Home_Page_Advt
Home_Page_Advt
Home_Page_Advt
Home_Page_Advt

ಲಾಕ್‌ಡೌನ್ ಹಿನ್ನಲೆ-ಕುದ್ಮಾರು- ಶಾಂತಿಮೊಗರು ರಸ್ತೆ ಕಾಮಗಾರಿ ಅರ್ಧದಲ್ಲೇ ಬಾಕಿ: ಮನೆಯಂಗಳಕ್ಕೆ ಮಳೆ ನೀರು

Puttur_Advt_NewsUnder_1
Puttur_Advt_NewsUnder_1
  • ಸುಧಾಕರ್ ಕಾಣಿಯೂರು

ಕಾಣಿಯೂರು: ಕುದ್ಮಾರು – ಶಾಂತಿಮೊಗರು- ಆಲಂಕಾರು ಸಂಪರ್ಕ ರಸ್ತೆಯ ಮರು ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಕುದ್ಮಾರು ದ್ವಾರದ ಬಳಿಯಿಂದ ರಸ್ತೆ ಡಾಮರೀಕರಣ ಕಾರ್ಯಕ್ಕಾಗಿ ರಸ್ತೆ ಅಗಲೀಕರಣ ಹಾಗೂ ಇತರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಆದರೆ ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇಶವೇ ಲಾಕ್‌ಡೌನ್ ಆದ ಪರಿಣಾಮ ಕಾಮಗಾರಿಯು ಅರ್ಧದಲ್ಲಿಯೇ ನಿಂತುಹೋಗಿದೆ. ಇದರಿಂದಾಗಿ ಎ.7ರಂದು ಅಕಾಲಿಕ ಸುರಿದ ಮಳೆಯಿಂದಾಗಿ ರಸ್ತೆಯ ಬದಿಯಲ್ಲಿರುವ 2 ಮನೆಗಳ ಅಂಗಳಕ್ಕೆ ಮಣ್ಣು ಮಿಶ್ರಿತ ಮಳೆ ನೀರು ಬಂದು ಸೇರಿಕೊಂಡಿದೆ. ಎ ೩ರಿಂದ ನಡೆಯಬೇಕಾಗಿದ್ದ ಶಾಂತಿಮೊಗರು ದೇಗುಲ ಬ್ರಹ್ಮಕಲಶೋತ್ಸವವು ಲಾಕ್‌ಡೌನ್ ಹಿನ್ನಲೆಯಲ್ಲಿ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಬ್ರಹ್ಮಕಲಶೋತ್ಸವ ಕಾರ್ಯದ ಮೊದಲೇ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆಯನ್ನು ಕೂಡ ನೀಡಿದ್ದರು.


ಪ್ರತಿಭಟನೆಯ ಸಿದ್ದತೆಯಲ್ಲಿದ್ದರು.. ಕುದ್ಮಾರಿನಿಂದ ಶಾಂತಿಮೊಗರು ತನಕ ನಡೆಯುವ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ, ಧೂಳು ತುಂಬಿ ರೋಗ ಹರಡುವ ಭೀತಿ ಎದುರುಗಾತ್ತದೆ, ಅಲ್ಲದೇ ನಿಧಾನಗತಿಯ ಕಾಮಗಾರಿಯಿಂದಾಗಿ ಮಾರ್ಚ್ ಅಂತ್ಯದೊಳಗೆ ರಸ್ತೆ ಕಾಮಗಾರಿ ಪೂರ್ಣವಾಗದೆಂಬ ಆತಂಕದಲ್ಲಿ ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಬಳಿಕ ಇಲಾಖಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ನಿಗದಿತ ದಿನದೊಳಗೆ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ರದ್ದುಗೊಳಿಸಲಾಗಿತ್ತು.
ಆದರೆ ಬಳಿಕ ದೇಶಾದ್ಯಾಂತ ಲಾಕ್‌ಡೌನ್‌ನಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಮಳೆ ಬಂದ ಪರಿಣಾಮ ೨ ಮನೆಯ ಅಂಗಳಕ್ಕೆ ಮಳೆ ನೀರು ಸೇರುಕೊಂಡಿದೆ. ಇನ್ನೂ ಮಳೆಗಾಲ ಆರಂಭಕ್ಕೂ ಮುನ್ನ ಈ ರಸ್ತೆ ಕಾಮಗಾರಿ ಹಾಗೂ ಮನೆಯವರ ಸಮಸ್ಯೆ ಪರಿಹಾರ ಮಾಡದ್ದೇ ಇದ್ದಲ್ಲಿ ಸಂಪೂರ್ಣ ಮಣ್ಣಿನಿಂದ ಆವೃತವಾಗಲಿದ್ದು, ಕೂಡಲೇ ಈ ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಹಮನಹರಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.