Home_Page_Advt
Home_Page_Advt
Home_Page_Advt
Home_Page_Advt

ಪುತ್ತೂರು ಸಿಟಿ ಎಂಟ್ರಿ ಪಡೆಯುವ ಒಳ ರಸ್ತೆಗಳು ಬಂದ್: ಅನಗತ್ಯ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ ಪೊಲೀಸರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಲಾಕ್‌ಡೌನ್ ಜಾರಿಯಲ್ಲಿದ್ದರೂ ಪುತ್ತೂರು ಪಟ್ಟಣ ಪ್ರದೇಶಕ್ಕೆ ಅನಗತ್ಯವಾಗಿ ವಾಹನ ಸಂಚಾರ ಪೊಲೀಸರ ತಾಳ್ಮೆ ಕೆಡಿಸುವಂತೆ ಮಾಡಿದ ಪರಿವಣಾಮ ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕಲೆಂದು ಪೇಟೆಗೆ ಎಂಟ್ರಿಯಾಗುವ ಎಲ್ಲಾ ಒಳ ರಸ್ತೆಗಳನ್ನು ಬಂದ್ ಮಾಡಿದ್ದರಿಂದ ಎ.೮ರಂದು ಪುತ್ತೂರು ಪೇಟೆಯಲ್ಲಿ ಖಾಸಗಿ ಕಾರುಗಳ ಸಂಚಾರ ಬಹುತೇಕ ಕಡಿಮೆ ಆಗಿತ್ತು.

ಪುತ್ತೂರು ಪೇಟೆ ಪ್ರವೇಶಿಸುವ ಒಳ ರಸ್ತೆಗಳಿಗೆ ಎ.7ರಂದು ರಾತ್ರಿ ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗಿದ್ದರಿಂದ ಬೆಳಿಗ್ಗೆ ಗಂಟೆ 7ರಿಂದ 12 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ವಾಹನ ಮುಖ್ಯರಸ್ತೆ ಮೂಲಕವೇ ಪೇಟೆ ಪ್ರವೇಶ ಮಾಡಿದೆ. ಅನಗತ್ಯವಾಗಿ ತಿರುಗುವ ವಾಹನಗಳು ಬದಲಿ ರಸ್ತೆಯಾಗಿ ಒಳ ರಸ್ತೆಯಾಗಿ ಪೇಟೆ ಎಂಟ್ರಿ ಕೊಡಲು ಸಾಧ್ಯವಾಗದೆ ಹಿಂದೆಕ್ಕ ಹೋದ ಘಟನೆಯೂ ನಡೆಯಿತು. ದರ್ಬೆ ಮತ್ತು ಮಂಜಲ್ಪಡ್ಪು ಕಡೆಗಳಲ್ಲಿ ವಾಹನಗಳ ದಟ್ಟೆ ಒಮ್ಮೆಗೆ ಹೆಚ್ಚಾಯಿತ್ತಾದರೂ ಮತ್ತೆ ವಾಹನ ಸಂಚಾರ ಕಡಿಮೆ ಆಗಿತ್ತು. ಬೈಪಾಸ್‌ನಿಂದ ಪೇಟೆಗೆ ಎಂಟ್ರಿ ಕೊಡುವ ಎಲ್ಲಾ ಒಳ ರಸ್ತೆಗಳನ್ನು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗಿತ್ತು. ಸುಳ್ಯ ಕಡೆಯಿಂದ ಬರುವ ವಾಹನಗಳು ದರ್ಬೆ ಅಶ್ವಿನಿ ಸರ್ಕಲ್ ಬಳಿಯಿಂದ, ಸವಣೂರು ಕಡೆಯಿಂದ ಬರುವ ವಾಹನಗಳು ದರ್ಬೆ ಸರ್ಕಲ್ ನಿಂದ, ಉಪ್ಪಿನಂಗಡಿಯಿಂದ ಬರುವ ವಾಹನಗಳು ಪಡೀಲ್ ಮೂಲಕ, ಮಂಗಳೂರು ಕಡೆಯಿಂದ ಬರುವ ವಾಹನಗಳು ಮಂಜಲ್ಪಡ್ಪು ಬೈಪಾಸ್ ರಸ್ತೆಯಿಂದ ಪುತ್ತೂರು ಪೇಟೆಗೆ ಪ್ರವೇಶಕ್ಕೆ ಅವಕಾಶವಿತ್ತು.

ಪೇಟೆಗೆ ಸುತ್ತಿ ಬಳಸಿ ಬಂದ ಸ್ಥಳೀಯರು:
ಪೇಟೆ ಸುತ್ತ ಮುತ್ತಲಿನ ಸ್ಥಳೀಯರು ಕೂಡಾ 50 ಮೀಟರ್ ಒಳಗೆ ಪೇಟೆ ಪ್ರವೇಶಕ್ಕೆ ಅವಕಾಶವಿದ್ದರೂ ಒಳ ರಸ್ತೆ ಬಂದ್ ಆಗಿದ್ದರಿಂದ ಸುತ್ತಿ ಬಳಸಿ ಬರಬೇಕಾಯಿತು. ಸಾಲ್ಮರದಿಂದ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತಾದರೂ ಪೇಟೆ ತಲುಪು ಹಂತಕ್ಕೆ ಬರುವಾಗ ಎಪಿಎಂಸಿ ರೈಲ್ವೇ ಗೇಟ್ ಬಳಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಿದ್ದರಿಂದ ಹಿಂದಕ್ಕೆ ಹೋಗುವ ಪರಿಸ್ಥಿತಿ ಬಂದೊದಗಿತ್ತು. ಈ ನಡುವೆ ದ್ವಿಚಕ್ರ ವಾಹನ ಸವಾರರು ಬ್ಯಾರಿಕೇಡ್ ಕೊನೆಯಲ್ಲಿ ಸ್ಥಳವಕಾಶವಿದ್ದ ಸ್ಥಳದಿಂದ ತಮ್ಮ ದ್ವಿಚಕ್ರ ವಾಹನವನ್ನು ನುಗ್ಗಿಸಿ ಪೇಟೆ ಪ್ರವೇಶ ಪಡೆಯುತ್ತಿರುವುದು ಕಂಡು ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.