




ಪುತ್ತೂರು: ಪುತ್ತೂರು ಕೆಎಸ್ಆರ್ಟಿಸಿ ಕೋಟಿ ಚೆನ್ನಯ ಬಸ್ನಿಲ್ದಾಣದ ಸಹಾಯಕ ಸಂಚಾರ ನಿರೀಕ್ಷಕ ಸುರೇಶ್ ಅವರು ನ.30ರಂದು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಡಿ.1ರಂದು ಮುಕ್ರಂಪಾಡಿ ಘಟಕದಲ್ಲಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮಾಡಲಾಯಿತು.



ಕೆಎಸ್ಆರ್ಟಿಸಿ ವಿಭಾಗೀಯ ತಾಂತ್ರಿಕ ಅಭಿಯಂತರ ವೆಂಕಟೇಶ್, ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್, ವಿಭಾಗೀಯ ಕಾರ್ಯಾಧ್ಯಕ್ಷ ಲೋಕೇಶ್ವರ, ಲೆಕ್ಕಪತ್ರ ಮೇಲ್ವಿಚಾರಕ ಪೂರ್ಣೇಶ್, ರಮೇಶ್, ಸುರೇಶ್ ಅವರ ಮನೆಯವರು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು. ಮಾಧವ ಶೆಣೈ ಸ್ವಾಗತಿಸಿ, ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ವಂದಿಸಿದರು. ವೆಂಕಟ್ರಮಣ ಭಟ್ ಕಾರ್ಯಕ್ರಮ ನಿರೂಪಿಸಿದರು.













