ಬಲವಂತದ ಬಂದ್ ಯಾರನ್ನೂ ಬಾಧಿಸದಂತೆ ಸಮಾಜ, ರಕ್ಷಣಾ ವ್ಯವಸ್ಥೆ ಕಾಳಜಿ ವಹಿಸಲು ಆಗ್ರಹಿಸಿ ನಿರ್ಣಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುದ್ದಿ ಪತ್ರಿಕೆಯ ಮೂಲಕ ಜನಜಾಗೃತಿ ಮೂಡಿಸಿ ಸಾರ್ವಜನಿಕ ಅಭಿಪ್ರಾಯವನ್ನು ರೂಢಿಸಿಕೊಂಡಿರುವ ಪತ್ರಿಕೆಯ ಸಂಪಾದಕ ಡಾ.ಯು.ಪಿ. ಶಿವಾನಂದರವರ ಕುರಿತು ಬನ್ನೂರು ಹಿರಿಯ ಪ್ರಾಥಮಿಕ ಶಾಲೆಯ ಪೋಷಕರ ಸಭೆಯಲ್ಲಿ ತುಂಬು ಹೃದಯದಿಂದ ಅಭಿನಂದನೆ ವ್ಯಕ್ತಪಡಿಸಲಾಗಿದೆ ಯಲ್ಲದೆ, ಬಲವಂತದ ಬಂದ್ ಇನ್ನು ಮುಂದೆ ಯಾರನ್ನೂ ಬಾಧಿಸದಿರಲಿ, ಈ ನಿಟ್ಟಿನಲ್ಲಿ ಇಡೀ ಸಮಾಜ, ರಕ್ಷಣಾ ವ್ಯವಸ್ಥೆಗಳು ಕಾಳಜಿ ವಹಿಸಲೆಂದೂ, ಬಡ ಜನರು ದೈನಂದಿನ ಕೂಲಿಗಾಗಿ ಅವಲಂಬಿಸಿಕೊಂಡಿರುವ ತಮ್ಮ ದುಡಿಮೆ ಕೈ ತಪ್ಪಿ ಹೋಗದಂತೆ ನೋಡಿಕೊಳ್ಳುವತ್ತ ನಾವೆಲ್ಲರೂ ಮನ ಮಾಡುವುದೆಂದು ಸಭೆಯು ವಿಶೇಷವಾದ ನಿರ್ಣಯವನ್ನು ಅಂಗೀಕರಿಸಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಪಾಟಾಳಿಯವರು ತಿಳಿಸಿದ್ದಾರೆ.

ಬನ್ನೂರು ಶಾಲೆಯ ಪ್ರಭಾರ ಮುಖ್ಯಗುರುಗಳ ಅಕಾಲಿಕ ವರ್ಗಾವಣೆಯಿಂದಾಗಿ ಈಗಾಗಲೇ ಶಿಕ್ಷಕರ ಕೊರತೆಯಿಂದ ಬಳಲುತ್ತಿರುವ ಶಾಲೆಯ ಮಕ್ಕಳ ಪಾಠ ಪ್ರವಚನಗಳಿಗೆ ತುಂಬಾ ಅಡ್ಡಿಯುಂಟು ಮಾಡುತ್ತದೆ. ಸರಕಾರಿ ಅಧಿಕಾರಿಗಳು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಶಿಕ್ಷಕರನ್ನು ವರ್ಗಾಯಿಸುವುದರಿಂದ ಮಕ್ಕಳ ಬೌಧ್ಧಿಕ ಪ್ರಗತಿಯು ಕುಂಠಿತಗೊಳ್ಳುವುದಲ್ಲದೆ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಈ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಭಿಪ್ರಾಯ ಪಡೆಯದೇ ಸ್ವೇಚ್ಚಾಚಾರದ ಅಧಿಕಾರಿಗಳ ನಡೆಯನ್ನು ಸಭೆಯು ಖಂಡಿಸಿರುವುದಲ್ಲದೆ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಇಂತಹ ನಡವಳಿಕೆ ಪುನರಾವರ್ತನೆಯಾಗದಂತೆ ಹಿರಿಯ ಅಧಿಕಾರಿಗಳು ಎಚ್ಚರವಹಿಸಬೇಕೆಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು.ತದನಂತರ ಶಾಲೆಗೆ ಹೆಚ್ಚುವರಿಯಾಗಿ ಮೂವರು ಶಿಕ್ಷಕರ ಸೇವೆಯನ್ನು ಭಾಗಶಃ ಅವಧಿಯಲ್ಲಿ ಒದಗಿಸಿರುವುದನ್ನು ಸಭೆಯು ಪುರಸ್ಕರಿಸಿದೆ.

