ಕೃಷಿ ಇಲಾಖೆ

* ಕೃಷಿ ಭಾಗ್ಯ ಯೋಜನೆಯಡಿ ಕೃಷಿಹೊಂಡ/ ಪಂಪ್‌ಸೆಟ್/ ತುಂತುರು ನೀರಾವರಿ ಘಟಕ, ಶೇಡ್‌ನೆಟ್ ವಿತರಣೆ, ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವುದು ಸಮರ್ಪಕ ಮಳೆನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದನೆ, ಆದಾಯ ಹೆಚ್ಛಿಸುವುದು ಬಿದ್ದ ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ದ ಸ್ಥಳದಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ ಸಂದಿಗ್ಧ ಹಂತದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು.

* ಮಣ್ಣು ಆರೋಗ್ಯ ಅಭಿಯಾನದ ಮೂಲಕ ಇಲಾಖೆಯಿಂದ ಮಣ್ಣು ಮಾದರಿ ಸಂಗ್ರಹಿಸಿ ಮಣ್ಣು ಆರೋಗ್ಯ ಚೀಟಿ ವಿತರಣೆ,

* ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೃಷಿ ಹೊಂಡ / ಷಾಲೋವೆಲ್, ಎರೆಹುಳು ಉತ್ಪಾದನಾ ಘಟಕಗಳು ಮತ್ತು ದನದ ಕೊಟ್ಟಿಗೆಗಳ ನಿರ್ಮಾಣ, ಐಎಫ್‌ಎಸ್ ಮಾದರಿ ಘಟಕಗಳು

* ಕೃಷಿ ಪರಿಕರಗಳಾದ ಬಿತ್ತನೆ ಬೀಜ, ಸತುವಿನ ಸಲ್ಫೇಟ್ ಮುಂತಾದ ಲಘು ಪೋಷಕಾಂಶ, ಕೃಷಿ ಸುಣ್ಣ, ಸಸ್ಯ ಸಂರಕ್ಷಣ ಔಷಧಿ, ಸಾವಯವ ಕೃಷಿ ಪರಿಕರ ಮುಂತಾದವುಗಳನ್ನು ಶೇ. ೫೦ರ ರಿಯಾಯಿತಿಯಲ್ಲಿ ವಿತರಿಸುವುದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ರೈತರಿಗೆ ಶೇ. ೫ರ ರಿಯಾಯಿತಿಯಿರುತ್ತದೆ.

* ಸಾಮಾನ್ಯ ರೈತರಿಗೆ ಶೇ. ೫೦ರ ರಿಯಾಯಿತಿಯಲ್ಲಿ ಪವರ್ ಟಿಲ್ಲರ್, ಸಣ್ಣ ಟ್ರ್ಯಾಕ್ಟರ್, ಪವರ್ ವೀಡರ್, ಪವರ್ ಸ್ಪ್ರೇಯರ್, ಭತ್ತದ ನಾಟಿಯಂತ್ರ, ಭತ್ತ ಕಟ್ಟಾವು ಯಂತ್ರ, ಮುಂತಾದ ಉಪಕರಣ ವಿತರಣೆ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ರೈತರಿಗೆ ವಿಶೇಷ ಘಟಕ ಯೋಜನೆ/ ಗಿರಿಜನ ಉಪಯೋಜನೆಯಲ್ಲಿ ಶೆ.೯೦ರ ರಿಯಾಯಿತಿಯಲ್ಲಿ ವಿತರಣೆ ಮತ್ತು ತುಂತುರು ನೀರಾವರಿ ಶೆ.೯೦ರ ರಿಯಾಯಿತಿಯಲ್ಲಿ ವಿತರಣೆ.

* ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ರೈತರಿಗೆ ಪವರ್ ಟಿಲ್ಲರ್‌ಗೆ ರೂ. ೧.೦೦ಲಕ್ಷ ರಿಯಾಯಿತಿ ಹಾಗೂ ಟ್ರ್ಯಾಕ್ಟರ್‌ಗೆ ರೂ. ೨.೦೦ಲಕ್ಷ ರಿಯಾಯಿತಿಯಿದೆ.

* ಕೃಷಿ ಉತ್ಪನ್ನ ಸಂಸ್ಕರಣೆ ಯೋಜನೆಯಲ್ಲಿ ರೈತರಿಗೆ ಶೇ. ೫೦ರ ರಿಯಾಯಿತಿಯಲ್ಲಿ ಸಾಮಾನ್ಯ ರೈತರಿಗೆ/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ರೈತರಿಗೆ ಶೇ. ೯೦ರ ರಿಯಾಯಿತಿಯಲ್ಲಿ ಟರ್ಪಾಲ್ ವಿತರಣೆ

* ಕೃಷಿ ಯಂತ್ರಧಾರೆ ಮೂಲಕ ಕೃಷಿ ಯಂತ್ರೊಪಕರಣಗಳನ್ನು ಕಡಿಮೆ ಬಾಡಿಗೆಯಲ್ಲಿ ದೊರೆಯುವಂತೆ ಉಪ್ಪಿನಂಗಡಿ ಹಾಗೂ ಕಡಬದಲ್ಲಿ ಸೇವಾಕೇಂದ್ರ ಸ್ಥಾಪಿಸಲಾಗಿರುತ್ತದೆ.

