ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಸದಾಸ್ಮಿತಾ ಪ್ರತಿಷ್ಠಾನದಿಂದ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಪಿಪಿಇ ಕಿಟ್, ಸ್ಯಾನಿಟೈಸರ್, ಮಾಸ್ಕ್ ವಿತರಣೆ

Puttur_Advt_NewsUnder_1
Puttur_Advt_NewsUnder_1
  • ತೊಂದರೆ ಆದವರಿಗೆ ಡಿ.ವಿ.ಸದಾನಂದ ಗೌಡರು ಸಹಾಯ ಮಾಡಿದ್ದಾರೆ – ಅಶೋಕ್ ಕುಮಾರ್ ರೈ
  • ಕೊರೋನಾ ಲೈಫ್‌ಲಾಂಗ್ ಎಕ್ಸ್‌ಪೀರಿಯನ್ಸ್ – ಡಾ. ಶ್ರೀಪತಿ ರಾವ್

ಪುತ್ತೂರು: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಸದಾಸ್ಮಿತಾ ಪ್ರತಿಷ್ಠಾನದ ವತಿಯಿಂದ ಕೊರೋನಾಗೆ ಸಂಬಂಧಿಸಿ ಮುಂಜಾಗರುಕತೆ ಕ್ರಮ ಕೈಗೊಳ್ಳಲು ಈಗಾಗಲೇ ರಾಜ್ಯದ ಪ್ರಮುಖ ಆಸ್ಪತ್ರೆಗಳಿಗೆ ಪರ್ಸನಲ್ ಪ್ರೊಟೆಕ್ಟ್ ಇಕ್ಯುಪ್‌ಮೆಂಟ್( ಪಿ.ಪಿ.ಇ) ಕಿಟ್, ಸ್ಯಾನಿಟೈಸರ್ ಮತ್ತು ಮಾಸ್ಕ್‌ಗಳನ್ನು ವಿತರಿಸಿದ್ದು, ಪುತ್ತೂರಿನಲ್ಲಿ ರೈ ಎಸ್ಟೇಟ್ ಮತ್ತು ರೈ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್‌ನ ಪ್ರವರ್ತಕ ಅಶೋಕ್ ಕುಮಾರ್ ರೈ ಅವರ ಮೂಲಕ ಮೇ 7ರಂದು ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಪಿಪಿಇ ಕಿಟ್ ವಿತರಣೆಯನ್ನು ಮಾಡಲಾಯಿತು.

ತೊಂದರೆ ಆದವರಿಗೆ ಡಿ.ವಿ.ಸದಾನಂದ ಗೌಡರು ಸಹಾಯ ಮಾಡಿದ್ದಾರೆ:
ಅಶೋಕ್ ಕುಮಾರ್ ರೈ ಅವರು ಮಾತನಾಡಿ ಈಗಾಗಲೇ ಸಚಿವರಾದ ಡಿ.ವಿ.ಸದಾನಂದ ಗೌಡರು ಟ್ರಸ್ಟ್‌ನ ವತಿಯಿಂದ ಬೆಂಗಳೂರು ಸೇರಿದಂತೆ ಹಲವು ಕಡೆಗಳ ಆಸ್ಪತ್ರೆಗಳಿಗೆ ಪಿಪಿಇ ಕಿಟ್ ಮತ್ತು ಸ್ಯಾನಿಟೈಸರ್, ಮಾಸ್ಕ್ ವಿತರಿಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯ, ಬೋರಿಂಗ್, ರಾಜೀವಗಾಂಧಿ, ಜಯನಗರ, ರಾಜಾಜಿನಗರ ಇ.ಎಸ್.ಐ, ಮಲ್ಲೇಶ್ವಪುರಂ, ಇಂದಿರಾನಗರ ಆಸ್ಪತ್ರೆಗಳಿಗೆ, ಮಂಡ್ಯ, ಮಡಿಕೇರಿ ಮೆಡಿಕಲ್ ಕಾಲೇಜುಗಳಿಗೆ ಪಿಪಿಇ ಕಿಟ್ ಮತ್ತು ಕರ್ತವ್ಯ ನಿರತ ಪೊಲೀಸ್ ಸಿಬಂದಿಗಳಿಗೆ, ಬೆಂಗಳೂರಿನ ಎಲ್ಲಾ ಪೌರ ಕಾರ್ಮಿಕರಿಗೆ, ಆಶಾ ಕಾರ್ಯಕರ್ತೆಯರಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಪತ್ರಿಕಾ ಮಾದ್ಯಮ ಸಿಬಂದಿಗಳಿಗೆ, ಬೀದಿ ವ್ಯಾಪಾರಿಗಳು, ತರಕಾರಿ ಮಾರುವವರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿದ್ದಾರೆ. ಒಟ್ಟು 25 ಸಾವಿರ ಮಂದಿ ಇದರ ಪ್ರಯೋಜನ ಪಡೆದಿದ್ದಾರೆ ಎಂದ ಅವರು ಪ್ರಸ್ತುತ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ಸ್ವದೇಶಕ್ಕೆ ಕರೆ ತರುವ ಪ್ರಯತ್ನ ಮಾಡುವ ಮೂಲಕ ತೊಂದರೆ ಆದವರಿಗೆ ಡಿ.ವಿ.ಎಸ್ ಸಹಾಯ ಹಸ್ತ ಮಾಡುತ್ತಿದ್ದಾರೆ ಎಂದರು.

