ನಾಳೆ(ಡಿ.10) ಕುಂಬ್ರ ಕೆ.ಐ.ಸಿ.ಯಲ್ಲಿ ‘ಸಮಸ್ತ 100’ ಪ್ರಚಾರ ಸಮ್ಮೇಳನ-ಸಿರಾಜುದ್ದೀನ್ ಖಾಸಿಮಿಯವರಿಂದ ಮುಖ್ಯ ಪ್ರಭಾಷಣ

0

ಪುತ್ತೂರು: ಸಮಸ್ತ 100ನೇ ವರ್ಷದ ಹಿನ್ನೆಲೆಯಲ್ಲಿ ಮುಂದಿನ ವರ್ಷ ಅಂತರಾಷ್ಟ್ರೀಯ ಮಹಾ ಸಮ್ಮೇಳನ ನಡೆಯಲಿದ್ದು ಅದರ ಪ್ರಚಾರ ಮಹಾ ಸಮ್ಮೇಳನ ಡಿ.10ರಂದು ಮಗ್ರಿಬ್ ನಮಾಜಿನ ಬಳಿಕ ಕುಂಬ್ರ ಕೆ.ಐ.ಸಿ ಯಲ್ಲಿ ನಡೆಯಲಿದೆ.

ಸಯ್ಯದ್ ಕೆ ಎಸ್ ಅಲೀ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಝಿ ದುವಾ ನೆರವೇರಿಸಲಿದ್ದಾರೆ.
ಕುಂಬ್ರ ಕೆ.ಐ.ಸಿ.ಯ ಪ್ರಾಧ್ಯಾಪಕರಾದ ಅನೀಸ್ ಕೌಸರಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಕುಂಬ್ರ ಕೆ.ಐ.ಸಿ ಅಧ್ಯಕ್ಷ ಕೆ.ಪಿ ಅಹ್ಮದ್ ಹಾಜಿ ಆಕರ್ಷಣ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂತರ್ ರಾಷ್ಟ್ರೀಯ ಖ್ಯಾತಿಯ ಪ್ರಭಾಷಣಗಾರ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಕೇರಳರವರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here