ಕಬಕ: ಬೌದ್ಧಿಕ ವಿಕಲತೆಯ ಬಾಲಕಿ, ಆಕೆಯ ತಾಯಿಗೆ ಪುನರ್ವಸತಿ ಕಲ್ಪಿಸಿ ಮೆಚ್ಚುಗೆಗೆ ಪಾತ್ರರಾದ ಸಮಾಜ ಸೇವಕರು

0

ಪುತ್ತೂರು: ಕಬಕ ಗ್ರಾಮದ ಬೈಪದವು ಮನೆ ಎಂಬಲ್ಲಿ ವಾಸವಿರುವ ಮಹಿಳೆ ಹಾಗೂ ಸುಮಾರು 13 ವರ್ಷ ವಯೋಮಾನದ ಬೌದ್ಧಿಕ ವಿಕಲತೆಯ -ಮಾನಸಿಕ ಹಾಗೂ ದೈಹಿಕ ವಿಕಲತೆ ಇರುವ ಆಕೆಯ ಪುತ್ರಿಯನ್ನು ಸಮಾಜಸೇವಕರಾಗಿರುವ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ನೇತೃತ್ವದಲ್ಲಿ, ಕಬಕ ಗ್ರಾಮ ಪಂಚಾಯತ್, ಶಿಶು ಅಭಿವೃದ್ಧಿ ಇಲಾಖೆ ಪುತ್ತೂರು, ದ. ಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಂಗಳೂರು ಇವರ ಸಹಕಾರದೊಂದಿಗೆ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದ ಆವರಣದಲ್ಲಿರುವ ಪ್ರೇರಣಾ ವಿಶೇಷ ಮಕ್ಕಳ ಶಾಲೆ ಹಾಗೂ ಪುನರ್ವಸತಿ ಕೇಂದ್ರಕ್ಕೆ ದಾಖಲು ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಘಟನೆಯ ಹಿನ್ನೆಲೆ:
ಕೆಲ ತಿಂಗಳುಗಳ ಹಿಂದೆ ಕಬಕ ಗ್ರಾಮ ನಿವಾಸಿ ಸುಮಾರು 38 ವಯೋಮಾನದ ಮಹಿಳೆಯೊಬ್ಬರ ಗಂಡ ಮೃತಪಟ್ಟಿದ್ದು, ಪ್ರಸ್ತುತ ಮಹಿಳೆ ತನ್ನ ಬೌದ್ಧಿಕ ವಿಕಲತೆ ಇರುವ ಬಾಲಕಿಯ ಜೊತೆಗೆ ವಾಸವಾಗಿದ್ದು, ತನ್ನ ಬಾಲಕಿಯ ಲಾಲನೆ ಪಾಲನೆ ಮಾಡುವಲ್ಲಿ ತುಂಬಾ ಸಂಕಷ್ಟ ಎದುರಿಸುತ್ತಿರುವ ಕುರಿತು ಆಕೆಗೆ ಹಾಗೂ ಆಕೆಯ ಪುತ್ರಿಗೆ ಪುನರ್ವಸತಿ ಕಲ್ಪಿಸುವ ಕುರಿತು ಕಬಕ ಗ್ರಾಮ ಪಂಚಾಯತ್ ಹಿಂದಿನ ಪಿಡಿಒ ಆಗಿರುವ ಆಶಾ ಅವರಲ್ಲಿ ವಿನಂತಿಸಿದಂತೆ ಆಶಾ ಅವರು ಈ ವಿಚಾರವನ್ನು ಪುತ್ತೂರು ಉಮೇಶ್ ನಾಯಕ್ ಅವರಿಗೆ ಮಾಹಿತಿ ನೀಡಿದ್ದರು. ನ.4ರಂದು ಮಹಿಳೆ ಗ್ರಾಮ ಪಂಚಾಯತ್‌ಗೆ ತನ್ನ ಹಾಗೂ ತನ್ನ ಮಗುವಿಗೆ ಪುನರ್ವಸತಿ ಕಲ್ಪಿಸುವಂತೆ ವಿನಂತಿ ಮಾಡಿದ್ದರು. ಅವರ ವಿನಂತಿಯ ಮೇರೆಗೆ ಕಬಕ ಗ್ರಾಮ ಪಂಚಾಯಿತ್ ನ ಪ್ರಸ್ತುತ ಪಿಡಿಒ ಸುಭಾಷ್‌ಚಂದ್ರ ಅವರು ಶಿಶು ಅಭಿವೃದ್ಧಿ ಇಲಾಖೆ ಪುತ್ತೂರು, ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿಗಳಿಗೆ ನೀಡಿದ ವಿನಂತಿ ಪತ್ರದ ಮೇರೆಗೆ ಮಹಿಳೆ ಮತ್ತು ಬಾಲಕಿಯನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಇವರ ಸಹಕಾರ ಹಾಗು ಮಾರ್ಗದರ್ಶನದೊಂದಿಗೆ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದ ಆವರಣದಲ್ಲಿ ಇರುವ ಪ್ರೇರಣ ವಿಶೇಷ ಮಕ್ಕಳ ಶಾಲೆ ಹಾಗು ವಸತಿ ನಿಲಯ ಇಲ್ಲಿಗೆ ದಾಖಲು ಮಾಡಿ ಪುನರ್ವಸತಿ ಕಲ್ಪಿಸಲಾಗಿದೆ. ಕಾರ್ಯಚರಣೆ ನಡೆಸುತ್ತಿರುವ ವೇಳೆ ಆಕೆಯ ಸಂಬಂಧಿಗಳು ಭಾವುಕರಾದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಎ.ಸಿ.ಡಿ.ಪಿ.ಒ ಮಂಗಳ ಕಾಳೆ, ಆಪ್ತ ಸಮಾಲೋಚಕರಾದ ಪ್ರತಿಮಾ, ಮಕ್ಕಳ ರಕ್ಷಣಾಧಿಕಾರಿ ವಝೀರ್ ಅಹಮ್ಮದ್ ರವರು ಈ ಕಾರ್ಯದಲ್ಲಿ ಪಾಲ್ಗೊಂಡರು., ಪುನರ್ವಸತಿ ಕಾರ್ಯಕರ್ತೆ ಶೀಲಾವತಿ, ಕಬಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲ ಹಾಗೂ ಉಪಾಧ್ಯಕ್ಷೆ ಗೀತಾ, ಪಂಚಾಯತ್ ಸದಸ್ಯರಾದ ಸಾಭಾ ಹಾಗೂ ಉಮ್ಮರ್ ಫಾರುಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದು ಸಹಕರಿಸಿದರು.

