ಬಲಾತ್ಕಾರದ ಬಂದ್ ಮತ್ತು ಕೋಮು ಅಥವಾ ಯಾವುದೇ ಗಲಭೆ ವಿರುದ್ಧದ ಸುದ್ದಿ ಆಂದೋಲನಕ್ಕೆ ಸಂಪೂರ್ಣ ಬೆಂಬಲ-ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಿರ್ಣಯ

Puttur_Advt_NewsUnder_1
Puttur_Advt_NewsUnder_1

Apmc

ಪುತ್ತೂರು: ಬಲಾತ್ಕಾರದ ಬಂದ್ ಮತ್ತು ಕೋಮು ಅಥವಾ ಯಾವುದೇ ಗಲಭೆ ವಿರುದ್ಧದ ಸುದ್ದಿ ಆಂದೋಲನಕ್ಕೆ ಸಂಪೂರ್ಣ ಬೆಂಬಲ ನೀಡುವ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜ.2ರಂದು ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಈ ಕೈಗೊಳ್ಳಲಾಗಿದೆ. ಪ್ರತಿಭಟನಾರ್ಥ ಬಂದ್‌ಗೆ ಕರೆಕೊಡುವುದರಿಂದ ಹಾಗೂ ಬಲಾತ್ಕಾರವಾಗಿ ಬಂದ್ ನಡೆಸುತ್ತಿರುವ ಘಟನೆಗಳಿಂದ ಸಾರ್ವಜನಿಕರ ದಿನನಿತ್ಯದ ಚಟುವಟಿಕೆಗಳಿಗೆ ಹಾಗೂ ಕೂಲಿ ಕಾರ್ಮಿಕರ ನಿತ್ಯದ ಬದುಕಿಗೆ, ರೋಗಿಗಳ ತುರ್ತು ಚಿಕಿತ್ಸೆಗೆ ತೊಂದರೆಯಾಗುತ್ತಿರುವುದರಿಂದ ಹಾಗೂ ವ್ಯಾಪಾರ ವಹಿವಾಟು ಸ್ಥಗಿತಗೊಂಡು ಅಪಾರ ನಷ್ಟ ಉಂಟಾಗುತ್ತಿರುವುದರಿಂದ ಬಂದ್ ಮತ್ತು ಕೋಮು ಗಲಭೆಗೆ ಆಡಳಿತ ಮಂಡಳಿಯ ವಿರೋಧ ಇರುವುದಾಗಿ ನಿರ್ಣಯ ಅಂಗೀಕರಿಸಲಾಗಿದೆ.

ಭ್ರಷ್ಟಾಚಾರದ ವಿರುದ್ದ ಆಂದೋಲನ ನಡೆಯಲಿ

ಸರಕಾರಿ ಕಛೇರಿಗಳಲ್ಲಿ ಬಹುತೇಕವಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರಿಂದಾಗಿ ಜನ ಸಾಮಾನ್ಯರು ಬಹಳಷ್ಟು ತೊಂದರೆಗೆ ಬಲಿಯಾಗುತ್ತಾರೆ. ತಮ್ಮ ಸಣ್ಣ ಪುಟ್ಟ ವ್ಯವಹಾರಗಳಿಗಾಗಿ ಅನಗತ್ಯವಾಗಿ ಅಳೆದಾಡಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಸುದ್ದಿ ವತಿಯಿಂದ ಭ್ರಷ್ಟಾಚಾರದ ವಿರುದ್ದ ಆಂದೋಲನ ನಡೆದು ಬ್ರಷ್ಟಾಚಾರ ಮುಕ್ತ ಜಿಲ್ಲೆ ನಿರ್ಮಾಣ ಮಾಡಬೇಕು ಎಂದು ಉಪಾಧ್ಯಕ್ಷ ಕುರುಣಾಕರ ಎಲಿಯ ಹೇಳಿದರು. ಸದಸ್ಯ ಸೀತಾರಾಮ ಗೌಡ ಮಾತನಾಡಿ, ಕೆಲವು ಸಂದರ್ಭಗಳಲ್ಲಿ ಕಾನೂನಿನ ದುರೂಪಯೋಗವಾಗುತ್ತದೆ. ಇದರ ವಿರುದ್ದವೂ ಆಂದೋಲನ ನಡೆದರೆ ಉತ್ತಮ ಎಂದು ಸಲಹೆ ನೀಡಿದರು.

