ಪುತ್ತೂರಿನಿಂದ ಉತ್ತರ ಪ್ರದೇಶಕ್ಕೆ ವಿಶೇಷ ರೈಲು | ಪುತ್ತೂರು ಉಪವಿಭಾಗ ಸೇರಿದಂತೆ ಬಂಟ್ವಾಳ ಸೇರಿ 1520 ಮಂದಿ ವಲಸೆ ಕಾರ್ಮಿಕರು ಊರಿಗೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಂತರ್‌ರಾಜ್ಯದ ವಲಸೆ ಕಾರ್ಮಿಕರನ್ನು ತಮ್ಮ ಸ್ವಗ್ರಾಮಗಳಿಗೆ ಕಳುಹಿಸುವ ಕಾರ್ಯ ರಾಜ್ಯದ್ಯಾಂತ ನಡೆಯುತ್ತಿದ್ದು, ಪುತ್ತೂರಿನಿಂದ ಮೇ.12ಕ್ಕೆ 1,498 ಮಂದಿ ವಲಸೆ ಕಾರ್ಮಿಕರು ವಿಶೇಷ ರೈಲಿನ ಮೂಲಕ ಬಿಹಾರಕ್ಕೆ ತೆರಳಿದ ಬೆನ್ನಲ್ಲೇ ಇದೀಗ 2ನೇ ಅಂತದಲ್ಲಿ ಪುತ್ತೂರು ಕಬಕ ರೈಲ್ವೇ ಸ್ಟೇಷನ್‌ನಿಂದ ಮೇ 15ರಂದು ಮಧ್ಯಾಹ್ನ ವೇಳೆ ಸುಮಾರು 1520 ಮಂದಿ ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶಕ್ಕೆ ಕಳುಹಿಸುವ ನಿಟ್ಟಿನಲ್ಲಿ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರನ್ನು ರೈಲಿಗೆ ಕಳುಹಿಸುವ ವ್ಯವಸ್ಥೆ ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಲ್, ಎಡಿಷನಲ್ ಎಸ್ಪಿ ಡಾ. ಅಮ್ಟೆ ವಿಕ್ರಮ್ ಮತ್ತು ತಹಶೀಲ್ದಾರ್ ರಮೇಶ್ ಬಾಬು ಟಿ. ಅವರ ನೇತೃತ್ವದಲ್ಲಿ ನಡೆಯಿತು.


ಪುತ್ತೂರಿನಿಂದ ಪ್ರಥಮ ಹಂತದಲ್ಲಿ ಬಿಹಾರಕ್ಕೆ ವಿಶೇಷ ರೈಲು ಸೌಲಭ್ಯ ಸಂದರ್ಭ ಪ್ರಯಾಣಿಕರನ್ನು ಕಳುಹಿಸುವ ವೇಳೆ ಮುಂಜಾಗರುಕತೆ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ರೈಲ್ವೇ ನಿಲ್ದಾಣದಲ್ಲಿ ಜನಜಂಗುಳಿ ಆಗದಂತೆ ಸೂಕ್ತ ಬಂದೋಬಸ್ತ್ ಮತ್ತು ಟಿಕೇಟ್‌ಗಳನ್ನು ಆಯಾ ಬಸ್‌ಗೆ ಸಂಬಂಧಿಸಿ ಟಿಕೇಟ್ ಪಡೆದು ಕೊಂಡು ಪ್ರಯಾಣಿಕರನ್ನು ಕಳುಹಿಸುವ ವ್ಯವಸ್ಥೆ ಮಾಡಲಾಯಿತು.. ಪುತ್ತೂರು ಉಪವಿಭಾಗಕ್ಕೆ ಸಂಬಂಧಿಸಿ ಸುಮಾರು 1 ಸಾವಿರ ಮಂದಿ ಹಾಗೂ ಬಂಟ್ವಾಳದಿಂದ 520 ಮಂದಿ ಆಗಮಿಸಿದ್ದರು. ಬಂಟ್ವಾಳದಿಂದ ಬರುವ ಕಾರ್ಮಿಕರ ತಪಾಸಣೆ ಬಂಟ್ವಾಳದಲ್ಲೇ ನಡೆಸಲಾಯಿತು. ಅವರನ್ನು ಅಲ್ಲಿಂದ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಕರೆತಂದು, ಪುತ್ತೂರಿಗೆ ಸಂಬಂಧಿಸಿ ಪುತ್ತೂರು ಬಸ್‌ನಿಲ್ದಾಣದಲ್ಲಿ ಕಾರ್ಮಿಕರ ವೈದ್ಯಕೀಯ ತಪಾಸಣೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ತಹಶೀಲ್ದಾರ್ ರಮೇಶ್ ಬಾಬು ಅವರ ಉಪಸ್ಥಿತಿಯಲ್ಲಿ ನಡೆಸಲಾಯಿತು. ರೈಲ್ವೇ ನಿಲ್ದಾಣದಲ್ಲಿ ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್, ಎಡಿಷನಲ್ ಎಸ್ಪಿ ಅಮ್ಪೆ ವಿಕ್ರಮ್ ಮತ್ತು ಡಿವೈಎಸ್ಪಿ ದಿನಕರ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಪ್ರಯಾಣಿಕರಿಗೆ ಆಹಾರದ ಪೊಟ್ಟಣ ನೀಡಿ, ಟಿಕೇಟ್ ವ್ಯವಸ್ಥೆ ಕಲ್ಪಿಸಿದರು.

 

ವೀಡಿಯೋಗಾಗಿ 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.