ಪೆರುವಾಜೆಯಲ್ಲಿ ರಂಜಿಸಿದ ಕನ್ನಡ ಡಿಂಡಿಮ 284

Puttur_Advt_NewsUnder_1
Puttur_Advt_NewsUnder_1

viveka

ಪುತ್ತೂರು: ಸುಳ್ಯ ತಾಲೂಕಿನ ಪೆರುವಾಜೆ ದ.ಕ.ಜಿ.ಪಂ.ಸ.ಹಿ.ಪ್ರಾ. ಶಾಲೆ, ಭಾವೈಕ್ಯ ಯುವಕ ಮಂಡಲ ಪೆರುವಾಜೆ ಹಾಗೂ ಭಾವೈಕ್ಯ ಮಹಿಳಾ ಮಂಡಲ ಪೆರುವಾಜೆ ಇದರ ವಾರ್ಷಿಕೋತ್ಸವ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ ದಂಗವಾಗಿ ದ.26ರಂದು ಶಾಲಾ ರಂಗಮಂದಿರದಲ್ಲಿ ಚಿದಾನಂದ ಕಾಮತ್ ಕಾಸರಗೋಡು ನಿರ್ದೇಶನ ದಲ್ಲಿ ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮದ ೨೮೪ನೇ ಪ್ರದರ್ಶನ ‘ಕನ್ನಡ ಭಕ್ತಿ ಭಾವಗಾನ ನೃತ್ಯ ವೈಭವ’ದೊಂದಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಡಿಂಡಿಮ ಪ್ರತಿಭೆಗಳಾದ ಜಯಪ್ರಕಾಶ್ ಆಚಾರ್ಯ ದರ್ಬೆ, ಕೃತಿಕಾ ಆರ್. ಐತಾಳ್, ನೀಮಾ ಎಚ್. ಕುಂಬ್ರ, ನಿರೀಕ್ಷಾ ಕೆ.ಜೆ., ಹಸ್ತಾ ಆರ್. ಐತಾಳ್, ಶಮಾ ಪರ್ವಿನ್‌ತಾಜ್, ವೈಷ್ಣವಿ ರೈ ಮುಕ್ವೆ, ಅನುಶ್ರೀ ಸಾಮೆತ್ತಡ್ಕ, ಶ್ರೀಜಲ್ ಜೆ. ಪೂಜಾರಿ ಕೆಮ್ಮಾಯಿ, ಸಮೃದ್ಧಿ ಜೆ. ಶೆಟ್ಟಿ ಕೆಮ್ಮಾಯಿ, ಶೃತಿರಂಜಿನಿ ಎಸ್. ಮುಕ್ವೆ, ಪ್ರಜ್ಞಾ ಪಂಜಳ ಭಾಗವಹಿಸಿದ್ದರು. ಇವರೊಂದಿಗೆ ಹಿರಿಯ ಗಾಯಕರುಗಳಾದ ಪುತ್ತೂರು ಚಂದ್ರಶೇಖರ ಹೆಗ್ಡೆ, ಶಿವಾನಂದ ಶೆಣೈ ದರ್ಬೆ, ಪ್ರೊ. ಮುಬೀನಾ ಪರ್ವಿನ್‌ತಾಜ್ ಧ್ವನಿಗೂಡಿಸಿದರು. ಕೀಬೋರ್ಡ್‌ನಲ್ಲಿ ಲಿಂಗಪ್ಪ ಗೌಡ, ಪ್ಯಾಡ್ ಸಾಯಿರಾಂ ಪುತ್ತೂರು, ತಬ್ಲಾ ಪ್ರಶಾಂತ್ ಸುಳ್ಯ ಸಹಕರಿಸಿದರು.

ಪ್ರಸಾದನದಲ್ಲಿ ವಸಂತಿ ಆರ್. ಐತಾಳ್, ಉಷಾ ಎಚ್. ನಾರಾಯಣ ಕುಂಬ್ರ, ಹರಿಣಾಕ್ಷಿ ಜೆ. ಶೆಟ್ಟಿ, ಜ್ಯೋತಿ ಜನಾದನ್ ಸಹಕರಿಸಿದರು. ಶಶಿಕಲಾ ಬಾಲಕೃಷ್ಣ ರೈ, ಪ್ರೇಮಾ ಟಿ. ನಾಯ್ಕ್, ಶೀಲಾ ಜಯರಾಮ್ ನೇಪಥ್ಯದಲ್ಲಿ ಸಹಕರಿಸಿದರು. ಸ್ಥಳೀಯ ಸಂಘಟಕರಾದ ಪದ್ಮನಾಭ, ಕುಶಾಲಪ್ಪ, ಪ್ರೇಮನಾಥ್ ವಿವಿಧ ಕಾರ್ಯಕ್ರಮ ನಿರೂಪಿಸಿದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.