* ಸಾವಯವ ಕೃಷಿಗೆ ಉತ್ತೇಜನ, ಆಯ್ದ ಕ್ಲಸ್ಟರ್‌ನಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆ ಮೂಲಕ ಸಾವಯವ ಕ್ಲಸ್ಟರ್‌ನ್ನಾಗಿ ಅಭಿವೃದ್ಧಿ ಮುಖ್ಯವಾಗಿ ತರಬೇತಿ, ಪ್ರಾಮಾಣೀಕರಣ ಪಾರಂಪಾರಿಕ ಸಾವಯವ ಗೊಬ್ಬರ ಘಟಕ, ಜೈವಿಕ ಸಾರಜನಕ ಕೊಯ್ಲು, ದ್ರವರೂಪದ ಜೈವಿಕ ಗೊಬ್ಬರ, ಜೈವಿಕ ಪೀಡೆನಾಶಕ, ಎರೆಹುಳು ತಯಾರಿಕ ಘಟಕ ಇತ್ಯಾದಿ.

* ಆಯ್ದು ಜಲಾನಯನ ಪ್ರದೇಶದಲ್ಲಿ ಕಿಂಡಿಅಣೆಕಟ್ಟು, ಕೃಷಿ ಅರಣ್ಯ ತೋಟಗಾರಿಕೆ ಸೇರಿದಂತೆ ಜಲಾನಯನ ಅಭಿವೃದ್ಧಿ ಪ್ರೋತ್ಸಾಹ ಮತ್ತು ಮೇವು ಕಿರುಚೀಲ ವಿತರಣೆ,

* ಪ್ರಾತ್ಯಕ್ಷಿತೆ, ತರಬೇತಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ, ಆತ್ಮ ಯೋಜನೆ ಮೂಲಕ ಭತ್ತ ಬೆಳೆಯುವ ರೈತರಿಗೆ ಪ್ರೋತ್ಸಾಹಿಸಿ ಉತ್ಪಾದನೆ ಹೆಚ್ಚಿಸಲು ಕ್ರಮ ಈ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಕೃಷಿ ಪ್ರಶಸ್ತಿ ಯೋಜನೆ ಅನುಷ್ಠಾನ,

* ಯಾಂತ್ರೀಕೃತ ಭತ್ತದ ನಾಟಿ ಮಾಡುವ ರೈತರಿಗೆ ರೂ. ೧೭೫/- ಹೆಕ್ಟೇರಿಗೆ ಪ್ರೋತ್ಸಾಹ ಧನ.

ಸವಲತ್ತು ಪಡೆಯುವ ವಿಧಾನ:
* ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಸವಲತ್ತು ಪಡೆಯಲು ಭತ್ತ, ದ್ವಿದಳ ಧಾನ್ಯ ಬೆಳೆ ಕಡ್ಡಾಯವಾಗಿದ್ದು ಉಳಿದ ಯೋಜನೆಗಳಲ್ಲಿ ಭತ್ತದ ಬೆಳೆ ಬೆಳೆದ ರೈತರಿಗೆ ಆದ್ಯತೆ ನೀಡಿ ಎಲ್ಲಾ ರೈತರನ್ನು ಪರಿಗಣಿಸಲಾಗುವುದು.
ಪುತ್ತೂರು ಉಪ್ಪಿನಂಗಡಿ ಮತ್ತು ಕಡಬದಲ್ಲಿರುವ ರೈತಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಆಧಾರ್ ಕಾರ್ಡ್‌ನ ಪ್ರತಿ, ಬ್ಯಾಂಕ್ ಖಾತೆ, ರೂ.೨೦ರ ಛಾಪಾ ಕಾಗದದ ಮೇಲೆ ಮುಚ್ಚಳಿಕೆ, ಗ್ರಾಮ ಪಂಚಾಯಿತಿ ಶಿಫಾರಸ್ಸು ಇತ್ಯಾದಿ ಮಾಹಿತಿಯು ಕೃಷಿ ಯಾಂತ್ರೀಕರಣ/ ಲಘುನೀರಾವರಿ ಯೋಜನೆಯಡಿಲ್ಲಿ ವೆಬ್ ಪೋರ್ಟಲ್‌ನಲ್ಲಿ ಅಪ್ ಲೋಡ್ ಮಾಡಲು ಅವಶ್ಯವಿರುತ್ತದೆ. ಕೃಷಿ ಭಾಗ್ಯ ಯೋಜನೆಯ ಫಲಾನುಭವಿಗಳು ಕನಿಷ್ಠ ೧ ಎಕ್ರೆ ಜಮೀನು ಹೊಂದಿರಬೇಕು. ಉಳಿದಂತೆ ಕೃಷಿ ಪರಿಕರಗಳಿಗೆ ಪಹಣಿಯೊಂದಿಗೆ ಸರಳ ನಮೂನೆಯ ಅರ್ಜಿ ಸಾಕಾಗುವುದು.

