ಶಾಸಕರಿಗೆ ಸ್ವಾಗತ ಕೋರಿ ಬ್ಯಾನರ್ ಹಾಕಿದ್ದಕ್ಕೆ ಬಿಜೆಪಿ ಅಸಮಾಧಾನ-ಸಭೆ ಬಹಿಷ್ಕಾರ

Puttur_Advt_NewsUnder_1
Puttur_Advt_NewsUnder_1

*ಸರ್ಕಾರಿ ಕಾರ‍್ಯಕ್ರಮ ಆಗಿರಲಿಲ್ಲ, ಕಾಂಗ್ರೆಸ್ ಕಾರ‍್ಯಕ್ರಮ ಆಗಿತ್ತುಶೌಕತ್ ಆಲಿ

*ಬಿಜೆಪಿಯವರಿಗೆ ಮೊಸರಿನಲ್ಲಿ ಕಲ್ಲು ಹುಡುಕುವುದಷ್ಟೇ ಗೊತ್ತುಬಸ್ತಿಕ್ಕಾರ್

ಉಪ್ಪಿನಂಗಡಿ: ಸರ್ಕಾರಿ ಕಾರ‍್ಯಕ್ರಮದಲ್ಲಿ ಕಾಂಗ್ರೆಸ್ ಬ್ಯಾನರ್ ಅಳವಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಬಿ.ಜೆ.ಪಿ. ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷ, ಮತ್ತು ಕೆಲ ಸದಸ್ಯರುಗಳು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಕಾರ‍್ಯಕ್ರಮದಲ್ಲಿ ಭಾಗವಹಿಸದೆ ತೆರಳಿದ ಘಟನೆ ನಡೆಯಿತು.

ಹಕ್ಕುಪತ್ರ ವಿತರಣೆ ಕಾರ‍್ಯಕ್ರಮ ಇಲ್ಲಿನ ಸುಧೀಂದ್ರ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭಾಂಗಣದ ಹೊರಗೆ ಶಾಸಕಿ ಶಕುಂತಳಾ ಶೆಟ್ಟಿಯವರಿಗೆ ಸ್ವಾಗತ ಕೋರಿ ಬ್ಯಾನರ್ ಅಳವಡಿಸಲಾಗಿತ್ತು. ಇದನ್ನು ಆಕ್ಷೇಪಿಸಿದ ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ ಮತ್ತು ಅಲ್ಲಿನ ಕೆಲ ಸದಸ್ಯರುಗಳು ಹಾಗೂ

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲ ಹೆಗ್ಡೆ ಮತ್ತು ಇತರ ಕೆಲ ಸದಸ್ಯರು ಹಾಗೂ ತಾಲೂಕು ಪಂಚಾಯಿತಿ ಸದಸ್ಯ ಉಮೇಶ್ ಶೆಣೈ ಅವರನ್ನು ಒಳಗೊಂಡಂತೆ ಬಿಜೆಪಿ ಕಾರ‍್ಯಕರ್ತರು ಸಭೆಗೆ ಆಗಮಿಸದೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಸರ್ಕಾರಿ ಕಾರ‍್ಯಕ್ರಮ ಆಗಿರಲಿಲ್ಲಶೌಕತ್ ಆಲಿ “ಕಂದಾಯ ಇಲಾಖೆ ವತಿಯಿಂದ ಕಾರ‍್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಅದರಂತೆ ಬಂದಿದ್ದು, ಆದರೆ ಕಾರ‍್ಯಕ್ರಮ ನಡೆಯುವ ಸಭಾಂಗಣದ ದ್ವಾರದ ಬಳಿ ಕಾಂಗ್ರೆಸ್ ಪಕ್ಷದ ಬ್ಯಾನರ್ ಅಳವಡಿಸಲಾಗಿತ್ತು. ಸರ್ಕಾರಿ ಕಾರ‍್ಯಕ್ರಮವನ್ನು ಕಾಂಗ್ರೆಸ್ ಕಾರ‍್ಯಕ್ರಮವಾಗಿ ಮಾಡಲಾಗಿತ್ತು” ಇದಕ್ಕಾಗಿ ಸಭೆ ಬಹಿಷ್ಕರಿಸಿರುವುದಾಗಿ ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ ಪ್ರತಿಕ್ರಿಯಿಸಿದ್ದಾರೆ.

 ಬಿಜೆಪಿಯವರಿಗೆ ಮೊಸರಿನಲ್ಲಿ ಕಲ್ಲು ಹುಡುಕುವುದಷ್ಟೇ ಗೊತ್ತುಬಸ್ತಿಕ್ಕಾರ್

ಸಭಾಂಗಣದ ಹೊರಗೆ ಯೋಜನೆ ಬಗ್ಗೆ ಅಭಿನಂದಿಸಿ, ಶಾಸಕಿಯವರಿಗೆ ಸ್ವಾಗತ ಕೋರಿ ಬ್ಯಾನರ್ ಹಾಕಿರುವುದಾಗಿರುತ್ತದೆ. “ವಿರೋಧ ಪಕ್ಷದಲ್ಲಿ ಇದ್ದ ಮಾತ್ರಕ್ಕೆ  ಒಳ್ಳೆಯ ಕೆಲಸವನ್ನೂ ವಿರೋಧಿಸಬೇಕೆಂದು ಇಲ್ಲ, ಬಿಜೆಪಿಯಲ್ಲಿರುವ ಕೆಲ ಕಾಮಾಲೆ ಕಣ್ಣುಗಳಿಗೆ ಎಲ್ಲವೂ ಹಳದಿ ಕಂಡಂತೆ, ಎಲ್ಲವೂ ರಾಜಕೀಯವಾಗಿ ಕಾಣುತ್ತದೆ, ಮತ್ತು ಅವರಿಗೆ ಮೊಸರಿನಲ್ಲಿ ಕಲ್ಲು ಹುಡುಕುವುದಷ್ಟೇ ಗೊತ್ತು” ಆದರೆ ಕೆಲವೊಂದು ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡುವುದು ಗ್ರಾಮದ ಅಭಿವೃದ್ಧಿ ದೃಷ್ಠಿಯಿಂದ ಒಳಿತು ಎಂದು ಕೆಡಿಪಿ ಸದಸ್ಯ ಅಶ್ರಫ್ ಬಸ್ತಿಕ್ಕಾರ್ ಪ್ರತಿಕ್ರಿಯಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.