ಕಲ್ಲರ್ಪೆಯಲ್ಲಿ ಸರಣಿ ರಸ್ತೆ ಅಪಘಾತ – ರಾಂಗ್ ಸೈಡ್ ಬಂದು ಹೊಡೆದ ಕಾರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕಲ್ಲರ್ಪೆ ಎಂಬಲ್ಲಿ ಮೇ 22 ರಂದು ಸಂಜೆ ಸರಣಿ ರಸ್ತೆ ಅಪಘಾತ ನಡೆದಿದೆ. ರಿಕ್ಷಾ ಚಾಲಕ ಸೇರಿದಂತೆ ಈರ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಸುಳ್ಯ ಕಡೆಯಿಂದ ಬರುತ್ತಿದ್ದ ಕಾರು ಎರಡು ರಿಕ್ಷಾ ಮತ್ತು ಒಂದು ಬೈಕ್ ಗೆ ಗುದ್ದಿದೆ. ಕಾರಿನ ಚಾಲಕ ಸಂಪೂರ್ಣ ರಾಂಗ್ ಸೈಡ್ ಲ್ಲಿ ಬಂದು ಈ ಅಪಘಾತ ಎಸಗಿದ್ದಾರೆ. ಗುದ್ದಿದ ರಭಸಕ್ಕೆ ಒಂದು ರಿಕ್ಷಾ 10 ಮೀಟರ್ ಗಳಷ್ಟು ಹಿಂದಕ್ಕೆ ದೂಡಲ್ಪಟ್ಟು ಮಗುಚಿ ಬಿದ್ದಿದೆ.

ರಿಕ್ಷಾ ಚಾಲಕ ಆರ್ಲಪದವಿನ ಗೋವಿಂದ ನಾಯ್ಕ್ ಮತ್ತು ಈರ್ವರು ಪ್ರಯಾಣಿಕರು ಗಾಯಗೊಂಡಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.