೨೦೧೬-೧೭ನೇ ಸಾಲಿ ಬಜೆಟ್ ಮಂಡನೆ : ೩.೨೦ಕೋಟಿ ಆದಾಯ, ೨.೪೨ ಕೋಟಿ ವೆಟ್ಟ, ೭೮.೬೦ಲಕ್ಷ ಉಳಿತಾಯದ ನಿರೀಕ್ಷೆ

ಪುತ್ತೂರು:ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ೨೦೧೬-೧೭ನೇ ಸಾಲಿನ ಬಜೆಟ್ ಮಂಡಿಸಲಾಗಿದ್ದು, ವಿವಿಧ ಮೂಲಗಳಿಂದ ಒಟ್ಟು ರೂ.೩,೨೦,೭೭,೦೦೦.೦೦ ಆದಾಯವನ್ನು ನಿರೀಕ್ಷಿಸಲಾಗಿದೆ. ವಿವಿಧ ಉದ್ದೇಶಗಳಿಗಾಗಿ ರೂ.೨,೪೨,೧೬,೫೦೦೦.೦೦ ವೆಚ್ಚವನ್ನು ಅಂದಾಜಿಸಲಾಗಿದ್ದು, ಒಟ್ಟು ರೂ ೭೮,೬೦,೫೦೦.೦೦ ಸಂಭವನೀಯ ಉಳಿತಾಯವನ್ನು ನಿರೀಕ್ಷಿಸಲಾಗಿದೆ ಎಂದು ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬವರವರು ಹೇಳಿದರು. ಲೈಸೆನ್ಸ್ ಶುಲ್ಕದಿಂದ ರೂ.೧೦ಸಾವಿರ, ಮಾರುಕಟ್ಟೆ ಶುಲ್ಕ ಶೇ.೧ರಂತೆ ರೂ.೧.೮೦ಕೋಟಿ, ಶೇ.೦.೫೦ರಂತೆ ೯೦ಲಕ್ಷ, ಬಳಕೆದಾರರ ಶುಲ್ಕದಿಂದ ರೂ.೪೦ಸಾವಿರ, ಪುಸ್ತಕ ಮತ್ತು ಫಾರಂ ಮಾರಾಟದಿಂದ ರೂ.೧೫ ಸಾವಿvರ, ಠೇವಣಿಗಳ ಮೇಲಿನ ಬಡ್ಡಿ ರೂ೧೨ಲಕ್ಷ, ಕಟ್ಟಡಗಳ ಲೀವ್ ಮತ್ತು ಲೈಸೆನ್ಸ್ ಶುಲ್ಕರೂ.೩೨ಲಕ್ಷ, ಕಟ್ಟಡಗಳ ಲೀವ್ ಮತ್ತು ಲೈಸೆನ್ಸ್ ಶುಲ್ಕದ ಮೇಲೆ ದಂಡ ರೂ.೨೦ಸಾವಿರ, ಮಾರುಕಟ್ಟೆ ಶುಲ್ಕದ ಮೇಲೆ ದಂಡ ರೂ.೫ಲಕ್ಷ, ಗೋದಾಮು ನೋಂದಣಿ ಶುಲ್ಕ ರೂ.೨ಸಾವಿರ, ಅಡಮಾನ ಸಾಲದ ಮೇಲಿನ ಬಡ್ಡಿ ರೂ.೭೦ಸಾವಿರ, ಇತರ ಮೂಲಗಳಿಂದ ರೂ.೨೦ಸಾವಿರ ಒಟ್ಟು ರೂ ೩,೨೦,೭೭,೦೦೦.೦೦ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದರು.

