





ಪುತ್ತೂರು: ಪೆರುವಾಜೆ ಗ್ರಾಮದ ಕುಂಡಡ್ಕ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ,ಸ್ವಾಮಿ ಕೊರಗಜ್ಜ ಮತ್ತು ಸಪರಿವಾರ ದೈವಗಳ ದೈವಸ್ಥಾನದ ವಠಾರದಲ್ಲಿ ನ.2ರಂದು ಶ್ರೀ ದುರ್ಗಾ ಫ್ರೆಂಡ್ಸ್ ಕುಂಡಡ್ಕ ಇದರ ವತಿಯಿಂದ ಪುರುಷರ 510 ಕೆ.ಜಿ.ವಿಭಾಗದ 8 ಜನರ ಮುಕ್ತ ಗ್ರಿಪ್ ಮಾದರಿಯ ಹಗ್ಗ ಜಗ್ಗಾಟ ಸ್ಪರ್ಧೆ ಶ್ರೀ ದುರ್ಗಾ ಟ್ರೋಫಿ 2025 ನಡೆಯಲಿದೆ.


ವಿಜೇತ ತಂಡಗಳನ್ನು ಪ್ರಥಮ 5555 ನಗದು ಹಾಗೂ ಟ್ರೋಫಿ ,ದ್ವಿತೀಯ 3333 ನಗದು ಹಾಗೂ ಟ್ರೋಫಿ, ತೃತೀಯ 2222 ನಗದು ಹಾಗೂ ಟ್ರೋಫಿ, ಚತುರ್ಥ 1111 ಮತ್ತು ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ಎಂದು ಸಮಿತಿ ಪ್ರಕಟಣೆ ತಿಳಿಸಿದೆ.














