ಪುತ್ತೂರಿನಲ್ಲಿ ಡೆಂಗ್ಯೂ ತಡೆಗೆ ಆರಂಭದಲ್ಲೇ ವ್ಯಾಪಕ ಜಾಗೃತಿ: ಶಾಸಕರ ನೇತೃತ್ವದಲ್ಲಿ ಜಿಲ್ಲೆಯಲ್ಲೇ ಪುತ್ತೂರಿನಲ್ಲಿ ಸಮನ್ವಯ ಸಭೆ

Puttur_Advt_NewsUnder_1
Puttur_Advt_NewsUnder_1
  • ಚಿಕಿತ್ಸೆ ತಡವಾದರೆ ಪ್ರಾಣಕ್ಕೆ ಅಪಾಯ – ಸಂಜೀವ ಮಠಂದೂರು
  • 24 ಗಂಟೆಯೊಳಗೆ ಪರೀಕ್ಷಾ ವರದಿ ಭರವಸೆ – ಡಾ ನವೀನ್ ಚಂದ್ರ  ಕುಲಾಲ್
  • ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ – ಡಾ. ಯತೀಶ್ ಉಳ್ಳಾಲ್

ಪುತ್ತೂರು: ಕೊರೋನಾ ಸಂಬಂಧಿಸಿ ಈಗಾಗಲೇ ಸರಕಾರಿ ಆಸ್ಪತ್ರೆಗಳಲ್ಲಿ ಫಿವರ್ ಕ್ಲಿನಿಕ್ ತೆರೆಯಲಾಗಿದೆ. ಆದರೆ ಎಲ್ಲಾ ಚಿಕಿತ್ಸೆಗೂ ಮುಂಚೆ ಕೊರೋನಾ ಪರೀಕ್ಷೆ ವರದಿ ತಡವಾದರೆ ಆರಂಭಿಕ ಹಂತದಲ್ಲಿರುವ ಡೆಂಗ್ಯೂ ಪ್ರಾಣಪಾಯ ತರುವ ಸಾಧ್ಯತೆ ಹೆಚ್ಚು ಈ ನಿಟ್ಟಿನಲ್ಲಿ ತಕ್ಷಣ ಪರೀಕ್ಷಾ ವರದಿಗಳು ಬರುವಂತೆ ವ್ಯವಸ್ಥೆ ಕಲ್ಪಿಸುವಂತೆ ಶಾಸಕ ಸಂಜೀವ ಮಠದೂರು ಅವರು ಹೇಳಿದರು.

ಕೊರೋನಾ ನಡುವೆ ಬೆಟ್ಟಂಪಾಡಿ ಮತ್ತು ಬಲ್ನಾಡಿನಲ್ಲಿ ಡೆಂಗ್ಯೂ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೇ 5ರಂದು ಪುತ್ತೂರು ಮಿನಿ ವಿಧಾನ ಸೌಧದಲ್ಲಿ ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು. ಡೆಂಗ್ಯೂ ಮತ್ತು ಮಲೇರಿಯ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿ ಜಿಲ್ಲೆಯಲ್ಲೇ ಪ್ರಥಮ ಸಭೆ ಪುತ್ತೂರಿನಲ್ಲಿ  ನಡೆಯುತ್ತಿದೆ. ಡೆಂಗ್ಯೂ ಮಲೇರಿಯ ಸಾಂಕ್ರಾಮಿಕ ರೋಗದಿಂದ ಸಾವು ನೋವು ತಡೆಯುವ ನಿಟ್ಟಿನಲ್ಲಿ ಮುಂಜಾಗರುಕತೆ ಕ್ರಮ ವಹಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಥಮವಾಗಿ ಗ್ರಾ.ಪಂ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು, ಪಿಡಿಒಗಳು ಮನೆ ಮನೆ ಭೇಟಿ ಮಾಡುವುದು ಜಾಗೃತಿಕರ ಪತ್ರ ಹಂಚುವುದು ಮಾಡಬೇಕು. ಕೊರೋನಾದ ನಡುವೆ ಈ ಸಾಂಕ್ರಾಮಿಕ ರೋಗದಿಂದ ಹೆಚ್ಚು ಸಾವು ಸಂಭವಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಹೇಳಿದರು.