ರಾಜ್ಯ ಸಂಚಿತ ನಿಧಿಗೆ ವಂತಿಗೆ ರೂ.೫೪೧೫,೫೦೦೦.೦೦, ರಾಜ್ಯ ಕೃಷಿ ಮಾರಾಟ ಮಂಡಳಿಗೆ ವಂತಿಕೆ ರೂ.೯,೦೨೫೦೦.೦೦, ಆವರ್ತ ನಿಧಿಗೆ ರೂ.೭೨ಲಕ್ಷ, ಅಡಮಾನ ಸಾಲ ಯೋಜನೆಗೆ ರೂ.೧೮,೦೫,೦೦೦.೦೦, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಕಾಯ್ದೆ ೧೯೬೬ರ ಪ್ರಕರಣ ಪಾವತಿ ರೂ.೧,೮೦,೫೦೦೦.೦೦, ಕಾಯ್ದಿರಿಸಿದ ಮೊತ್ತ ರೂ,೪ಲಕ್ಷ, ವಾಹನ ಇಂಧನ ಮತ್ತು ದುರಸ್ಥಿ ವೆಚ್ಚ ರೂ. ೧,೬೨,೨೫,೦೦೦.೦೦ ಮಾರುಕಟ್ಟೆ ಪ್ರಾಂಗಣ ಸ್ವಚ್ಚತೆ ಹಾಗೂ ಸಂರಕ್ಷಣೆ ವೆಚ್ಚ ರೂ.೯,೦೨,೫೦೦೦.೦೦ ಸರಿದಂತೆ ಇತರ ಕಛೇರಿ ವ್ಯವಹಾರಗಳಿಗೆ ಒಟ್ಟು ರೂ.೨,೪೨,೧೬,೫೦೦೦.೦೦ ವೆಚ್ಚ ತಗಲುವುದಾಗಿ ಅಂದಾಜಿಸಲಾಗಿದ್ದು, ರೂ.೭೮,೬೦,೫೦೦೦.೦೦ ಸಂಭವನೀಯ ಉಳಿತಾಯವಾಗಲಿದೆ ಎಂದು ಅಧ್ಯಕ್ಷರು ಹೇಳಿದರು.

