ದೋಳ್ಪಾಡಿ- ಮಿಷನ್ 95+, ಪೋಷಕರೊಡನೆ ಸಂವಾದ ಕಾರ್ಯಕ್ರಮ

dolpadi photoಪೋಷಕರು ತ್ಯಾಗ ಮನೋಭಾವದಿಂದ  ಮಕ್ಕಳ ಅಭ್ಯಾಸಕ್ಕೆ ಸಹಕರಿಸಬೇಕು-ಜಿ.ಎಸ್.ಶಶಿಧರ್

ಕಾಣಿಯೂರು: ಮಾರ್ಚ್ 30ರಿಂದ ಎಸ್.ಎಸ್.ಎಲ್.ಸಿ ಮಕ್ಕಳ ಪಬ್ಲಿಕ್ ಪರೀಕ್ಷೆ ನಡೆಯಲಿದ್ದು 13 ದಿವಸಗಳವರೆಗೆ ನಡೆಯಲಿದೆ. ಅಲ್ಲಿಯವರೆಗೆ ಪೋಷಕರು ಟಿ.ವಿ ಇತ್ಯಾದಿಗಳನ್ನು ಬಂದ್ ಮಾಡಿ ಮಕ್ಕಳ ಅಭ್ಯಾಸಕ್ಕೆ ಸಹಕರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್ ಹೇಳಿದರು. ಅವರು ದೋಳ್ಪಾಡಿ ಪ್ರೌಢ ಶಾಲೆಯಲ್ಲಿ ಜ 1ರಂದು ನಡೆದ ಎಸ್.ಎಸ್.ಎಲ್.ಸಿ ಮಕ್ಕಳ ಪೋಷಕರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಣಿಯೂರು ಮತ್ತು ಸವಣೂರು ಕ್ಲಸ್ಟರ್ ಸಿ.ಆರ್ ಪಿ ಜಯಂತ ವೈ ಯವರು ಮೈಂಡ್ ಲೈಟ್ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷೆ ವಿಜಯಾ ರಾಮಕೃಷ್ಣ ವಹಿಸಿದ್ದರು. ಶಾಲಾ ಮುಖ್ಯಗುರು ಸುಬ್ರಹ್ಮಣ್ಯ ಎ ಯು ಪ್ರಾಸ್ತಾವಿಕ ಮಾತಾನಾಡಿದರು. ಸಹಶಿಕ್ಷಕಿ ಉಷಾರಾಣಿ, ಯುಜಿನಾ, ನವೀನ್‌ರವರು ಸಹಕರಿಸಿದರು. ಸಹಶಿಕ್ಷಕ ಜಯಣ್ಣ ಸ್ವಾಗತಿಸಿ, ನಾರಾಯಣ ನಾಯ್ಕ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.