ಉಪ್ಪಿನಂಗಡಿ ಚರ್ಚ್ ಧರ್ಮಗುರು ವಿರುದ್ಧ ಅಸಮಾಧಾನ – ಜ. 10ಕ್ಕೆ ಬೀಗ ಜಡಿದು ಪ್ರತಿಭಟನೆ, ಧರಣಿಗೆ ನಿರ್ಧಾರ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ದೀನರ ಕನ್ಯಾ ಮಾತೆ ಚರ್ಚ್ ಧರ್ಮಗುರು ಚರ್ಚ್ ವಾರ್ಷಿಕ ಹಬ್ಬ (ಸಾಂತ್ ಮಾರಿ) ಆಚರಿಸುವ ವಿಚಾರದಲ್ಲಿ ಭಕ್ತಾಧಿಗಳಿಗೆ ನೀಡಿರುವ ಮಾತಿನಂತೆ ನಡೆದುಕೊಳ್ಳದೆ ಭಕ್ತಾಧಿಗಳಿಗೆ ವಂಚಿಸಿದ್ದಾರೆ, ಧರ್ಮಗುರುಗಳ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸುವ ಸಲುವಾಗಿ ಜ. ೧೦ರಂದು ಚರ್ಚ್‌ಗೆ ಬೀಗ ಹಾಕಿ ಅಹಿಂಸಾತ್ಮಕವಾಗಿ ಪ್ರತಿಭಟನೆ, ಧರಣಿ ನಡೆಸಲು ನಿರ್ಧರಿಸಿರುವ ಬಗ್ಗೆ ಪಾಲನಾ ಸಮಿತಿ ಸದಸ್ಯರುಗಳು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

 ಉಪ್ಪಿನಂಗಡಿ ದೀನರ ಮಾತೆ ಚರ್ಚ್ ಪಾಲನಾ ಸಮಿತಿಯ ಸದಸ್ಯರು ಒಳಗೊಂಡಂತೆ ಸುಮಾರು ೨೦ಕ್ಕೂ ಮಿಕ್ಕಿ ಭಕ್ತಾಧಿಗಳು ಉಪ್ಪಿನಂಗಡಿಯಲ್ಲಿ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಕುಲಕರ್ಣಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಧರ್ಮಗುರುಗಳು ಸರ್ವಾಧಿಕಾರಿಯಾಗಿ ಮೆರೆಯುತ್ತಿದ್ದು, ಇದನ್ನು ಖಂಡಿಸಿ ಶಾಂತಿಯುತ, ಅಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸಲಿದ್ದೇವೆ, ಇದಕ್ಕೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಡಿಸೆಂಬರ್ 13ರಂದು ನಡೆದ ಮಹಾಸಭೆಯಲ್ಲಿ ಸಾಂತ್‌ಮಾರಿ ಹಬ್ಬ ಆಚರಣೆ ವಿಚಾರದಲ್ಲಿ ಗದ್ದಲ ಉಂಟಾಗಿ ಪೊಲೀಸ್ ಮಧ್ಯಪ್ರವೇಶದೊಂದಿಗೆ ಪರಿಸ್ಥಿತಿ ತಿಳಿಯಾಗಿತ್ತು. ತದ ನಂತರ ಚರ್ಚ್ ನಿಯಮ ಮತ್ತು ಪೊಲೀಸರ ಸಲಹೆ ಮೇರೆಗೆ ಗುಪ್ತ ಮತದಾನದ ಮೂಲಕ ಹಬ್ಬ ಆಚರಣೆ ನಿರ್ಧಾರ ಆಗಬೇಕಾಗಿತ್ತು, ಆದರೆ ಧರ್ಮಗುರು ಗುಪ್ತ ಮತದಾನ ಮಾಡದೆ ಚರ್ಚ್ ನಿಯಮವನ್ನು ಗಾಳಿಗೆ ತೂರಿ ಹಬ್ಬ ಆಚರಣೆ ಬಗ್ಗೆ ಸರ್ವಾಧಿಕಾರಿಯಾಗಿ ಆದೇಶ ನೀಡಿದ್ದರು.

 ಇದಕ್ಕೆ ಚರ್ಚ್ ಪಾಲನಾ ಸಮಿತಿ ಸದಸ್ಯರು ಸೇರಿದಂತೆ, ಭಕ್ತಾಧಿಗಳ ಆಕ್ಷೇಪ ಇರುತ್ತದೆ, ಅದಾಗ್ಯೂ ಚರ್ಚ್ ಬೈಲಾ ಪ್ರಕಾರ ವರ್ಷಕ್ಕೆ ಕನಿಷ್ಠ ೪ ಸಾಮಾನ್ಯ ಸಭೆ ಕರೆಯಬೇಕಾಗಿತ್ತು, ಇದ್ಯಾವುದನ್ನೂ ಮಾಡದ ಚರ್ಚ್ ಧರ್ಮಗುರು ವಿರುದ್ಧ ಪ್ರತಿಭಟನೆ, ಧರಣಿ ಅನಿವಾರ‍್ಯವಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರು, ಮನವಿಯಲ್ಲಿ ತಿಳಿಸಲಾಗಿದೆ.

 ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿರುವ ನಿಯೋಗದಲ್ಲಿ ಚಚ್ ಪಾಲನಾ ಸಮಿತಿ ಮಾಜಿ ಕಾರ‍್ಯದರ್ಶಿ ಓಸ್ವಾಲ್ಟ್ ಪಿಂಟೋ, ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಸದಸ್ಯ ಮೈಕಲ್ ವೇಗಸ್, ಚರ್ಚ್ ಪಾಲನಾ ಸಮಿತಿ ಸದಸ್ಯರಾದ ನವೀನ್ ಬ್ರಾಗ್ಸ್, ಮ್ಯಾಕ್ಸಿಂ ಪ್ರಕಾಶ್ ಪಾಸ್, ವಲಯ ಗುರಿಕಾರರಾದ ಸ್ಟೀವನ್ ಮೆಂತೇರೋ, ಜೋನ್ ಫೆರ್ನಾಂಡಿಸ್, ಕೆಥೋಲಿಕ್ ಸಭಾ ಸದಸ್ಯ ಸಿಪ್ರಿಯಾನ್ ವೇಗಸ್, ಪ್ರವೀಣ್ ಸಿಕ್ವೇರ, ಕಾಲಿಸ್ತಾ ಮೆನೇಜಸ್, ವಿನ್ಸೆಂಟ್ ಬ್ರಾಗ್ಸ್, ರೋಬರ್ಟ್ ಡಿ’ಸೋಜಾ ಅವರನ್ನು ಒಳಗೊಂಡಂತೆ ಸುಮಾರು 20 ಮಂದಿ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.