ಸಿ ಎ ಪರೀಕ್ಷೆ ಫಲಿತಾಂಶ ಪ್ರಕಟ : ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಾಧನೆ

0

ಪುತ್ತೂರು: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ನಡೆಸುವ ಸಿ ಎ ಇಂಟರ್ಮೇಡಿಯೇಟ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ 2023-24 ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮಹೇಂದ್ರ ಗೋಪಾಲ್ ವಿಭಾಸ್ . ಕೆ ಉತ್ತೀರ್ಣರಾಗಿದ್ದಾರೆ. ಇವರು ಪುತ್ತೂರಿನ ಪರ್ಲಡ್ಕದ ಪ್ರಸಾದ್ ಕೆ.ವಿ.ಎಲ್.ಎನ್ ಮತ್ತು ಅನುಪಮಾ ಎಸ್ ದಂಪತಿ ಪುತ್ರ.

ಅದೇ ರೀತಿ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ 2024-25ನೇ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಅಪರ್ಣ ಅಡಿಗ ಎ. (ಕಾಸರಗೋಡು ಜಿಲ್ಲೆಯ ಪೆರ್ಲದ ಗೋಪಾಲಕೃಷ್ಣ ಅಡಿಗ ಹಾಗೂ ಆಶಾ ಅಡಿಗ ದಂಪತಿಗಳ ಪುತ್ರಿ), ಅನುಶ್ರೀ (ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಪಿ. ಸತೀಶ್ ಮರಡಿತ್ತಾಯ ಹಾಗೂ ದೀಪಾ ದಂಪತಿಗಳ ಪುತ್ರಿ), ಹಾಗೂ 2023-24 ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಸಂಸ್ಕೃತಿ ಜೈನ್(ಪುತ್ತೂರು, ಬನ್ನೂರಿನ ಜಯಕುಮಾರ್ ಜೈನ್ ಮತ್ತು ಕೆ ವಿದ್ಯಾವತಿ ದಂಪತಿ ಪುತ್ರಿ), ಕವನ ಜಿ ಎನ್ (ಸೋಮವಾರಪೇಟೆಯ ನವೀನ ಜಿ ಇ ಮತ್ತು ಸುವರ್ಣ ಜಿ ಎನ್ ದಂಪತಿ ಪುತ್ರಿ), ಸಂಜನಾ ಭಟ್ (ಬಿ.ಸಿ ರೋಡಿನ ಬಿ ಶ್ರೀಕಾಂತ್ ಭಟ್ ಮತ್ತು ಶಾಂತಿ ಭಟ್ ದಂಪತಿ ಪುತ್ರಿ) ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುತ್ತಾರೆ.
ಇವರನ್ನು ಕಾಲೇಜು ಆಡಳಿತಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.


LEAVE A REPLY

Please enter your comment!
Please enter your name here