ದೇವಾಲಯದಲ್ಲಿ ಸೇವಾ ಪೂಜಾ ಕೈಕಂರ್ಯಗಳ ನೇರ ವೀಕ್ಷಣೆಗೆ ಆನ್‌ಲೈನ್ ಮೂಲಕ ಅವಕಾಶ | ಆನ್‌ಲೈನ್‌ನಲ್ಲಿ ಸೇವೆ ಕಾಯ್ದಿರಿಸಲು ಆಪ್, ತಂತ್ರಾಂಶ ಅಭಿವೃದ್ಧಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೊನಾ ಕಾರಣಕ್ಕೆ ದೇವಸ್ಥಾನಗಳೆಲ್ಲ ಬಾಗಿಲು ಮುಚ್ಚಿ ದೇವರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದ್ದು ಭಕ್ತಾಧಿಗಳಿಗೆ ದೇವರು, ಸೇವಾ ಪೂಜಾ ಕೈಕಂರ್ಯಗಳ ನೇರ ವೀಕ್ಷಣೆಗೆ ಆನ್‌ಲೈನ್ ಮೂಲಕ ವ್ಯವಸ್ಥೆ ಕಲ್ಪಿಸಲು ಮುಜರಾಯಿ ಇಲಾಖೆ ನಿರ್ಧರಿಸಿದೆ. ಅಲ್ಲದೆ “ಎ” ವರ್ಗದ ದೇವಾಲಯಗಳಲ್ಲಿ ನಡೆಯುವ ಎಲ್ಲ ಸೇವೆಗಳ ವಿವರ ಮತ್ತು ಆನ್‌ಲೈನ್ ಮೂಲಕ ಕಾಯ್ದಿರಿಸಬಹುದಾದ ಸೇವೆಗಳ ಮಾಹಿತಿಯನ್ನು ಭಕ್ತರಿಗೆ ನೀಡುವ ಉದ್ದೇಶದಿಂದ ಮೊಬೈಲ್ ಆಪ್ ಮತ್ತು ವೆಬ್ ಆಧಾರಿತ ತಂತ್ರಾಂಶ ಅಭಿವೃದ್ಧಿಪಡಿಸಲು ಕೂಡಾ ಇಲಾಖೆ ತೀರ್ಮಾನಿಸಿದೆ.

ಆನ್‌ಲೈನ್ ನೇರ ಪ್ರಸಾರಕ್ಕೆ ಸಂಬಂಧಿಸಿದಂತೆ ಇಲಾಖೆಯ ಆಯುಕ್ತರು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ದೇವಸ್ಥಾನಗಳ ಕಾರ್ಯನಿರ್ವಾಹಕರಿಗೆ ಪತ್ರ ಬರೆದಿದ್ದಾರೆ. ಅವರವರ ವ್ಯಾಪ್ತಿಯಲ್ಲಿರುವ ದೇವಾಲಯಗಳಲ್ಲಿ ನಡೆಯುವ ಸೇವಾ ಪೂಜಾ ಕೈಕಂರ್ಯಗಳನ್ನು ಆಯಾ ದೇವಾಲಯದ ರೂಢಿ, ಸಂಪ್ರದಾಯ ಮತ್ತು ಆಚರಣೆಗೆ ಒಳಪಟ್ಟು ಆನ್‌ಲೈನ್ ಮೂಲಕ ವೀಕ್ಷಣೆಗೆ ವ್ಯವಸ್ಥೆ ಒದಗಿಸಬಹುದಾದ ದೇವಾಲಯಗಳ ಪಟ್ಟಿ ನೀಡುವಂತೆ ಪತ್ರದಲ್ಲಿ ಕೋರಿದ್ದಾರೆ.

ಮೊಬೈಲ್ ಆಪ್ ಮತ್ತು ವೆಬ್‌ಸೈಟ್ ಅಭಿವೃದ್ಧಿಪಡಿಸುವ ಯೋಜನೆಯನ್ನು ಉಚಿತವಾಗಿ ಒದಗಿಸಲು ಕೆಲವು ಷರತ್ತುಗಳನ್ನು ವಿಧಿಸಿ ಮೈಸೂರಿನ ಸ್ಪಿರಿಚುವಲ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಅನುಮತಿ ನೀಡಲಾಗಿದೆ. ದೇವಾಲಯಗಳಲ್ಲಿ ನಡೆಯುವ ಎಲ್ಲ ಸೇವೆಗಳ ವಿವರ ಮತ್ತು ದರ, ಪೂಜಾ ಕೈಕಂರ್ಯದ ಸಮಯ ಹಾಗೂ ಆನ್‌ಲೈನ್ ಮೂಲಕ ಕಾಯ್ದಿರಿಸಬಹುದಾದ ಸೇವೆಗಳು, ಕಾದಿರಿಸಲು ಲಭ್ಯವಿರುವ ದಿನ, ಈವರೆಗೆ ಬುಕ್ ಆಗಿರುವ ದಿನಾಂಕ, ದಿನಕ್ಕೆ ಎಷ್ಟು ಸೇವೆ ಮಾಡಬಹುದು, ಪ್ರಸಾದ ತಲುಪಿಸಲು ಸಾಧ್ಯವೇ ಮತ್ತಿತರ ಮಾಹಿತಿಯನ್ನು ದೇವಸ್ಥಾನಗಳು ನೀಡಬೇಕಾಗಿದೆ.

ಆದೇಶ ಬಂದಿಲ್ಲ: ಈ ಎಲ್ಲಾ ಬೆಳವಣಿಗೆ ಕುರಿತು “ಎ” ವರ್ಗದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಯಾವುದೇ ಆದೇಶ ಬಂದಿಲ್ಲ ಎಂದು ದೇವಾಲಯದ ಕಾರ್ಯನಿರ್ವಾಹಣಾಧಿಕಾರಿಗಳು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.