ಕೊರೋನಾ ವೈರಸ್ ಲಾಕ್‌ಡೌನ್ -ಕಷ್ಟದಲ್ಲಿರುವವರಿಗೆ 16 ಬಗೆಯ ಸಾಹಿತ್ಯ ಪೂರೈಕೆ

Puttur_Advt_NewsUnder_1
Puttur_Advt_NewsUnder_1
  • ಒಕ್ಕಲಿಗ ಗೌಡ ಸೇವಾ ಸಂಘದಿಂದ ಸೇವಾ ಕಾರ್ಯಕ್ಕೆ ಚಾಲನೆ
  • ಕೊರೋನಾ ವೈರಸ್ ರೋಗದಿಂದ ಪಾರಾಗಲು ಪ್ರಾರ್ಥಿಸೋಣ – ಚಿದಾನಂದ ಬೈಲಾಡಿ

ಪುತ್ತೂರು: ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ಕಷ್ಟದಲ್ಲಿರುವವರಿಗೆ ನೆರವಾಗುವ ಯೋಜನೆಯನ್ನು ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಹಮ್ಮಿಕೊಂಡಿದ್ದು, ಆಹಾರದ ಕೊರತೆ ಇರುವ ಕುಟುಂಬಕ್ಕೆ ಅಕ್ಕಿಯ ಜೊತೆ ಸುಮಾರು 16 ಬಗೆಯ ಸಾಹಿತ್ಯಗಳನ್ನು ಎ.9ರಂದು ಒಕ್ಕಲಿಗ ಸ್ವಸಹಾಯ ಒಕ್ಕೂಟದ ಮಾದರಿ ಗ್ರಾಮವಾದ ಮಾಡ್ನೂರು ಗ್ರಾಮಕ್ಕೆ ಪೂರೈಕೆ ಮಾಡಲಾಯಿತು.

ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ವಠಾರದಲ್ಲಿ ಮಾಡ್ನೂರು ಗ್ರಾಮದ ವೆಂಕಪ್ಪ ಗೌಡರ ಮೂಲಕ ಮಾಡ್ನೂರು ಗ್ರಾಮದ ಆಯ್ದ ಕುಟುಂಬಗಳಿಗೆ ವಿತರಣೆ ಮಾಡಲಾಯಿತು. ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾದ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ಒಕ್ಕಲಿಗ ಗ್ರಾಮ ಸಮಿತಿಯಿಂದ ಈಗಾಗಲೇ ಗ್ರಾಮಗಳಲ್ಲಿ ಅಗತ್ಯ ವಸ್ತುಗಳನ್ನು ಬಡವರಿಗೆ ವಿತರಣೆ ಮಾಡಲಾಗಿತ್ತಿದೆ ಎಂಬ ಮಾಹಿತಿ ಇದೆ. ಅದೇ ರೀತಿ ತಾಲೂಕು ಸಮಿತಿಯಿಂದ ಸುಮಾರು ಒಂದು ಮನೆಗೆ ಬೇಕಾಗುವ ೧೬ ಬಗೆಯ ಸಾಹಿತ್ಯಗಳಾದ ಅಕ್ಕಿ, ಮೆಣಸು, ಚಹಾಹುಡಿ, ಸಕ್ಕರೆ, ಉಪ್ಪು, ನಿರುಳ್ಳಿ, ಕೊತ್ತಂಬರಿ, ಎಣ್ಣೆ, ಸೋಪು, ಹರಸಿನ, ಮಸಾಲಹುಡಿ, ಅವಲಕ್ಕಿ, ಜೀರಿಗೆ, ಬೆಲ್ಲ, ಊದುಬತ್ತಿ, ತೆಂಗಿನಕಾಯಿಯ ಒಂದು ಕಿಟ್ ಮಾಡಿ ಅದನ್ನು ವಿತರಣೆ ಮಾಡುವ ಕಾರ್ಯ ಆರಂಭಗೊಂಡಿದೆ. ಈಗಾಗಲೆ ಆಯ್ದ ಕುಟುಂಬಗಳಿಗೆ ವಿತರಣೆ ಕಾರ್ಯ ಮಾಡಲಾಗುತ್ತಿದೆ ಎಂದ ಅವರು ಈ ಕಾರ್ಯ ಮುಂದುವರಿಯಲಿದೆ. ಜೊತೆಗೆ ಮಾರ ಕೊರೋನಾ ವೈರಸ್ ರೋಗದಿಂದ ಪಾರಾಗಲು ಎಲ್ಲರು ಪ್ರಾರ್ಥಿಸೋಣ ಎಂದರು.

ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ವಿಶ್ವನಾಥ ಗೌಡ, ಸುರೇಶ್ ಗೌಡ, ಲಿಂಗಪ್ಪ ಗೌಡ ತೆಂಕಿಲ, ಕಿಶೋರ್ ಬೇರಿಕೆ, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಧಾಕೃಷ್ಣ ಗೌಡ ನಂದಿಲ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ನಿಕಟಪೂರ್ವ ಅಧ್ಯಕ್ಷ ಎ.ವಿ.ನಾರಾಯಣ, ಶ್ರೀಧರ್ ಗೌಡ ಕುಬಲ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.