ಕೊರೋನಾ ಪರೀಕ್ಷೆ ತಡವಾದರೆ ಕಷ್ಟ:
ಕೊರೋನಾದಿಂದಾಗಿ ಆಸ್ಪತ್ರೆಗೆ ಬಂದ ರೋಗಿಗೆ ಕೊರೋನಾ ಪರೀಕ್ಷೆ ವರದಿ ಮುಖ್ಯವಾಗಿದೆ. ಆದರೆ ಡೆಂಗ್ಯೂವಿನಂತಹ ಖಾಯಿಲೆ ಬಂದಾಗ ಅಲ್ಲಿ ಕೊರೋನಾ ಪರೀಕ್ಷೆ ವರದಿ ಬರುವಾಗ ತಡವಾದರೆ ಡೆಂಗ್ಯೂ ರೋಗಿ ಮೃತಪಡುವ ಸಂಭವ ಇರುವುದರಿಂದ ಕೊರೋನಾ ಪರೀಕ್ಷೆ ವರದಿ ಆದಷ್ಟು ಬೇಗ ಬರುವಂತೆ ಖಾಸಗಿ ಆಸ್ಪತ್ರೆಯ ಎಸೋಸಿಯೇಶನ್ ಅಧ್ಯಕ್ಷ ಡಾ. ಶ್ರೀಪತಿ ರಾವ್ ಪ್ರಶ್ನಿಸಿದರು. ಉತ್ತರಿಸಿದ ಮಲೇರಿಯ ನಿಯಂತ್ರಣಾಧಿಕಾರಿ ಡಾ. ನವೀನ್‌ಚಂದ್ರ ಅವರು ಈಗಾಗಲೇ ಕೋವಿಡ್ ಪರೀಕ್ಷೆಗೆ 12 ಗಂಟೆ ಬೇಕು. ಆದರೆ ಉತ್ತರ ಕನ್ನಡ, ಉಡುಪಿ ಜಿಲ್ಲೆಯ ಕೊರೋನಾ ಪರೀಕ್ಷೆಯೂ ಮಂಗಳೂರಿನಲ್ಲಿ ನಡೆಯುವುದರಿಂದ ಸ್ವಲ್ಪ ತಡ ಆಗುತ್ತದೆ ಎಂದರು.

24 ಗಂಟೆಯೊಳಗೆ ವರದಿ ಭರವಸೆ:
ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ. ನವೀನಚಂದ್ರ ಅವರು ಮಾತನಾಡಿ ಡೆಂಗ್ಯೂ ಪುತ್ತೂರಿಗೆ ಹೊಸತಲ್ಲ ಕಳೆದ ಸಲ ೧೧೩ ಕೇಸ್ ಇತ್ತು. ಒಂದು ಮನೆಯಲ್ಲಿ ಡೆಂಗ್ಯೂ ಖಚಿತ ಅದರೆ ಆ ಮನೆಯಲ್ಲಿ ಮತ್ತೆ ಪರೀಕ್ಷೆ ಅಗತ್ಯವಿಲ್ಲ. ಕಡಬ, ಪಾಣಾಜೆಯಲ್ಲಿ ಕಳೆದ ಬಾರಿ ಜಾಸ್ತಿ ಇತ್ತು. ಅಕಾಲಿಕ ಮಳೆ ಬಂದ ಕೂಡಲೆ ಡೆಂಗ್ಯೂ ಹೆಚ್ಚಾಗುತ್ತದೆ. ಬಿರು ಬಿಸಿಲಿನ ತಾಪಕ್ಕೆ ಬರಿ ಮೈಯಲ್ಲಿ ತೋಟದ ಕೆಲಸಕ್ಕೆ ಹೋದಾಗ ಈಡೀಸ್ ಸೊಳ್ಳೆ ಕಡಿತದಿಂದ ಡೆಂಗ್ಯೂ ಬರುತ್ತದೆ. ಈ ವರ್ಷದ ಮಟ್ಟಿಗೆ ಬೆಟ್ಟಂಪಾಡಿಯಲ್ಲಿ ೨೦ ಪ್ರಕರಣ, ೧೦ ರಿಂದ ೧೩ ಶಂಕಿತ ಪ್ರಕರಣ ಬಲ್ನಾಡಿನಲ್ಲಿ ಸಿಕ್ಕಿದೆ. ಪಾಣಾಜೆ, ಸರ್ವೆ, ಕೊಲದಲ್ಲೂ ಇದೆ. ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಕೋವಿಡ್ ವೈರಸ್ ಮತ್ತು ಡೆಂಗ್ಯೂ ಒಟ್ಟಿಗೆ ಬಂದರೆ ಬಹಳ ದೊಡ್ಡ ತೊಂದರೆ ಆಗುತ್ತದೆ ಎಂದರು. ಈ ನಿಟ್ಟಿನಲ್ಲಿ ಖಾಸಗಿ ಅಸ್ಪತ್ರೆಗೆ ಬರುವ ರೋಗಿಗಳಿಗೆ ಸಂಬಂಧಿಸಿ ಕೋವಿಡ್ ಪರೀಕ್ಷೆ ಮುಂದೆ ೨೪ ಗಂಟೆಯೊಳಗೆ ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪುತ್ತೂರು ಖಾಸಗಿ ಆಸ್ಪತ್ರೆ ಅಸೋಸಿಯೆಶನ್‌ನ ಅಧ್ಯಕ್ಷ ಡಾ. ಶ್ರೀಪತಿ ರಾವ್ ಅವರ ಪ್ರಶ್ನೆಗೆ ಉತ್ತರಿಸಿದರು.