ಕೊರೋನಾ ಲೈಫ್‌ಲಾಂಗ್ ಎಕ್ಸ್ಪೀರಿಯನ್ಸ್:
ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಶ್ರೀಪತಿ ರಾವ್ ಅವರು ಮಾತನಾಡಿ ಕೊರೋನಾ ಜ್ವರ ಸಮಸ್ಯೆ ವೈದ್ಯರಿಗೆ ಲೈಫ್ ಲಾಂಗ್ ಎಕ್ಸ್‌ಪೀರಿಯನ್ಸ್ ಆಗಿ ಬಿಟ್ಟಿದೆ. ಇಂತಹ ಭಯಾನಕ ಸಮಸ್ಯೆ ಎದುರಾದಾಗ ಪ್ರಧಾನಿ ನರೇಂದ್ರ ಮೋದಿಯವರು ರೋಗ ನಿಯಂತ್ರಣಕ್ಕೆ ಲಾಕ್‌ಡೌನ್ ಮೂಲಕ ಜನರ ಆರೋಗ್ಯ ಕಾಪಾಡಿದ್ದಾರೆ. ರೋಗ ಹತೋಟಿಗೆ ಬಂದಿದೆ. ಇದೀಗ ಲಾಕ್‌ಡೌನ್ ಸಡೀಲಿಕೆ ಆದ್ದರಿಂದ ಒಂದು ತಿಂಗಳ ಬಳಿಕ ಮತ್ತೆ ಕೊರೋನಾ ಉಲ್ಬಣ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆ ವಹಿಸಬೇಕು. ಒಟ್ಟಿನಲ್ಲಿ ಖಾಯಿಲೆ ಇಲ್ಲದ ದೇಶವಾಗಬೇಕೆಂದು ಹೇಳಿದರು. ಡಾ. ಸುದಾ ಎಸ್ ರಾವ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜರಾಮ ಶೆಟ್ಟಿ ಕೋಲ್ಪೆ ಗುತ್ತು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರೈ ಎಸ್ಟೇಟ್ ಮತ್ತು ರೈ ಎಜ್ಯುಕೇಶನ್ ಟ್ರಸ್ಟ್‌ನ ವ್ಯವಸ್ಥಾಪಕ ಆದರ್ಶ್ ಶೆಟ್ಟಿ ಉಪ್ಪಿನಂಗಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟ್ ಸಿಬಂದಿ ಲಿಂಗಪ್ಪ ಕುದ್ಮಾನ್ ಸ್ವಾಗತಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.