ಪುತ್ತೂರಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಹೆಚ್ಚಳ: ಬೆಳ್ಳಂಬೆಳಗ್ಗೆ 4 ಬಸ್ ಬೆಂಗಳೂರಿಗೆ, ಮಂಗಳೂರಿಗೆ ಅರ್ಧಗಂಟೆಗೊಮ್ಮೆ ಬಸ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಘೋಷಿಸಲಾದ ಲಾಕ್ ಡೌನ್ ಕಾರಣದಿಂದ ಮಾರ್ಚ್ 22 ರಿಂದ ತಮ್ಮ ಓಡಾಟವನ್ನು ಸ್ಥಗಿತಗೊಳಿಸಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗಳು 57ದಿನಗಳ ಬಳಿಕ ಮೇ 19ಕ್ಕೆ ತಮ್ಮ ಓಡಾಟವನ್ನು ಸೀಮಿತ ಸಂಖ್ಯೆಯಲ್ಲಿ ಆರಂಭಿಸಿದ್ದು, ಮೇ 20ರಂದು ಎರಡನೆ ದಿನ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ ಸಂಚಾರವನ್ನು ಹೆಚ್ಚಿಸಿದೆ.

ಪುತ್ತೂರು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಘಟಕದಿಂದ ಬಸ್‌ಗಳ ಬೇಡಿಕೆಗಳಿಗೆ ಅನುಗುಣವಾಗಿ ಸುಳ್ಯ, ಉಪ್ಪಿನಂಗಡಿ, ಮಂಗಳೂರು ಕಡೆಗಳಿಗೆ ಆರಂಭದ ಬಸ್‌ಗಳ ಸಂಚಾರ ಸಂಖ್ಯೆ ಹೆಚ್ಚಳಗೊಂಡಿದೆ. ಪುತ್ತೂರು ಬಸ್‌ನಿಲ್ದಾಣದಿಂದ ಬೆಳ್ಳಂಬೆಳಗೆ 2 ಸ್ಲೀಪರ್ ಮತ್ತು 2 ರಾಜಹಂಸ ಸೇರಿ ಒಟ್ಟು 4 ಬಸ್‌ಗಳು ಬೆಂಗಳೂರಿಗೆ ತೆರಳಿತ್ತು. ಬಳಿಕದ ಅವಧಿಯಲ್ಲಿ ರಾತ್ರಿ ಗಂಟೆ 7ಕ್ಕೆ ಬೆಂಗಳೂರಿಗೆ ಇನ್ನೊಂದು ಬಸ್ ಹೊರಡಲಿದೆ. ಈಗಾಗಲೇ ಸುಳ್ಯ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ವಿಟ್ಲ ಕಡೆ ಬಸ್‌ಗಳು ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹೊರಡುತ್ತಿದ್ದು, ಮಂಗಳೂರು ಸ್ಟೇಟ್‌ಬ್ಯಾಂಕ್‌ಗೆ ಪ್ರತಿ ಅರ್ಧಗಂಟೆಗೊಮ್ಮೆ ಬಸ್ ಸಂಚಾರ ಮಾಡುತ್ತಿದೆ.

ನಿಲ್ದಾಣದಲ್ಲಿ ಮುನ್ನೆಚ್ಚರಿಕೆ ಕ್ರಮ:

ಬಸ್‌ಗಳ ಓಡಾಟಕ್ಕೆ ಅನುಮತಿಗೆ ಸಂಬಂಧಿಸಿ ಒಂದು ಬಸ್‌ನಲ್ಲಿ ಕೇವಲ 30 ಜನರಿಗೆ ಪ್ರಯಾಣ ಮಾಡುವ ಅವಕಾಶ ನೀಡಲಾಗಿದೆ. ಬಸ್‌ನಲ್ಲಿ ಪ್ರಯಾಣಿಸುವವರು ಮಾಸ್ಕ್ ಧರಿಸಬೇಕು ಎಂಬ ನಿಬಂದನೆಗೊಳಪಟ್ಟು ಬಸ್‌ಗಳ ಓಡಾಟ ನಡೆಸುತ್ತಿತ್ತು. ಬಸ್ ನಿಲ್ದಾಣದ ಪ್ರವೇಶ ಮಾಡುವ ಮುನ್ನ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಸ್ಯಾನಿಟೈಸರ್ ನೀಡಲಾಗುತ್ತದೆ. ಟಕೇಟ್ ಬುಕ್ಕಿಂಗ್ ಮಾಡಲು ಅಂತರ ಕಾಯ್ದು ಕೊಳ್ಳಲು ಮಾರ್ಕ್ ಮಾಡಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.