ಯುಟಿ ತೌಸೀಫ್, ಶಬೀರ್ ಕೆಂಪಿ ನೇತೃತ್ವದಲ್ಲಿ ಪುತ್ತೂರು ಯುವ ಕಾಂಗ್ರೆಸ್ ವತಿಯಿಂದ ವಿಟ್ಲ ವ್ಯಾಪ್ತಿಯಲ್ಲಿ 5ನೇ ಹಂತದ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಮಹಾಮಾರಿ ಹರಡದಂತೆ ಜಾರಿಯಲ್ಲಿರುವ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಪುತ್ತೂರು ಯುವಕ ಕಾಂಗ್ರೆಸ್ ಅಧ್ಯಕ್ಷ ಯುಟಿ ತೌಸೀಫ್ ನೇತೃತ್ವದಲ್ಲಿ ವಿಟ್ಲ ವ್ಯಾಪ್ತಿಯಲ್ಲಿ 5ನೇ ಸುತ್ತಿನ ಕಿಟ್ ವಿತರಿಸಲಾಯಿತು.


ವಿಟ್ಲ ವ್ಯಾಪ್ತಿಯ ಕಬಕ, ಅಳಕೆಮಜಲ್, ಉರಿಮಜಲ್, ಕಂಬಳಬೆಟ್ಟು ವಿಟ್ಲ, ಅಳಿಕೆ, ಕುದ್ದುಪದವು, ಪುಣಚ ಮೊದಲಾದ ಕಡೆಗಳಿಗೆ ತೆರಳಿ ಕಿಟ್ ವಿತರಿಸಲಾಯಿತು. ಕಳೆದ ತಿಂಗಳಿನಿಂದ ನಿರಂತರವಾಗಿ ಪುತ್ತೂರು ತಾಲೂಕಿನ ವಿವಿಧ ಕಡೆಗಳಲ್ಲಿ ತನ್ನ ವೈಯುಕ್ತಿಕ ನೆಲೆಯಲ್ಲಿ ೪ ಹಂತಗಳಲ್ಲಿ ಕಿಟ್ ವಿತರಿಸಿ ಬಡವರು, ಮಧ್ಯಮ ವರ್ಗದ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ಬಡವರು, ಮಧ್ಯಮ ವರ್ಗದ ಜನರಿಗೆ ನೆರವಾಗಲಿದ್ದೇವೆ ಎಂದು ಯು.ಟಿ.ತೌಸೀಫ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಶಬೀರ್ ಕೆಂಪಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ದಾವೂದ್ ವಿಟ್ಲ, ಶಬೀರ್ ನಂದಾವರ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲತೀಫ್ ಪುಣಚ, ಮಾಧ್ಯಮ ಉಸ್ತುವಾರಿ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಉಪಸ್ಥಿತರಿದ್ದರು.
ಯುವ ಕಾಂಗ್ರೆಸ್ ಮೂಲಕ ತಾಲೂಕಿನಲ್ಲಿ 250 ಕಿಟ್ ವಿತರಣೆ: ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ಯುಟಿ ತೌಸೀಫ್ ಅವರು ತನ್ನ ಕ್ಷೇತ್ರ ವ್ಯಾಪ್ತಿಯ ಸುಮಾರು ೧೫೦ ಬಡವರು, ಮಧ್ಯಮ ವರ್ಗದ ಜನರಿಗೆ ಕಿಟ್ ತಲುಪಿಸಿ ಮಾದರಿಯಾಗಿದ್ದಾರೆ. ಎರಡನೇ ಹಂತದಲ್ಲಿ ತಾಲೂಕಿನಲ್ಲಿ ಸುಮಾರು ೪೦ ಕಿಟ್ ವಿತರಣೆ ತದನಂತರ ವಿಟ್ಲ ವ್ಯಾಪ್ತಿಯಲ್ಲಿ ೬೦ ಕಿಟ್ ಬಡವರು ಮಧ್ಯಮ ವರ್ಗದ ಜನರಿಗೆ ತಲುಪಿಸಲಾಗಿದೆ. ಉಪ್ಪಿನಂಗಡಿ ಭಾಗದಲ್ಲಿ ಯುವಕ ಕಾಂಗ್ರೆಸ್ ಮೂಲಕ ೬೦ ಕಿಟ್ ವಿತರಿಸಿ ಯುವಕ ಕಾಂಗ್ರೆಸ್ ಮೂಲಕ ಲಾಕ್‌ಡೌನ್ ಸಮಯದಲ್ಲಿ ಸಂಕಷ್ಟಗೊಳಗಾದವರಿಗೆ ನೆರವಾಗಿ ಮಾದರಿಯಾಗಿದ್ದಾರೆ.