ಇತ್ತೀಚಿಗೆ ಆರು ತಿಂಗಳ ಹಿಂದೆ ವಿಶೇಷ ಮಕ್ಕಳ ಶಿಕ್ಷಕಿ ಶಶಿಕಲಾ ಅವರ ನೇತೃತ್ವದಲ್ಲಿ ಸವಣುರಿನ ವಿದ್ಯಾರಶ್ಮಿ ವಿದ್ಯಾಲಯದ ಆವರಣದಲ್ಲಿ ಪ್ರಾರಂಭವಾದ ಪ್ರೇರಣಾ ವಿಶೇಷ ಮಕ್ಕಳ ಶಾಲೆ ಹಾಗೂ ಪುನರ್ವಸತಿ ಕೇಂದ್ರ ಹಾಗೂ ವಿಕಲಚೇತನರ ಕೌಶಲ್ಯಾಭಿವೃದ್ಧಿ ಕೇಂದ್ರ – ಹಿರಿಯ ನಾಗರಿಕರ ಸೇವಾ ಆಶ್ರಮದಲ್ಲಿ ಇವರಿಬ್ಬರನ್ನು ಉಚಿತವಾಗಿ ದಾಖಲು ಮಾಡಿಕೊಂಡಿರುವುದು ಅಭಿನಂದನಾರ್ಹ ಸಂಗತಿ. ಈ ವಿಶೇಷ ಮಗುವಿನ ಲಾಲನೆ ಪಾಲನೆಗೆ ದತ್ತು ತೆಗೆದುಕೊಳ್ಳುವ ಆಸಕ್ತ ದಾನಿಗಳು ಶಶಿಕಲಾ ಇವರನ್ನು 9945748696 ಸಂಪರ್ಕಿಸಬಹುದಾಗಿದೆ ಎಂದು ಉಮೇಶ್ ನಾಯಕ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here