ಬೆಂಗಳೂರು ರೋಯಲ್ ಗ್ರೂಪ್‌ನಿಂದ 40ಕ್ಕೂ ಅಧಿಕ ಅಶಕ್ತ ಕುಟುಂಬಗಳಿಗೆ ಆಹಾರದ ಕಿಟ್ ಕೊಡುಗೆ

Puttur_Advt_NewsUnder_1
Puttur_Advt_NewsUnder_1

ಸಂಪ್ಯ ಠಾಣಾ ಎಸ್.ಐ. ಉದಯರವಿಯವರಿಂದ ಸಾಮಾಗ್ರಿಗಳ ವಿತರಣೆ

ಪುತ್ತೂರು: ಕೊರೋನ ಮಹಾಮಾರಿ ವೈರಸ್‌ನಿಂದ ದೇಶವೇ ತತ್ತರಿಸಿ ಹೋಗಿದ್ದು ಸೋಂಕು ಹರಡುವುದನ್ನು ನಿಲ್ಲಿಸುವ ಸಲುವಾಗಿ ಭಾರತ ಲಾಕ್‌ಡೌನ್ ಆಗಿರುವ ಪರಿಣಾಮ ಅದೆಷ್ಟೋ ಬಡಕೂಲಿ ಕಾರ್ಮಿಕ ಕುಟುಂಬಗಳು ಸಂಕಷ್ಟಕ್ಕೆ ತುತ್ತಾಗಿವೆ. ಪ್ರತಿದಿನ ದುಡಿದು ತಿನ್ನುವ ಕೂಲಿ ಕಾರ್ಮಿಕರು ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ಹಣವಿಲ್ಲದೆ ಪರಿತಪಿಸುವಂತಾಗಿದೆ. ಯಾರೂ ಕೂಡ ಹಸಿವಿನಿಂದ ಇರಬಾರದು ಎಂಬ ನಿಟ್ಟಿನಲ್ಲಿ ಸರಕಾರ ಹಾಗೂ ಸ್ಥಳೀಯ ದಾನಿಗಳು ಬಡವರ ಮನೆಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ ಮಾಡುತ್ತಿದ್ದಾರೆ. ಒಳಮೊಗ್ರು ಗ್ರಾಮದ ಮುಳಿಯಡ್ಕ ನಿವಾಸಿ ಮಹಮ್ಮದ್ ರಫೀಕ್‌ರವರ ರೋಯಲ್ ಗ್ರೂಪ್ ವತಿಯಿಂದ ಮೈದಾನಿಮೂಲೆ ಜಮಾಅತ್ ಮತ್ತು ಒಳಮೊಗ್ರು ಗ್ರಾಮದ ಸುಮಾರು 41ಕ್ಕೂ ಅಧಿಕ ಬಡ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಯಿತು.


ಸಂಪ್ಯ ಠಾಣಾ ಎಸ್.ಐಯವರಿಂದ ವಿತರಣೆ: ಮೈದಾನಿಮೂಲೆ ಜಮಾಅತ್ ಮತ್ತು ಒಳಮೊಗ್ರು ಗ್ರಾಮದ ೨೫ ಕುಟುಂಬಗಳು ಮತ್ತು ಲಾಕ್‌ಡೌನ್ ಪರಿಣಾಮ ಕುಂಬ್ರದಲ್ಲಿ ಉಳಿದುಕೊಂಡಿರುವ ತಿಪಟೂರು ಜಿಲ್ಲೆಯ ಸುಮಾರು ೧೫ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ಸಂಪ್ಯ ಠಾಣಾ ಪೊಲೀಸ್ ಉಪ ನಿರೀಕ್ಷಕ ಉದಯರವಿಯವರು ವಿತರಿಸಿದರು. ಅದರಲ್ಲೂ ಮುಖ್ಯವಾಗಿ ಹಿರಿಯ ನಾಗರಿಕ ಮಹಿಳೆಯರಾದ ಅವ್ವಮ್ಮ, ಮರಿಯಮ್ಮ, ಅಕ್ಕಣಿ ಕೈಕಾರ ಮತ್ತು ಬಡಕುಟುಂಬದವರಾದ ಶೇಷಪ್ಪ ಪೂಜಾರಿ ಕೊಲತ್ತಡ್ಕ, ಗುರುವ ಬಿಜಳರವರುಗಳಿಗೆ ಕಿಟ್ ವಿತರಿಸಲಾಯಿತು. ಒಳಮೊಗ್ರು ಗ್ರಾಪಂ ಪಿಡಿಓ ಗೀತಾರವರಿಗೆ ಕಿಟ್ ವಿತರಣೆ ಮಾಡುವ ಬಗ್ಗೆ ಮಾಹಿತಿ ನೀಡಿದ ಬಳಿಕ ಕಿಟ್ ವಿತರಿಸಲಾಯಿತು.

