ಜ್ವರದಿಂದ ಬಳಲುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿ ವರದಿ ನೆಗೆಟಿವ್: ನಿಟ್ಟಿಸಿರು ಬಿಟ್ಟ ಕಬಕ ಪರಿಸರ – ಸರಕಾರಿ ಆಸ್ಪತ್ರೆಯಲ್ಲೇ ಕೋರಂಟೈನ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಬಕ ಗ್ರಾ.ಪಂ ವಠಾರದಲ್ಲಿ ಜ್ವರದಿಂದ ಬಳಲುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರ ಕೊರೋನಾ ವೈದ್ಯಕೀಯ ಪರೀಕ್ಷೆ ವರದಿ ನೆಗೆಟಿವ್ ಬಂದಿದ್ದು, ಕಬಕ ಪರಿಸರ ಇದೀಗ ನಿಟ್ಟಿಸಿರು ಬಿಡುವಂತಾಗಿದೆ. ವ್ಯಕ್ತಿಗೆ ಪ್ರಥಮ ವರದಿ ನೆಗೆಟಿವ್ ಬಂದಿದೆಯಾದರೂ ಆತನನ್ನು ಇನ್ನು ಕೆಲವು ದಿನಗಳ ತನಕ ಸರಕಾರಿ ಆಸ್ಪತ್ರೆಯಲ್ಲಿ ಕೋರಂಟೈನ್ ಮಾಡಲಾಗುವುದು ಎಂದು ತಿಳಿದು ಬಂದಿದೆ.

ಜ್ವರದಿಂದ ಬಳಲುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿ ಮೇ 16 ಮಧ್ಯಾಹ್ನದ ಬಳಿಕ ಕಬಕ ಗ್ರಾ.ಪಂ ವಠಾರದಲ್ಲೇ ಇರುವುದು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿತ್ತು. ಮೇ 17ರಂದು ತಾಲೂಕು ಆಡಳಿತ ಪೊಲೀಸರ ನೆರವಿನೊಂದಿಗೆ ಆ ವ್ಯಕ್ತಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಈ ನಡುವೆ ಆತ ಜ್ವರದಿಂದ ಬಳಲುತ್ತಿದ್ದರಿಂದ ಆತನ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇದೀಗ ಆತನ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಮಾಹಿತಿ ಲಭ್ಯವಾಗಿದ್ದರಿಂದ ಕಬಕ ಪರಿಸರದವರು ನೆಮ್ಮದಿಯಿಂದ ನಿಟ್ಟಿಸಿರು ಬಿಡುವಂತಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.