ರೆಂಪ್ಸ್ ಸಂಸ್ಥೆಯ ಬಗ್ಗೆ ಸಮಗ್ರ ಅಧ್ಯಯನ

ಆನ್‌ಲೈನ್ ವ್ಯಾಪಾರವನ್ನು ಸರಕಾರ ರೆಂಫ್ಸ್ ಸಂಸ್ಥೆಗೆ ನೀಡಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಎಪಿಎಂಸಿಯ ಕಂಪ್ಯೂಟರ್ ಸಾಪ್ಟವೇರ್ ನಿರ್ವಹಣೆಯನ್ನು ರೆಂಪ್ಸ್ ಸಂಸ್ಥೆಗೆ ನೀಡಿರುವುದಕ್ಕೆ ನಮ್ಮ ವಿರೋಧವಿದೆ. ಈ ಹಿಂದೆ ಕಿಯೋನಿಕ್ಸ್ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು ವರ್ಷಕ್ಕೆ ಕೇವಲ ರೂ.೩ಲಕ್ಷದಲ್ಲಿ ನಿರ್ವಹಣೆ ಮಾಡುತ್ತಿದ್ದರು. ಆದರೆ ರೆಂಪ್ಸ್ ಸಂಸ್ಥೆಯವರಿಗೆ ವಾರ್ಷಿಕವಾಗಿ ರೂ.೩೬ಲಕ್ಷ ನೀಡಬೇಕಾಗುತ್ತಿದೆ. ರೆಂಪ್ಸ್ ಸಂಸ್ಥೆಯವರು ಕಂಪ್ಯೂಟರ್ ಸಾಪ್ಟವೇರ್ ಅಳವಡಿಸುವುದು ಮಾತ್ರ. ಉಳಿದ ಎಲ್ಲಾ ನಿರ್ವಹಣೆಯನ್ನು ಎಪಿಎಂಸಿ ನಿರ್ವಹಿಸಬೇಕಾಗಿದೆ. ಇದರಿಂದಾಗಿ ಎಪಿಎಂಸಿಗೆ ತೀವ್ರ ಆರ್ಥಿಕ ಹೊಡೆತ ಉಂಟಾಗಲಿದೆ. ಎಪಿಎಂಸಿಯ ಅಭಿವೃದ್ದಿಯೂ ಸಾಧ್ಯವಿಲ್ಲ. ತೆರಿಗೆ ಸಂಗ್ರಹದಿಂದ ಬರುವ ಆದಾಯವೆಲ್ಲ ರೆಂಪ್ಸ್ ಸಂಸ್ಥೆಗೆ ಸಂದಾಯವಾಗಬೇಕಾಗುತ್ತದೆ. ಎಪಿಎಂಸಿಯವರು ತೆರಿಗೆ ಸಂಗ್ರಹ ಮಾಡುವ ಮಧ್ಯವರ್ತಿಗಳಾಗಿ ಕೆಲಸಮಾಡುವುದು ಮಾತ್ರವಾಗುತ್ತದೆ. ಕಳೆದ ಒಂದು ತಿಂಗಳ ನಿರ್ವಹಣೆಯ ಬಗ್ಗೆ ರೂ.೫೦ಸಾವಿರದ ಬಿಲ್ ಬಂದಿದ್ದು, ಅವರಿಗೆ ಹಣ ಪಾವತಿ ಮಾಡಿಲ್ಲ. ಸರಕಾರ ಇದರ ಬಗ್ಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ರೆಂಪ್ಯ ಸಂಸ್ಥೆಗೆ ಪಾವತಿಸಿಬೇಕಾದ ಮೊತ್ತವನ್ನು ಶೇ.೨೦ರಷ್ಟು ಕಡಿಮೆ ಮಾಡಬೇಕು. ಇಲ್ಲದಿದ್ದಲ್ಲಿ ಪ್ರತ್ಯೇಕ ಸಂಸ್ಥೆಗೆ ನೀಡಬೇಕು ಎಂದು ಆವರು ಆಗ್ರಹಿಸಿದರು. ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಜಿಲ್ಲೆಯ ೫ ಎಪಿಎಂಸಿಯ ಆಡಳಿತ ಮಂಡಳಿ ಮೂಲಕ ಶಾಸಕರು, ಸಚಿವರು ಹಾಗೂ ಉಸ್ತುವಾರಿ ಸಚಿವರ ಮೂಲಕ ಸರಕಾರಕ್ಕೆ ಒತ್ತಡ ತರಲಾಗುವುದು ಎಂದು ಅಧ್ಯಕ್ಷ ಕೃಷ್ಣ ಶೆಟ್ಟಿಯವರ ಹೇಳಿದರು.

