ಸತ್ಯಸಾಯಿ ಮಂದಿರ ಪುತ್ತೂರು, 08251-237999, 231161. ಮೊ.9449386525

ಪುತ್ತೂರಿನ ಹೃದಯ ಭಾಗವಾದ ಕೋರ್ಟ್ ರಸ್ತೆಯಲ್ಲಿ ಪುರಾತನ ಸತ್ಯಸಾಯಿ ಮಂದಿರವಿದೆ. ಈ ಮಂದಿರದಲ್ಲಿ ಆದ್ಯಾತ್ಮಿಕ ಚಿಂತಣೆಗಳು, ಸಾಯಿಬಾಬರವರ ನಾಮಸ್ಮರಣೆ ನಡೆಯುವುದು ಮಾತ್ರವಲ್ಲದೆ ಪ್ರತಿ ಶನಿವಾರ ಗ್ರಾಮಗಳಿಗೆ ತೆರಳಿ ಸಾಯಿಬಾಬರವರ ನಾಮಸ್ಮರಣೆಯನ್ನು ಮಾಡಲಾಗುತ್ತದೆ.
೧೯೬೨ರಲ್ಲಿ ಭಗವಾನ್ ಸತ್ಯಸಾಯಿ ಭಕ್ತವೃಂದ, ೧೯೬೬ರಲ್ಲಿ ಸತ್ಯಸಾಯಿ ಭಜನಾ ಮಂಡಳಿ, ೧೯೭೪ರಲ್ಲಿ ಸತ್ಯಸಾಯಿ ಸೇವಾ ಸಮಿತಿಗಳ ರಚನೆಯಾಯಿತು. ಬಳಿಕ ೧೯೭೯ನೇ ಇಸವಿಯಲ್ಲಿ ಈಗಿರುವ ಸತ್ಯಸಾಯಿ ಮಂದಿರದ ಸ್ಥಾಪನೆಯಾಗಿದೆ. ಈ ಸಂದರ್ಭದಲ್ಲಿ ಭಗವಾನ್ ಸತ್ಯಸಾಯಿ ಬಾಬರವರು ಪುತ್ತೂರಿಗೆ ಭೇಟಿ ನೀಡಿದ್ದರು. ಮಂದಿರದಲ್ಲಿ ಶಿವರಾತ್ರಿ ಆಚರಣೆ, ರಾಮನವಮಿ ದಿನ ಸೂರ್ಯೋದಯದಿಮದ ಸೂರ್ಯಾಸ್ತಮಾನದ ತನಕ ಹಾಗೂ ಲಲಿತಾ ಪಂಚಮಿಯಂದು ಸೂರ್ಯಾಸ್ತದಿಂದ ಸೂರ್ಯೋದಯದ ತನಕ ಅಖಂಡ ನಾಮ ಸ್ಮರಣೆ, ಸತ್ಯಸಾಯಿ ಆರಾಧನ ಮಹೋತ್ಸವ, ಈಶ್ವರಾಂಬಾ ದಿನಾಚರಣೆ, ಶ್ರಾವಣ ಮಾಸದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀಕೃಷ್ಣ ಜನ್ಮಾಷ್ಠಮಿ, ಮಂದಿರ ಪ್ರವೇಶ ದಿನಾಚರಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುದೆ. ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲದೆ ಪ್ರತಿ ಮಂಗಳವಾರ ಅಪರಾಹ್ನ ಉಚಿತ ವೈದ್ಯಕೀಯ ಶಿಬಿರ, ವರ್ಷದಲ್ಲಿ ಎರಡು ಬಾರಿ ದಂತ ಚಿಕಿತ್ಸಾ ಶಿಬಿರ ಹಾಗೂ ನಾಲ್ಕು ಬಾರಿ ನೇತ್ರಾ ಚಿಕಿತ್ಸಾ ಶಿಬಿರಗಳು ನಡೆಯುತ್ತಿದೆ. ಶೈಕ್ಷಣಿಕತೆಗೆ ಪೂರಕವಾಗಿ ಬಾಲ ವಿಕಾಸ ತರಗತಿಗಳು, ಉಚಿತ ಲೈಬ್ರೇರಿಯೂ ಮಂದಿರದ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ದೊರೆಯತ್ತದೆ. ಆಡಳಿತ ಸಮಿತಿಯ ಸಂಚಾಲಕರಾಗಿ ಚಂದ್ರಶೇಖರ ನಾಯಕ್ ಅಮೈ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳಾ ವಿಭಾಗದ ಸಂಚಾಲಕರಾಗಿ ಪ್ರಮುಖ ಟಿ ರೈ, ಸೇವಾ ಸಂಯೋಜಕರಾಗಿ ಕಾಂಚನ ಮಾಲಾ, ಆಧ್ಯಾತ್ಮಿಕ ಸಂಯೋಜಕಿಯಾಗಿ ಸೀತಾಲಕ್ಷ್ಮೀ, ಯುವ ಸಂಯೋಜಕಿಯಾಗಿ ಸುಲೋಚನ ಹಾಗೂ ಪುರುಷ ವಿಭಾಗದ ಆಧ್ಯಾತ್ಮಿಕ ಸಂಯೋಜಕರಾಗಿ ಸಂಪತ್ ಕುಮಾರ್, ಸೇವಾ ಸಂಯೋಜಕರಾಗಿ ಡಾ. ಶಿವಾನಂದ, ಅಧ್ಯಯನ ಗೋಷ್ಠಿಯ ಮುಖ್ಯಸ್ಥರಾಗಿ ಮಧುಸೂದನ ಡಿ, ಯುವ ಸಂಯೋಜಕರಾಗಿ ಉಮೇಶ ಪೂಜಾರಿ ಬಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷರಾಗಿ ಡಾ. ಸತ್ಯ ಸುಂದರ್ ರಾವ್ ಹಾಗೂ ಕಾರ್ಯದರ್ಶಿಯಾಗಿ ಶಿವರಾಮ ಕಜೆ ಮತ್ತು ಮಂದಿರದ ಉಸ್ತುವಾರಿಯಾಗಿ ಪದ್ಮನಾಭರವರು ಕಾರ್ಯನಿರ್ವಹಿಸುತ್ತಿದ್ದರು.

Copy Protected by Chetan's WP-Copyprotect.