ಅಂಬಿಕಾದ ಪ್ರತೀಕ್ಷಾ ಶೆಣೈಗೆ ಅವಳಿ ಕಂಚಿನ ಪದಕ-ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ತೃತೀಯ ಸ್ಥಾನ

0

ಪುತ್ತೂರು: ಕರ್ನಾಟಕ ಅಕ್ವಾಟಿಕ್ ಸೆಂಟರ್ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಪುತ್ತೂರಿನ ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪ್ರತೀಕ್ಷಾ ಶೆಣೈ ತೃತೀಯ ಸ್ಥಾನದೊಂದಿಗೆ ಎರಡು ಕಂಚಿನ ಪದಕ ಗೆದ್ದಿದ್ದಾರೆ. ನ.24ರಿಂದ 27ರವರೆಗೆ ನಡೆದ ಕರ್ನಾಟಕ ಶಾರ್ಟ್ ಕೋರ್ಸ್ ಅಕ್ವಾಟಿಕ್ ಚಾಂಪಿಯನ್ ಶಿಪ್‌ನಲ್ಲಿ ಪುತ್ತೂರಿನ ಎಂ.ನರಸಿಂಹ ಶೆಣೈ ಮತ್ತು ಶ್ರೀಲಕ್ಷ್ಮಿ ಶೆಣೈ ದಂಪತಿಯ ಪುತ್ರಿ ಪ್ರತೀಕ್ಷಾ 50 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಹಾಗೂ 2೦೦ ಮೀಟರ್ ಬ್ರೆಸ್ಟ್ ಸ್ಟ್ರೋಕ್ ಸ್ಪರ್ಧೆಗಳಲ್ಲಿ ತೃತೀಯ ಸ್ಥಾನಗಳಿಸಿದರು.

LEAVE A REPLY

Please enter your comment!
Please enter your name here