ಸುಸಜ್ಜಿತ ಶೌಚಾಲಯ ಬೇಕು

ಎಪಿಎಂಸಿ ಪ್ರಾಂಗಣದೊಳಗೆ ಉತ್ತಮ ಶೌಚಾಲಯವಿಲ್ಲ. ಇರುವ ಶೌಚಾಲಯದ ಸೂಕ್ತ ನಿರ್ವಹಣೆಯಿಲ್ಲ. ಅಲ್ಲಿಗೆ ಸಮರ್ಪಕವಾದ ನೀರಿನ ಪೂರೈಕೆಯು ಇಲ್ಲ. ಪ್ರಾಂಗಣದೊಳಗೆ ಮಹಿಳೆಯರು ಸೇರಿದಂತೆ ನೂರಾರು ಮಂದಿ ಕಾರ್ಮಿಕರು ಕೆಲಸಮಾಡುತ್ತಿದ್ದಾರೆ. ಅಲ್ಲದೆ ಪ್ರಾಂಗಣಕ್ಕೆ ಬರುವ ರೈತರಿಗೂ ತೀವ್ರ ತೊಂದರೆ ಉಂಟಾಗುತ್ತಿದ್ದು ಪ್ರಾಂಗಣದೊಳಗೆ ಸುಸಜ್ಜಿತ ಶೌಚಾಲಯ ನಿರ್ಮಾಣಮಾಡುವಂತೆ ವರ್ತಕ ಪ್ರತಿನಿಧಿ ಅಬ್ದುಲ್ ಶಕೂರ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕೃಷ್ಣ ಶೆಟ್ಟಿಯವರು ಎಪಿಎಂಸಿಯ ವಿವಿಧ ಕಾಮಗಾರಿಯಲ್ಲಿ ಬಳಸಿ ಉಳಿಕೆ ಹಣದಿಂದ ಶೌಚಾಲಯ ನಿರ್ಮಾಣ ಮಾಡಲು ಅವಕಾಶವಿದ್ದು ನಿರ್ಮಿಸಿಕೊಡುವ ಭರವಸೆ ನೀಡಿದ ಅವರು ಶೌಚಾಲಯ ನಿರ್ಮಾಣ ಮಾಡಿ ಅದರ ನಿರ್ವಹಣೆಯಿಲ್ಲದಿದ್ದರೆ ನಿರ್ಮಾಣ ಮಾಡಿದರೂ ಪ್ರಯೋಜನವಿಲ್ಲ. ಶೌಚಾಲಯವನ್ನು ಉಪಯೋಗಿಸುವವರೇ ನಿರ್ವಹಣೆಯ ಬಗ್ಗೆ ಸ್ವಲ್ಪ ಗಮನಹರಿಸುವುದು ಅಗತ್ಯ ಎಂದು ಹೇಳಿದರು.

ವಿಶೇಷ ಅನುದಾನಕ್ಕೆ ಶಾಸಕರಿಗೆ ಮನವಿ

ಎಪಿಎಂಸಿ ಪ್ರಾಂಗಣದೊಳಗಿನ ರಸ್ತೆ ಹಾಗೂ ಕಟ್ಟಡಗಳ ದುರಸ್ಥಿಯಾಗಬೇಕಿದೆ. ಇದಕ್ಕೆ ಸಾಕಷ್ಟು ಅನುದಾನಗಳು ಎಪಿಎಂಸಿಯಲಿಲ್ಲ. ಬಹುತೇಕ ರಸ್ತೆಗಳು ಕೆಟ್ಟು ಹೋಗಿದ್ದು ರಸ್ತೆ ದುರಸ್ಥಿಗೆ ಅನುದಾನ ಮೀಸಲಿರಿಸಿದರೆ ಕಟ್ಟದ ದುರಸ್ಥಿ ಅಸಾಧ್ಯ. ಈ ನಿಟ್ಟಿನಲ್ಲಿ ಇರುವ ಅನುದಾನದಲ್ಲಿ ರಸ್ತೆ ದುರಸ್ಥಿ ಮಾಡಲಾಗುವುದು. ಕಟ್ಟಡಗಳ ದುರಸ್ಥಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಶಾಸಕಿ ಶಕುಂತಳಾ ಟಿ ಶೆಟ್ಟಿಯವರಿಗೆ ಮನವಿ ಮಾಡುವುದಾಗಿ ನಿರ್ಣಯಿಸಲಾಗಿದೆ.

ಸದಸ್ಯರಾದ ಸಾಜ ರಾಧಾಕೃಷ್ಣ ಆಲ್ವ, ಮಾಣಿಕ್ಯರಾಜ್ ಪಡಿವಾಳ್, ತ್ರಿವೇಣಿಕರುಣಾಕರ ಪೆರ‍್ವೋಡಿ, ಜ್ಯೋತಿ ಡಿ ಕೋಲ್ಪೆ, ಶೀನಪ್ಪ ಗೌಡ, ಸೋಮನಾಥ, ಗುರುನಾಥ ಪಿ.ಎಸ್ ಹಾಗೂ ಕೃಷ್ಣ ನಾಯ್ಕ ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಭಾರ ಕಾರ್ಯದರ್ಶಿ ಸ್ವಾಗತಿಸಿದರು. ಲೆಕ್ಕಿಗ ರಾಮಚಂದ್ರ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.