





ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ಕಾಲೇಜಿನ ಇಂಟರ್ಯಾಕ್ಟ್ ಕ್ಲಬ್ ಸಹಭಾಗಿತ್ವದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ “Your Roadmap to SUCCESS” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನ 11ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಸರ್ಕಾರಿ ಮಹಿಳಾ ಕಾಲೇಜಿನ ಆಂಗ್ಲ ಭಾಷಾ ಪ್ರಾಧ್ಯಾಪಕರಾದ ಪ್ರೊ. ನಂದಕಿಶೋರ್ ಎಸ್. ಮಾತನಾಡಿ, ಮುಂದಿನ ಐದರಿಂದ ಹತ್ತು ವರ್ಷಗಳಲ್ಲಿ ಆಗಬಹುದಾದ ಬದಲಾವಣೆಗಳು, ಅದಕ್ಕೆ ಹೊಂದಿಕೊಳ್ಳಬೇಕಾದ ವಿದ್ಯಾರ್ಥಿಗಳು ಸಾಂಪ್ರದಾಯಿಕ ಓದಿನ ಜೊತೆಗೆ ಇತ್ತೀಚೆಗೆ ಆಗುತ್ತಿರುವ ತಾಂತ್ರಿಕ ಸಂಶೋಧನೆಗಳು, ಕೃತಕ ಬುದ್ಧಿಮತ್ತೆಯ ಆವಿಷ್ಕಾರಗಳು, ಔದ್ಯೋಗಿಕ ಅತಂತ್ರಗಳು, ಕುರಿತು ಮಾಹಿತಿ ತಿಳಿದುಕೊಂಡು, ಪ್ರಸ್ತುತ ವಿದ್ಯಾಮಾನಗಳಿಗೆ ಅಪ್ಡೇಟ್ ಆಗಬೇಕು ಇಲ್ಲದಿದ್ದರೆ ತಾವೇ ಔಟ್ಡೇಟೆಡ್ ಆಗುವ ಅಪಾಯವಿದೆ ಎಂಬುದನ್ನು ಮುಂದಿನ ಹತ್ತು ವರ್ಷಗಳಲ್ಲಿ ಇಲ್ಲದಾಗವ 90 ಮಿಲಿಯನ್ ಉದ್ಯೋಗಗಳು ಮತ್ತು ಅದೇ ಸಂದರ್ಭದಲ್ಲಿ ತೆರೆದುಕೊಳ್ಳುವ 110 ಮಿಲಿಯನ್ ಕೃತಕ ಮತ್ತೆ ಆಧಾರಿತ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿ, ನಾವು ನಮ್ಮ ಸರ್ವಾಂಗೀಣ ಬೆಳವಣಿಗೆಗೆ ಮಹತ್ವ ಕೊಟ್ಟಾಗ ಮಾತ್ರ ಮುಂದೆ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯ ಎಂದು ಅಂಕಿ-ಅಂಶಗಳನ್ನು ಆಧರಿಸಿ ಮಾಹಿತಿ ನೀಡಿದರು.





ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ, ರೋಟರಿ ಸಿಟಿ ಅಧ್ಯಕ್ಷ ರೊ. ಉಲ್ಲಾಸ್ ಪೈ ಮತ್ತು ಇಂಟರ್ಯಾಕ್ಟ್ ಅಧ್ಯಕ್ಷೆ ಇಂಟರ್ಯಾಕ್ಟರ್ ಆಶೆಲ್ ಜೇನ್ ಡಿ’ ಕಾಸ್ತ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರೊ.ರಾಮಚಂದ್ರ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿ,
ಕಾಲೇಜಿನ ವಿದ್ಯಾರ್ಥಿ ಜೆಸ್ವಿನ್ ವಂದಿಸಿದರು.ಕಾಲೇಜಿನ ಬೋದಕ ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









