ಒಳಮೊಗ್ರು ಗ್ರಾ.ಪಂ ಸಾಮಾನ್ಯ ಸಭೆ : ಬಲಾತ್ಕಾರದ ಬಂದ್ ವಿರೋಧಿಸಿ ನಿರ್ಣಯ ಕೈಗೊಳ್ಳಲು ಸದಸ್ಯರಿಂದ ಬೆಂಬಲ

Puttur_Advt_NewsUnder_1
Puttur_Advt_NewsUnder_1

20160104213231

ಪುತ್ತೂರು : ಬಲಾತ್ಕಾರದ ಬಂದ್ ವಿರೋಧಿಸಿ ’ಸುದ್ದಿ ವೇದಿಕೆ’ಯ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿ, ಬಲಾತ್ಕಾರದ ಬಂದ್ ಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿ ಒಳಮೊಗ್ರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಜ.5 ರಂದು ಗ್ರಾ.ಪಂ ಅಧ್ಯಕ್ಷ ಯತೀರಾಜ್ ನೀರ್ಪಾಡಿಯವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. ಬಲಾತ್ಕಾರದ ಬಂದ್ ಕೋಮು ಯಾ ಇತರ ಗಲಭೆಗಳ ಕುರಿತು ಸಭೆಯಲ್ಲಿ ವಿಷಯ ಪ್ರಸ್ತಾಪವಾದಾಗ ಅಧ್ಯಕ್ಷ ಯತಿರಾಜ್ ರೈ ಯವರು ಸದಸ್ಯರ ಅಭಿಪ್ರಾಯ ಕೇಳಿದರು. ಸದಸ್ಯರಾದ ಅಬ್ದುಲ್ ರಹಿಮಾನ್, ಮಹೇಶ್ ರೈ, ಉಷಾ ನಾರಾಯಣ, ಶಶಿಕಿರಣ್ ರೈ ಸೇರಿದಂತೆ ಎಲ್ಲಾ ಸದಸ್ಯರು ಬಲಾತ್ಕಾರದ ಬಂದ್ ಗೆ ವಿರೋಧ ವ್ಯಕ್ತಪಡಿಸಿ, ಬಂದ್ ಗೆ ಕರೆ ಕೊಡುವುದೇ ಅಕ್ಷಮ್ಯ ಅಪರಾಧವಾಗಿದ್ದು, ಬಂದ್ ನಿಂದಾಗಿ ಜನಸಾಮಾನ್ಯರು, ವರ್ತಕರು ಅಪಾರ ಕಷ್ಟ-ನಷ್ಟ ಅನುಭವಿಸುತ್ತಾರೆ. ಹಾಗಾಗಿ ನಮ್ಮ ಪಂಚಾಯತ್ ವ್ಯಾಪ್ತಿಯ ಜನರ ರಕ್ಷಣೆ ಸದಸ್ಯರಾದ ನಮ್ಮೆಲ್ಲರ ಕರ್ತವ್ಯವಾಗಿದ್ದು, ಆದ್ದರಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಸಂಘ ಸಂಸ್ಥೆಗಳ, ವರ್ತಕ ಸಂಘ, ಇತರ ಎಲ್ಲಾ ಸಂಘ ಸಂಸ್ಥೆಗಳನ್ನು ಒಟ್ಟುಗೂಡಿಸಿ ಬಲಾತ್ಕಾರದ ಬಂದ್ ವಿರೋಧದ ಆಂದೋಲನದ ಬಗ್ಗೆ ಜಾಗೃತಿ ಮೂಡಿಸಿ ಅವರ ಅಭಿಪ್ರಾಯವನ್ನು ಕೇಳುವುದು ಒಳಿತು ಎಂದು ಅಭಿಪ್ರಾಯ ವ್ಯಕ್ತವಾಯಿತು. ಸದಸ್ಯ ಅಬ್ದುಲ್ ರಹಿಮಾನ್ ರವರು ’ಸುದ್ದಿ ಪತ್ರಿಕೆ’ಯ ಆಂದೋಲನಕ್ಕೆ ಪಂಚಾಯತ್ ವತಿಯಿಂದ ಅಭಿನಂದನೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.