ಆಸ್ಪತ್ರೆಯಲ್ಲಿ ಫ್ರಂಟ್ ಅಫಿಸರ್ ಬದಲಾಯಿಸಿ:
ಪುತ್ತೂರಿನ ಬಹುತೇಕ ಖಾಸಗಿ ಆಸ್ಪತ್ರೆಯಲ್ಲಿ ಪ್ರಂಟ್ ಆಫೀಸರ್‌ನ್ನು ಸೆಕ್ಯೂರಿಟಿಗೆ ಬಿಟ್ಟು ಕೊಟ್ಟಿದ್ದಾರೆ. ಅವರಿಗೆ ಆಸ್ಪತ್ರೆಗೆ ಬರುವ ರೋಗಿ ಯಾವ ಚಿಕಿತ್ಸೆಗೆಂದು ಗೊತ್ತಿರುವುದಿಲ್ಲ. ಯಾವ ರೋಗಿಯನ್ನು ಒಳಗೆ ಬಿಡಬೇಕು. ಯಾರನ್ನು ಬಿಡಬಾರದು ಎಂಬುದು ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ಒಂದು ವೇಳೆ ಕೋವಿಡ್ ರೋಗಿ ಒಳಗೆ ಬಂದರೆ ಆಸ್ಪತ್ರೆಯನ್ನು ಕೊರಂಟೈನ್ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯ ಡ್ಯೂಟಿ ಡಾಕ್ಟರ್ ಅವರನ್ನೇ ಪ್ರಂಟ್ ಆಫಿಸರ್ ಆಗಿ ನೇಮಿಸಬೇಕು ಎಂದು ಮಲೇರಿಯ ನಿಯಂತ್ರಣಾಧಿಕಾರಿ ಡಾ ನವೀನ್‌ಚಂದ್ರ ಅವರು ಹೇಳಿದರು.

ಡೆಂಗ್ಯೂ ಬಗ್ಗೆ ಎಚ್ಚರಿಕೆ ಇರಬೇಕು:
ಡೆಂಗ್ಯೂವಿನಲ್ಲಿ ಯುವಕರು ಮೃತಪಟ್ಟಿರುವ ವರದಿ ಇದೆ. ಕೋವಿಡ್ -೧೯ ನಲ್ಲಿ ಬಹುತೇಕ ಮಂದಿ ವೃದ್ಧರು ಮೃತಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕೊವಿಡ್‌ನೊಂದಿಗೆ ಡೆಂಗ್ಯೂವಿನ ಕುರಿತು ಎಚ್ಚರಿಕೆ ಬೇಕು. ರೋಗ ಇನ್ನೊಬ್ಬರಿಗೆ ಹರಡದಂತೆ ನೋಡಬೇಕು. ತೋಟದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಈ ರೋಗಕ್ಕೆ ಆದಷ್ಟು ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯೂ ಎಂದು ಮೇಲ್ನೋಟಕ್ಕೆ ಗೊತ್ತಾದ ತಕ್ಷಣ ಚಿಕಿತ್ಸೆ ನೀಡಿ ಎಂದು ಡಾ. ನವೀನ್‌ಚಂದ್ರ ಹೇಳಿದರು.

