Home_Page_Advt
Home_Page_Advt
Home_Page_Advt
Home_Page_Advt

ಕಲ್ಲೇರಿಯ ಯುವಕನಿಗೆ ಸೋಂಕು ದೃಢಪಟ್ಟ ಹಿನ್ನೆಲೆ: ಸರಕಾರಿ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿದಂತೆ 12 ಮಂದಿ ಹೋಮ್ ಕೋರಂಟೈನ್‌ನಲ್ಲಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್‌ನಲ್ಲಿದ್ದ ಕಲ್ಲೇರಿಯ ಯುವಕನಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟ ಬೆನ್ನಲ್ಲೇ ಇದೀಗ ಆಸ್ಪತ್ರೆಯ ಇಬ್ಬರು ವೈದ್ಯರು, ಆರೋಗ್ಯ ಸಹಾಯಕರು ಮತ್ತು ಸಹಾಯಕರು ಸೇರಿದಂತೆ 12 ಮಂದಿ ಹೋಮ್ ಕೋರಂಟೈನ್‌ನಲ್ಲಿರುವುದಾಗಿ ತಿಳಿದು ಬಂದಿದೆ.

ದುಬೈನಿಂದ ಬಂದ ಕಲ್ಲೇರಿಯ ಯುವಕ ಕೊರೋನಾ ಶಂಕಿತನಾಗಿದ್ದು ಕಳೆದ ೫ ದಿನಗಳಿಂದ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್‌ನಲ್ಲಿ ದಾಖಲಾಗಿದ್ದರು. ಈ ವೇಳೆ ಯುವಕನಿಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆಯ ಇಬ್ಬರು ವೈದ್ಯರು, ಆರು ಮಂದಿ ಆರೋಗ್ಯ ಸಹಾಯಕಿಯರು ಮತ್ತು ಕೊಠಡಿಯ ಸ್ವಚ್ಛತೆ ನಡೆಸುತ್ತಿದ್ದ ನಾಲ್ವರು ಸಹಾಯಕರು ರೋಗಿಯ ಕೊಠಡಿಗೆ ಹೋಗಿ ರೋಗಿಯ ಸಂಪರ್ಕದಲ್ಲಿದ್ದರು. ಐಸೋಲೇಶನ್ ವಾರ್ಡ್‌ನಲ್ಲಿದ್ದ ಯುವಕನಿಗೆ ಕೊರೋನಾ ಸೋಂಕು ತಗಲಿರುವುದು (ಮಾ.೨೭ರಂದು ಸಂಜೆ) ದೃಢಪಟ್ಟಿರುವುದರಿಂದ ಇದೀಗ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಿದ ಇಬ್ಬರು ವೈದ್ಯರು, ೬ ಮಂದಿ ಆರೋಗ್ಯ ಸಹಾಯಕಿಯರು ಮತ್ತು ಸ್ವಚ್ಛತಾ ಇತರ ಸೇವೆ ನೀಡಿದ ೪ ಮಂದಿಗೆ ಹೋಮ್ ಕೊರಂಟೈನ್‌ನಲ್ಲಿ ಇರುವಂತೆ ಉನ್ನತ ಅಽಕಾರಿಗಳಿಂದ ಆದೇಶದ ಬಂದಿದೆ. ಮಾ.೨೯ರಂದು ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು, ೬ ಮಂದಿ ಆರೋಗ್ಯ ಸಹಾಯಕಿಯರು ಮತ್ತು ನಾಲ್ವರು ಸ್ವಚ್ಛತಾ ಸಿಬಂದಿಗಳು ಆರೋಗ್ಯ ಸೇವೆಗೆ ಗೈರಾಗಿದ್ದರು. ಅವರನ್ನು ಮುಂದಿನ ೧೪ ದಿನಗಳ ಕಾಲ ಹೋಮ್ ಕೊರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.