ಜಿಲ್ಲಾ ಯುವಕ ಕಾಂಗ್ರೆಸ್ ಕಾರ್ಯದರ್ಶಿ ಶಬೀರ್ ಕೆಂಪಿ ನೇತೃತ್ವದ ಸಂಸ್ಥೆ ಉಬಾರ್ ಡೋನರ್ಸ್ ಅಶ್ರಫ್ ದುಬೈ ನೇತೃತ್ವದ ಯೂತ್ ಐಕಾನ್ ಹೆಲ್ಪಿಂಗ್ಸ್ ಮೂಲಕ ಬಡವರ ಕಣ್ಣೀರು ಒರೆಸುವ ಮಹತ್ವದ ಜೀವಕಾರುಣ್ಯ ಸೇವೆಯಲ್ಲಿ ಯುಟಿ ತೌಸೀಫ್ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಿನಲ್ಲಿ ಲಾಕ್ ಡೌನ್ ಸಂಕಷ್ಟದ ಸಮಯದಲ್ಲಿ ಜೀವಕಾರುಣ್ಯದ ಮೂಲಕ ಬಡವರು, ಮಧ್ಯಮ ವರ್ಗದ ಜನರಿಗೆ ಕಿಟ್ ನೀಡುವ ಮೂಲಕ ಸಹಕರಿಸಿದ ಯುಟಿ ತೌಸೀಫ್ ಅವರ ಸೇವೆ ಎಲ್ಲೆಡೆ ಪ್ರಶಂಸನೀಯ ವ್ಯಕ್ತವಾಗುತ್ತಿದೆ.
ಜೀವಕಾರುಣ್ಯ ಸೇವಾ ಚಟುವಟಿಕೆಯಲ್ಲಿ ಯು.ಟಿ ತೌಸೀಫ್
ಮಹಾಮಾರಿ ಕೊರೋನ ವೈರಸ್ ರೋಗವು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಏರ್ಪಟ್ಟಿದೆ. ಇಂತಹ ಸಂದರ್ಭಗಳನ್ನು ಗಮನಿಸಿಕೊಂಡು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರು, ಪುತ್ತೂರು ಯುವಕ ಕಾಂಗ್ರೆಸ್ ಅಧ್ಯಕ್ಷರು ಆಗಿರುವ ಯುಟಿ ತೌಸೀಫ್ ಇವರ ನೇತೃತ್ವದಲ್ಲಿ ಉಪ್ಪಿನಂಗಡಿ ತನ್ನ ಗ್ರಾಮ ಪಂಚಾಯತ್ ವ್ಯಾಪ್ತಿ , ತನ್ನ ವಾರ್ಡಿನ ವ್ಯಾಪ್ತಿಯ ಪ್ರತಿ ಮನೆಯ ಜನರ ಕಷ್ಟ ಸುಖಗಳನ್ನು ಅರಿಯುವ ಮೂಲಕ ಮಧ್ಯಮ ಮತ್ತು ಬಡ ವರ್ಗದ ಜನರಿಗೆ ಯಾವುದೇ ಜಾತಿ ಮತ ಬೇದ ಬಾವ ಇಲ್ಲದೇ ಅಗತ್ಯ ದಿನಬಳಕೆಯ ಸಾಮಾಗ್ರಿಗಳ ಕಿಟ್ ವಿತರಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.