ಬೆಟ್ಟಂಪಾಡಿ: ಬಿ.ಜೆ.ಪಿ ಕಾರ‍್ಯಕರ್ತರ ಸಭೆ : ಮುಂದಿನ 15 ವರ್ಷಗಳಲ್ಲಿ ಭಾರತ ನಂ.1 ದೇಶ – ಸಂಸದ ನಳಿನ್‌ಕುಮಾರ್ ಕಟೀಲ್

Puttur_Advt_NewsUnder_1
Puttur_Advt_NewsUnder_1

5f732688-ac35-413b-b202-a945a9724ae1ನಿಡ್ಪಳ್ಳಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಭಾರತವನ್ನು ಅಭಿವೃದ್ಧಿ ಶೀಲ ರಾಷ್ಟ್ರವನ್ನಾಗಿ ಪರಿವರ್ತಿಸಲು, ಎಲ್ಲಾ ವರ್ಗದ ಜನಸಾಮಾನ್ಯರಿಗೆ ಮೂಲಭೂತ ಸೌಕರ‍್ಯ ಒದಗಿಸಲು ಮತ್ತು ಮುಂದಿನ 15 ವರ್ಷದಲ್ಲಿ ಅಮೇರಿಕ ದೇಶವನ್ನೂ ಹಿಂದಿಕ್ಕಿ ಅಭಿವೃದ್ಧಿಯಲ್ಲಿ ನಂಬರ್ 1 ದೇಶವನ್ನಾಗಿ ಪರಿವರ್ತಿಸಲು ಪ್ರಾಮಾಣಿಕ ಭ್ರಷ್ಟಾಚಾರ ರಹಿತ, ಮಾನವೀಯತೆಯಿಂದ ಪ್ರಯತ್ನಿಸುತ್ತಿದೆ ಎಂದು ದ.ಕ.ಜಿಲ್ಲಾ ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.

ಅವರು ಜ.2ರಂದು ಮುಂಬರುವ ತಾ.ಪಂ. ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯ ಸಿದ್ಧತೆ ಬಗ್ಗೆ ನಡೆದ ಪಾಣಾಜೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ನಿಡ್ಪಳ್ಳಿ, ಬೆಟ್ಟಂಪಾಡಿ, ಇರ್ದೆ, ಪಾಣಾಜೆ, ಒಳಮೊಗ್ರು ಗ್ರಾಮಗಳನ್ನೊಳಗೊಂಡ ಬಿ.ಜೆ.ಪಿ ಕಾರ‍್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರಕ್ಕೆ ಕೇಂದ್ರ ಸಾಕಷ್ಟು ಅನುದಾನವನ್ನು ನೀಡಿದೆ. ಆದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ರಾಜ್ಯ ಸರಕಾರ ವಿಫಲವಾಗಿದೆ. ಯಾವುದೇ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡದೇ ಕೇವಲ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ. ಇದಕ್ಕೆ ನಾವು ಸರಿಯಾದ ಪಾಠವನ್ನು ಮುಂದಿನ ಚುನಾವಣೆಯಲ್ಲಿ ನೀಡಬೇಕಿದೆ. ಆದ ಕಾರಣ ನಾವೆಲ್ಲಾ ಒಗ್ಗಟ್ಟಿನಿಂದ ನಮ್ಮ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದರು.

ಸಭೆಯ ವೇದಿಕೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಅಪ್ಪಯ್ಯ ಮಣುಯಾಣಿ, ಪ್ರಧಾನ ಕಾರ‍್ಯದರ್ಶಿಗಳಾದ ಸಾಜ ರಾಧಾಕೃಷ್ಣ ಆಳ್ವ, ಸಂಜೀವ ಮಠಂದೂರು, ಬೂಡಿಯಾರ್ ರಾಧಾಕೃಷ್ಣ ರೈ, ವೆಂಕಟ್ ದಂಬೆಕೋಡಿ, ಶಾರದಾ ರೈ ಬೆಳ್ತಂಗಡಿ ಉಪಸ್ಥಿತರಿದ್ದರು.

ತಾ.ಪಂ. ಸದಸ್ಯ ಡಿ.ಶಂಭು ಭಟ್ ಸ್ವಾಗತಿಸಿ, ನ್ಯಾಯವಾದಿ ಮಂಜುನಾಥ ಎನ್.ಎಸ್ ವಂದಿಸಿದರು. ಸಭೆಯಲ್ಲಿ ಪಕ್ಷದ ವಿವಿಧ ಮುಖಂಡರು ಪಾಲ್ಗೊಂಡರು.

9ef6ede5-870f-4b33-896c-2211f462b6c3

78b91912-d261-4440-b9ee-eeaa0af63295

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.