ಈದುಲ್ ಫಿತರ್ ದಿನ ವಿದ್ಯುತ್ ವ್ಯತ್ಯಯ ಆಗದಿರಲಿ ಎಸ್.ಡಿ.ಪಿ.ಐಯಿಂದ ಮೆಸ್ಕಾಂ ಇಲಾಖೆಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮುಸ್ಲಿಮರ ಪವಿತ್ರ ಹಬ್ಬವಾದ ಈದುಲ್ ಫಿತರ್ ದಿನ ವಿದ್ಯುತ್ ವ್ಯತ್ಯಯ ಮಾಡದಿರಿ ಎಂದು ಮೆಸ್ಕಾಂ ಇಲಾಖೆಗೆ ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಮನವಿ ಮಾಡಲಾಗಿದೆ.

ಮೇ.23ರಂದು ಪುತ್ತೂರು, ಸುಳ್ಯ, ಕಡಬ ತಾಲೂಕಿನ ಹಲವೆಡೆ ಕಾಮಗಾರಿ ಪ್ರಯುಕ್ತ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದೆಂದು ಮೆಸ್ಕಾಂ ಇಲಾಖೆ ಪತ್ರಿಕೆಯಲ್ಲಿ ಪ್ರಕಟನೆ ಹೊರಡಿಸಿತ್ತು. ಮುಸ್ಲಿಮರ ಪವಿತ್ರ ಹಬ್ಬವಾದ ಈದುಲ್ ಫಿತರ್ ಕೂಡ ಅದೇ ದಿನ ಆಗುವುದನ್ನು ಗಮನಿಸಿ ಯಾವುದೇ ಕಾರಣಕ್ಕು ಆ ದಿನ ವಿದ್ಯುತ್ ಪೂರೈಕೆ ಕಡಿತಗೊಳಿಸಬಾರದೆಂದು ಮನವಿಯಲ್ಲಿ ತಿಳಿಸಿದೆ.

ಮೆಸ್ಕಾಂ ಸ್ಪಂಧನೆ
ಮನವಿ ಸ್ವೀಕರಿಸಿದ ಮೆಸ್ಕಾಂ ಇಂಜಿನಿಯರ್ ಅವರು ವಿದ್ಯುತ್ ಪೂರೈಕೆ ಕಡಿತವನ್ನು ಈದುಲ್ ಫಿತರ್ ಹಬ್ಬವನ್ನು ಗಮನದಲ್ಲಿ ಇಟ್ಟುಕೊಂಡು ಭಾನುವಾರಕ್ಕೆ ಬದಲಾಗಿ ಮಂಗಳವಾರಕ್ಕೆ ಮುಂದೂಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ ಎಂದು ಎಸ್.ಡಿ.ಪಿ.ಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಬೂಬಕ್ಕರ್ ಸಿದ್ಧಿಕ್ ಮಾಹಿತಿ ನೀಡಿದ್ದಾರೆ. ಮನವಿ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್, ಉಪಾದ್ಯಕ್ಷ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಶ್ರಫ್ ಬಾವು, ನಗರ ಅಧ್ಯಕ್ಷ ಬಶೀರ್ ಕೂರ್ನಡ್ಕ, ಹಾಗು ಹಿರಿಯ ಮುಖಂಡರಾದ ಮಹಮ್ಮದ್ ಪಿಬಿಕೆ ಮತ್ತು ಉಮ್ಮರ್ ಕೂರ್ನಡ್ಕ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.