





ಪುತ್ತೂರು: ಕಬಕ ಗ್ರಾಮದ ಪೋಳ್ಯದಲ್ಲಿ ಸ್ಕೂಟರ್ನ ಹಿಂಬದಿಗೆ ಕಾರೊಂದು ಡಿಕ್ಕಿಯಾದ ಘಟನೆಗೆ ಸಂಬಂಧಿಸಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನ.11ರಂದು ಸಂಜೆ ಕಾರು ಚಾಲಕ ಮಹಮ್ಮದ್ ತೌಫಿಕ್ ಎಂಬವರು ಚಲಾಯಿಸುತ್ತಿದ್ದ ಕಾರು ಕಬಕ ಗ್ರಾಮದ ಪೋಳ್ಯ ಸಮೀಪ ಕಾರಿನ ಮುಂದಿದ್ದ ಶಶಿಕುಮಾರ್ ಎಂಬವರ ಚಲಾಯಿಸುತ್ತಿದ್ದ ಸ್ಕೂಟರ್ನ ಹಿಂಬದಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಶಶಿಕುಮಾರ್ ಅವರು ರಸ್ತೆಗೆ ಬಿದ್ದು ಎಡಕೈ ಮೂಳೆ ಮುರಿತಗೊಂಡು, ಬಲ ಕೈಗೆ ಬೆರಳುಗಳಿಗೆ ಗಾಯವಾಗಿದೆ. ತಲೆಗೆ ಮತ್ತು ಸೊಂಟಕ್ಕೆ ಗುದ್ದಿದ ಗಾಯವಾಗಿದೆ. ಗಾಯಾಳು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಘಟನೆ ಕುರಿತು ಶಶಿಕುಮಾರ್ ಅವರ ತಂದೆ ವಸಂತ ಕುಮಾರ್ ಅವರು ನೀಡಿದ ದೂರಿನಂತೆ ಆರೋಪಿ ಕಾರು ಚಾಲಕ ಮಹಮ್ಮದ್ ತೌಫಿಕ್ ಅವರ ವಿರುದ್ಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕಲಂ: 281, 125(ಬಿ) ಬಿಎನ್ಎಸ್. ಯಂತೆ ಪ್ರಕರಣ ದಾಖಲಾಗಿರುತ್ತದೆ.