ತುರ್ತು ಸ್ಪಂದಿಸಿದ ರೋಯಲ್ ಗ್ರೂಪ್: ಒಳಮೊಗ್ರು ಗ್ರಾಮದಲ್ಲಿರುವ ಬಡ ಕುಟುಂಬಗಳು ಮತ್ತು ಕೂಲಿ ಕಾರ್ಮಿಕ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ಕೊಡಬೇಕು ಎಂದು ಗ್ರಾಮಾಂತರ ಠಾಣೆಯ ಒಳಮೊಗ್ರು ಬೀಟ್ ಪೊಲೀಸ್ ಕರುಣಾಕರ್‌ರವರು ರೋಯಲ್ ಗ್ರೂಪ್‌ಗೆ ಮನವಿ ಮಾಡಿಕೊಂಡಿದ್ದರು.ಆ ಮನವಿಗೆ ಶೀಘ್ರವಾಗಿ ಸ್ಪಂದಿಸುವ ಮೂಲಕ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ರೋಯಲ್ ಗ್ರೂಪ್ ಗ್ರಾಮಾಂತರ ಠಾಣಾ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ರೋಯಲ್ ಗ್ರೂಪ್ : ಮುಳಿಯಡ್ಕ ಮಹಮ್ಮದ್ ರಫೀಕ್‌ರವರು ಆರಂಭದಲ್ಲಿ ಕುಂಬ್ರದಲ್ಲಿ ರೋಯಲ್ ಗ್ರೂಪ್‌ನ ಮೊದಲ ಶಾಪ್ ಆರಂಭಿಸಿದ್ದರು. ಆ ಬಳಿಕ ಬೆಂಗಳೂರಿಗೆ ಹೆಜ್ಜೆ ಹಾಕಿದ ಗ್ರೂಪ್ ಪ್ರಸ್ತುತ ಬೆಂಗಳೂರಿನಲ್ಲಿ ಸುಮಾರು ೧೧ ಶಾಖೆಗಳನ್ನು ಹೊಂದಿದೆ. ದಿನಸಿ ಸಾಮಾಗ್ರಿಗಳಿಂದ ಹಿಡಿದು ಜವುಳಿ ಮಳಿಗೆ, ಮಡಿಕಲ್ ಎಲ್ಲವೂ ಇದೆ. ಕಳೆದ ೧೫ ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿದೆ. ಕಿಟ್ ವಿತರಣೆ ಮಾಡುವ ಸಂದರ್ಭದಲ್ಲಿ ರೋಯಲ್ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಂಝ ರೋಯಲ್, ಬೀಟ್ ಪೊಲೀಸ್ ಕರುಣಾಕರ್, ಅಲ್‌ರಾಯ ಹೊಟೇಲ್ ಮಾಲಕ ರಫೀಕ್ ಅಲ್‌ರಾಯ, ಕಬೀರ್ ರೋಯಲ್, ಇರ್ಷಾದ್ ಉಜಿರೋಡಿ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.