ಪ್ಯಾಕೇಜ್‌ನ ಘಟಕಗಳು ಹಾಗೂ ಸಹಾಯಧನ ವಿವರ ಈ ಕೆಳಕಂಡಂತಿದೆ:

“ಕೃಷಿಯಂತ್ರ ಧಾರೆ” ಬಾಡಿಗೆ ಆಧಾರಿತ ಸೇವಾಕೇಂದ್ರಗಳಿಂದ ಬಾಡಿಗೆಗೆ ದೊರೆಯುವ ಯಂತ್ರೋಪಕರಣಗಳು ಉಪ್ಪಿನಂಗಡಿ (ಪುಳಿತ್ತಾಡಿ)ಮತ್ತು ಕಡಬ ಹೋಬಳಿಗಳಲ್ಲಿ

ರೈತರಿಗೆ ಸಲಹೆ – ವಿಷಯ :
ಭತ್ತದ ಬೆಳೆಗೆ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ
ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಕಾರ್‍ಯಕ್ರಮವನ್ನು ೨೦೧೮-೧೯ನೇ ಸಾಲಿನ ಮುಂಗಾರು ಹಂಗಾಮಿಗೆ ಮುಂದುವರಿಸಿ ಸರ್ಕಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದರಿ ಯೋಜನೆಯಡಿ ಮುಂಗಾರು ಹಂಗಾಮಿಗೆ ಮಂಗಳೂರು ತಾಲೂಕಿನ ಮಂಗಳೂರು-ಎ ಹೋಬಳಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ಹೋಬಳಿಯ ೨೦೬ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸಲು ಅವಕಾಶವಿರುತ್ತದೆ. ಮಳೆಯಾಶ್ರಿತ ಭತ್ತ ಬೆಳೆಯುವ ಎಲ್ಲಾ ರೈತರು ಹೆಕ್ಟೇರಿಗೆ ನಿಗದಿಪಡಿಸಿರುವ ಪ್ರಾರಂಭಿಕ ಇಳುವರಿ ಮೊತ್ತ ರೂ.೫೪೦೦೦/-ಕ್ಕೆ ಶೇ. ೨ರ ರೈತರ ಭಾಗದ ವಿಮಾ ಕಂತು ರೂ. ೧೦೦೦/- (ರೂ.೪೩೨/ ಎಕ್ರೆ)ಗಳನ್ನು ಸಮೀಪ ಬ್ಯಾಂಕ್‌ನಲ್ಲಿ ತುಂಬಿ ನೋಂದಾಯಿಸಿಕೊಳ್ಳಬಹುದು. ೨೦೧೮ರ ಮುಂಗಾರು ಹಂಗಾಮಿನಲ್ಲಿ ಬೆಳೆ ಸಾಲ ಪಡೆಯುವ ಮತ್ತು ಪಡೆಯದ ರೈತರು ಬ್ಯಾಂಕುಗಳಿಗೆ ಘೋಷಣೆಗಳನ್ನು ಕಲ್ಪಿಸಲು ದಿನಾಂಕವನ್ನು ದಿ: ೧೪.೦೮.೨೦೧೮ಕ್ಕೆ ನಿಗದಿಪಡಿಸಲಾಗಿದೆ. ಈ ಯೋಜನೆಯು ಬೆಳೆಸಾಲ ಪಡೆದ ರೈತರಿಗೆ ಕಡ್ಡಾಯವಾಗಿದ್ದು, ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ ಖಾತೆ/ಪಾಸ್ ಪುಸ್ತಕ/ ಕಂದಾಯ ರಶೀದಿ ಯಾವುದರಲ್ಲೂ ಒಂದನ್ನು ನೀಡಿ ನೋಂದಣಿ ಮಾಡಿಸಬಹುದು. ಹಾಗೂ ಬೆಳೆ ಬಿತ್ತಿದ/ನಾಟಿ ಮಾಡಿದ ೩೦ದಿನದೊಳಗೆ ಅಥವಾ ನಿಗದಿಪಡಿಸಿರುವ ದಿನದೊಳಗೆ ಯಾವುದು ಮುಂಚೆಯೋ ಆ ಅವಧಿಯೊಳಗೆ ಬ್ಯಾಂಕಿನ ತಮ್ಮ ಘೋಷಣೆಗಳನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ವಿವರಗಳಿಗೆ ಸ್ಥಳೀಯ ವಾಣಿಜ್ಯ/ಗ್ರಾಮೀಣ ಸಹಕಾರಿ ಬ್ಯಾಂಕ್ (ಸಾಲ ಸಂಸ್ಥೆಗಳನ್ನು ಹೋಬಳಿ ರೈತ ಸಂಪರ್ಕ ಕೇಂದ್ರ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು/ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಲು ಕೋರಿದೆ. ಫೋ: 08251-230238, 8277931068.