ವೈನ್ಸ್ ಶಾಪ್ ಬಾರ್ ತೆರೆದರೆ ಖಾಯಿಲೆ ಹೆಚ್ಚಾಗುವ ಸಾಧ್ಯತೆ-ಜಿಲ್ಲಾಧಿಕಾರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೊನಾ ಮಹಾಮಾರಿಯಿಂದ ಜಿಲ್ಲೆಯ ಜನರು ಸಂಕಷ್ಟಕ್ಕಿಡಾಗಿದ್ದು ಪ್ರಸ್ತುತ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವ ಬಗ್ಗೆ ಪತ್ರಿಕೆ ಹಾಗೂ ಟಿವಿ ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇವೆ ಈ ಸಂದರ್ಭದಲ್ಲಿ ವೈನ್ ಶಾಪ್ ಹಾಗೂ ಬಾರ್ ಗಳನ್ನು ತೆರೆದಲ್ಲಿ ಜನಜಂಗುಳಿಯಿಂದ ಖಾಯಿಲೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶವಿರುವುದರಿಂದ ಆ ಸಂದರ್ಭದಲ್ಲಿ ಅವಕಾಶ ನೀಡಬಾರದು. ಮಧ್ಯಾಹ್ನ ಗಂಟೆ 2 ರಿಂದ ಸಂಜೆ ಗಂಟೆ 6ರ ತನಕ ಅವಕಾಶ ನೀಡಬಹುದಾಗಿದೆ. ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಟೋ ರಿಕ್ಷಾ ಚಾಲಕ ಕೆ.ಜಯರಾಮ ಕುಲಾಲ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.