್ಟುಗಳಲ್ಲಿಯೂ ಮಾಸ್ಕ್ ಧರಿಸಿದವರಿಗೆ ಮಾತ್ರ ಸಾಮಾಗ್ರಿಗಳನ್ನು ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.