ಸೊಳ್ಳೆ ನಿಯಂತ್ರಣ ಕ್ರಮ:
ಮನೆಯ ಸುತ್ತಮುತ್ತ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ನೀರು ಶೇಖರಣೆಯಾಗುವ ವಸ್ತುಗಳನ್ನು ವಾರಕ್ಕೆ ಒಂದು ಸಾರಿಯಾದರೂ ನಾಶಪಡಿಸಬೇಕು. ಇದು ಇಲಾಖೆಯಿಂದ ಅಥವಾ ಸಂಘ ಸಂಸ್ಥೆಗಳಿಂದ ಆಗುವ ಕೆಲಸವಲ್ಲ. ಸೊಳ್ಳೆಗಳ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಯಾವುದೇ ಜ್ವರ ಕಂಡು ಬಂದರೆ ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಂಡು ಅದು ಮಲೇರಿಯಾ ಎಂದು ಕಂಡು ಬಂದರೆ ತ್ವರಿತವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಇದರಿಂದ ಮಲೇರಿಯಾ ಇನ್ನೊಬ್ಬರಿಗೆ ಹರಡುವುದನ್ನು ತಡೆಗಟ್ಟಬಹುದು ಎಂದು ಡಾ. ನವೀನ್‌ಚಂದ್ರ ಹೇಳಿದರಲ್ಲದೆ ಇವತ್ತು ನೀರಿನಲ್ಲಿ ಮೊಟ್ಟೆ ಇರುವ ಸೊಳ್ಳೆಗಳಿಗೆ ಪಾಗಿಂಗ್ ಪ್ರಯೋನವಾಗುವುದಿಲ್ಲ. ಹಾರುವ ಸೊಳ್ಳೆಗಳಿಗೆ ಮಾತ್ರ ಪಾಗೀಂಗ್ ಪ್ರಯೋಜನ ಆಗುತ್ತದೆ ಎಂದರು.

ಸೊಳ್ಳೆಗಳ ಸಂತಾನ ವೃದ್ಧಿ ನಾಶಪಡಿಸಬೇಕು:
ಡ್ರಮ್‌ಗಳು, ಮಡಕೆಗಳು, ಬಕೇಟ್‌ಗಳು, ಹೂದಾನಿಗಳು, ಕುಂಡಗಳು, ಅಡಿಕೆ ಸೋಗೆ ಕಡಿದ ಮತ್ತು ಕಂಗು ತೆಂಗು ಗುಂಡಿಗಳು, ಗೆರಟೆಗಳು, ರಬ್ಬರ್ ಕಪ್, ಮನೆಯ ಮಹಡಿ, ಕಿಟಕಿ ಸೈಡ್, ಜೇನು ಸಾಕುವ ಡಬ್ಬಿಯಲ್ಲಿ ಇರುವೆ ಬಾರದ ಹಾಗೆ ಇಡುವ ನೀರು ಇಂತಹ ಕಡೆಗಳಲ್ಲಿ ಸೊಳ್ಳೆಗಳು ಮೊಟ್ಟೆ ಇಡುತ್ತವೆ. ಅದನ್ನು ನಿಯಂತ್ರಿಸಲು ಅಲ್ಲಿ ಮಡ್ ಆಯಿಲ್ ಸುರಿಯಿರಿ. ಇಲ್ಲವಾದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ನವೀನ್‌ಚಂದ್ರ ಜಾಗೃತಿ ಮಾಡಿದರು.

ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ:
ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಅವರು ಮಾತನಾಡಿ ಡೆಂಗ್ಯೂ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಗ್ರಾ.ಪಂ ಮತ್ತು ನಗರಸಭೆಯಿಂದ ಈಗಾಲೇ ಕಾರ್ಯಪ್ರವೃತರಾಗಬೇಕೆಂದು ಎಚ್ಚರಿಸಿದರು. ತಹಸೀಲ್ದಾರ್ ಟಿ.ರಮೇಶ್ ಬಾಬು, ಪೌರಾಯುಕ್ತೆ ರೂಪಾ ಶೆಟ್ಟಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಖಾಸಗಿ ಆಸ್ಪತ್ರೆ ಅಸೋಸಿಯೇಶನ್ ಕಾರ್ಯದರ್ಶಿ ಡಾ. ಅಶೋಕ್ ಪಡಿವಾಳ್, ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಪುತ್ತೂರಾಯ, ಬೆಟ್ಟಂಪಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶಾಂತರಾಮ್, ನಗರಸಭೆ ಪರಿಸರ ಅಭಿಯಂತರ ಗುರುಪ್ರಸಾದ ಶೆಟ್ಟಿ ಸೇರಿದಂತೆ ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.