ಶಾಲೆಗೆ ಸುಮಾರು 6 ಎಕ್ರೆಯಷ್ಟು ಜಮೀನು ಇರುವುದರಿಂದ 88  ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ಗುಣ ಮಟ್ಟದ ಶಿಕ್ಷಣವನ್ನು ನೀಡುವುದಕ್ಕೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದಲ್ಲದೆ ಮಾದರಿ ಸರಕಾರಿ ಶಾಲೆಯಾಗಿ ಮರು ರೂಪೀಕರಣದತ್ತ ಸರಕಾರ, ಶಿಕ್ಷಣ ಇಲಾಖೆ ಗಮನ ಹರಿಸುವಂತೆ ಸಭೆಯು ಒತ್ತಾಯಿಸಿ ನಿರ್ಣಯ ತೆಗೆದುಕೊಂಡಿತು. ಕರ್ನಾಟಕ ಸರಕಾರದ ಸಂಸದೀಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುವ ಶಾಸಕಿ ಶಕುಂತಲಾ.ಟಿ.ಶೆಟ್ಟಿಯವರನ್ನು ಸಭೆಯು ಅಭಿನಂದಿಸಿ ಈ ಶಾಲೆಯ ಪುರೋಭಿವೃದ್ಧಿಯ ಬಗ್ಗೆ ಸರಕಾರದ ಕಡೆಯಿಂದ ಲಭ್ಯ ಯೋಜನೆಗಳನ್ನು ಜಾರಿಗೊಳಿಸುವಂತೆ ವಿನಂತಿಸುವುದೆಂದು ನಿರ್ಣಯಿಸಲಾಯಿತು.

ಬಡ ಮತ್ತು ದುರ್ಬಲ ವರ್ಗದವರ ಮಕ್ಕಳ ಶಾರೀರಿಕ, ಬೌಧ್ಧಿಕ ಬೆಳವಣಿಗೆಯ ದೃಷ್ಠಿಯಿಂದ ಶಾಲೆಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಪ್ರಾಥಮಿಕ ಪೂರ್ವ ಶಿಕ್ಷಣದ ತರಗತಿ(ಎಲ್‌ಕೆಜಿ-ಯುಕೆಜಿ)ಗಳನ್ನು ತೆರೆಯಲು ಸರಕಾರವನ್ನು, ಸ್ಥಳೀಯಾಡಳಿತವನ್ನು ಕೇಳಿಕೊಳ್ಳುವುದೆಂದು ನಿರ್ಣಯಿಸಲಾಯಿತು.ಅಲ್ಲದೆ, ಒಂದನೇ ತರಗತಿಯಿಂದಲೇ ಇಂಗ್ಲೀಷ್ ತರಬೇತಿಗಾಗಿ ಶಿಕ್ಷಕರ ನೇಮಕ ಮಾಡುವ ಬಗ್ಗೆ, ೮ನೇ ತರಗತಿ ಆರಂಭಿಸುವ ಬಗ್ಗೆ, ಆಟದ ಮೈದಾನ ವಿಸ್ತರಣೆ ಮುಂತಾದ ಪ್ರಗತಿಪರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಯುಕ್ತ ಕ್ರಮ  ಜರುಗಿಸಲು ಸರಕಾರ, ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ವಿನಂತಿಸಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.ಎಸ್‌ಡಿಎಂಸಿ ಉಪಾಧ್ಯಕ್ಷೆ ರಾಜೀವಿ ಶೀನಪ್ಪ ಪೂಜಾರಿ, ಸದಸ್ಯರು, ಪೋಷಕರು, ಮಕ್ಕಳ ಹೆತ್ತವರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

ಬನ್ನೂರು ಪ್ರಾಥಮಿಕ ಶಾಲಾ ಪೋಷಕರ ಸಭೆ

ಶಿಕ್ಷಕರ ಕೊರತೆಯಿಂದ ಮಕ್ಕಳ ಪಾಠಕ್ಕೆ ತೊಂದರೆ

ಗುಣಮಟ್ಟದ ಶಿಕ್ಷಣ, ಮೂಲಭೂತ ಸೌಕರ್ಯ ಒದಗಿಸಲು ಸರಕಾರಕ್ಕೆ ಆಗ್ರಹ

ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಲು ಅವಕಾಶ ನೀಡಲು ಒತ್ತಾಯ

ಇಂಗ್ಲೀಷ್ ತರಬೇತಿಗೆ  ಶಿಕ್ಷಕರ ನೇಮಕಕ್ಕೆ ಆಗ್ರಹ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.