





ಪುತ್ತೂರು : ಪುತ್ತೂರು ಸ್ಟೀಲ್ ಪ್ಯಾಬ್ರಿಕೇಶನ್ ಅಷೋಶಿಯೇಷನ್ ಇದರ ತ್ರೈಮಾಸಿಕ ಸಭೆ ನ.11ರಂದು ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ನಡೆಯಿತು.


ಸಂಘದ ಗೌರವಾಧ್ಯಕ್ಷ ಶಿವಪ್ರಸಾದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಸಂಘದ ಕಾರ್ಯದರ್ಶಿ ದಯಾನಂದ ಕೆಮ್ಮಾಯಿ ವರದಿ ವಾಚಿಸಿದರು.
ವೇದಿಕೆಯಲ್ಲಿ ಕೈಗಾರಿಕಾ ಸಂಘದ ಮೋಹನ್ ಬೊಳ್ಳಾಡಿ, ಓಕಿಮಾ ಸಿಸ್ಟಮ್ ನ ಮ್ಯಾನೆಜಿಂಗ್ ಡೈರೆಕ್ಟರ್ ಶರತ್ ರವಿ ಉಪಸ್ಥಿತರಿದ್ದರು. ಜೇಕಬ್ ಡಿಸೋಜ ಸಂಘದ ಕುರಿತು ಸಲಹೆ ಸೂಚನೆ ನೀಡಿದರು.





ಲಿಯೋ ಮಾರ್ಟಿಸ್ ಪ್ರಾರ್ಥಿಸಿ, ಸಂಘದ ಅಧ್ಯಕ್ಷ ಸುಧೀರ್ ರೈ ತೆಂಕಿಲ ಸ್ವಾಗತಿಸಿ, ಮೋಹನ್ ಗೌಡ ಪಡೀಲು, ಚಂದ್ರಶೇಖರ ಮತ್ತು ಈಶ್ವರ್ ಸಹಕರಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಒಸಿಮಾ ಸಿಸ್ಟಮ್ಸ್ ಪ್ರೈ ಲಿ ಮಂಗಳೂರು ವಹಿಸಿದ್ದರು.









