ಮಡಿವಾಳರಿಗೆ ಸರಕಾರದ ಪರಿಹಾರ ಮಂಜೂರಾತಿಯಲ್ಲಿ ತೊಂದರೆ ಆಗಬಾರದು – ಮಠಂದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಡಿವಾಳ ವೃತ್ತಿಯನ್ನು ನಿರ್ವಹಿಸುವ ಕುಲಕಸುಬುದಾರರಿಗೆ ರಾಜ್ಯ ಸರಕಾರವು ರೂ 5000 ಏಕ ಕಂತಿನ ಪರಿಹಾರ ಮಂಜೂರು ಮಾಡಿದ್ದು ಮಡಿವಾಳ ವೃತ್ತಿಯನ್ನು ನಿರ್ವಹಿಸುತ್ತಿರುವ ಫಲಾನುಭವಿಗಳಿಗೆ ಪರಿಹಾರದ ಧನ ಮಂಜೂರಾತಿ ಕುರಿತಂತೆ ಯಾವುದೇ ಹಂತದಲ್ಲಿ ತೊಂದರೆಯಾಗಬಾರದು ಎಂದು ಶಾಸಕ ಸಂಜೀವ ಮಠಂದೂರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮನೆಯಲ್ಲಿಯೇ ಮಡಿವಾಳ ವೃತ್ತಿಯನ್ನು ನಿರ್ವಹಿಸುವವರಿಗೆ ಅಂಗಡಿ ಲೈಸೆನ್ಸ್ ಇಲ್ಲ ಎಂಬ ತಕರಾರನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಲ್ಲಿನ ಅಭಿವೃದ್ದಿ ಅದಿಕಾರಿಗಳು ತೆಗೆಯುತ್ತಿದ್ದಾರೆ ಎಂಬ ದೂರುಗಳು ಬಂದಿದ್ದು, ಮಡಿವಾಳ ವೃತ್ತಿ ಒಂದು ಕುಲ ಕಸುಬು. ಅದನ್ನು ಮಡಿವಾಳ ಸಮುದಾಯ ತಲೆಮಾರುಗಳಿಂದ ನಿರ್ವಹಿಸುತ್ತಾ ಬಂದಿದೆ. ಆದಕಾರಣ ಅಂಗಡಿ ಇಲ್ಲ ಎಂಬ ಕಾರಣಕ್ಕೆ ಮಡಿವಾಳ ವೃತ್ತಿ ನಿರ್ವಹಿಸುತ್ತಿರುವ ಯಾವುದೇ ಫಲಾನುಭವಿಯ ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ. ಈ ಕುರಿತು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಸೂಚನೆ ನೀಡಿದ್ದಾರೆ.

ರೂ. 5ಸಾವಿರ ಪರಿಹಾರ ಘೋಷಣೆ:
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಡಿವಾಳ ವೃತ್ತಿ ನಿರ್ವಹಿಸುತ್ತಿರುವವರು ಕಳೆದ ಎರಡು ತಿಂಗಳುಗಳಿಂದ ನಿರುದ್ಯೋಗಿಗಳಾಗಿದ್ದು ಜೀವನ ನಿರ್ವಹಣೆಯ ಸಂಕಷ್ಟದಲ್ಲಿ ಇದ್ದಾರೆ. ಇವರ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಡಿವಾಳ ವೃತ್ತಿ ನಿರ್ವಹಿಸುವರಿಗೆ ಒಂದು ಬಾರಿಯ ರೂ 5000 ಪರಿಹಾರವನ್ನು ಘೋಷಿಸಿದ್ದಾರೆ. ಸಂಕಷ್ಟದ ದಿನಗಳಲ್ಲಿ ಮಡಿವಾಳರಿಗೆ ಸಹಾಯ ಹಸ್ತ ಚಾಚಲು ಸರ್ಕಾರ ಮುಂದಾಗಿದೆ. ಹೀಗಾಗಿ ಮಡಿವಾಳ ವೃತ್ತಿಯ ಫಲಾನುಭವಿಗಳಿಗೆ ಪರಿಹಾರ ಧನ ಸಿಗಲು ಯಾವುದೇ ತೊಂದರೆಯಾಗಬಾರದು ಎಂದು ಶಾಸಕ ಮಠಂದೂರು ಅಭಿಪ್ರಾಯಪಟ್ಟಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.