ಫಿಲೋಮಿನಾ ಕಾಲೇಜಿನ ಎನ್ ಎನ್ ಎಸ್ ಶಿಬಿರ ಸಮಾರೋಪ

Puttur_Advt_NewsUnder_1
Puttur_Advt_NewsUnder_1

DSCN1391

ಪುತ್ತೂರು: ಇಲ್ಲಿಯ ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಇತ್ತೀಚೆಗೆ ಬಂಟ್ವಾಳ ತಾಲೂಕು ಮಾಡತ್ತಾರಿನ ಬಿಳಿಯೂರು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಮತ್ತು ಕ್ಯಾಂಪಸ್ ನಿರ್ದೇಶಕ ರೆ| ಡಾ| ಆಂಟನಿ ಪ್ರಕಾಶ್ ಮೊಂತೆರೊರವರು ಭಾಗವಹಿಸಿದ್ದರು.

ಬಿಳಿಯೂರು ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜತ್ತಪ್ಪ ಗೌಡ ಸಮಾರೋಪ ಭಾಷಣ ಮಾಡಿದರು. ಕಾಲೇಜಿನ ಸಂಚಾಲಕ ರೆ. ಫಾ. ಆಲ್ಫ್ರೆಡ್ ಜೆ ಪಿಂಟೊ ಅಧ್ಯಕ್ಷತೆ ವಹಿಸಿದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಜಯವಿಕ್ರಮ ಸೊರಕೆ, ಪೆರ್ನೆ ಗ್ರಾ.ಪಂ. ಸದಸ್ಯ ಅಬ್ದುಲ್ ರಜಾಕ್, ಜಯಂತ ಪೂಜಾರಿ ಮತ್ತು ಮಾಜಿ ಅಧ್ಯಕ್ಷ ತನಿಯಪ್ಪ ಪೂಜಾರಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ನಾಗರಾಜು ಸ್ವಾಗತಿಸಿ, ಶಿಬಿರಾರ್ಥಿಗಳಾದ ಕಾವ್ಯಜ್ಯೋತಿ, ಯಶಸ್ವಿನಿ, ಅಭಿಷೇಕ್ ಮತ್ತು ನಾಗೇಂದ್ರ ಅನುಭವಗಳನ್ನು ವ್ಯಕ್ತಪಡಿಸಿದರು. ಕಾಲೇಜಿನ ಉಪನ್ಯಾಸಕ ಧನ್ಯ ಮತ್ತು ಕಛೇರಿ ಅಧೀಕ್ಷಕ ವಿಕ್ಟೋರಿಯನ್ ಫೆರ್ನಾಂಡಿಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ರಾಷ್ಟ್ರೀಯ ಸೇವಾ ಯೋಜನಾದಿಕಾರಿ ಪ್ರೊ. ಗೀತಾ ಪೂರ್ಣೀಮಾ ಕೆ ವಂದಿಸಿದರು. ಶಿಬಿರಾರ್ಥಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.