ಮಕ್ಕಳ ರಕ್ಷಣಾ ಕಾಯ್ದೆಗಳ ಕಾರ್ಯಗಾರ ಉದ್ಘಾಟನೆ  

20160104211309ಪುತ್ತೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಂಗಳೂರು ಇವರ ವತಿಯಿಂದ ಮಕ್ಕಳ ರಕ್ಷಣಾ ಕಾಯ್ದೆಗಳ ಬಗ್ಗೆ ತಾಲೂಕು ಮಟ್ಟದ ಕಾರ್ಯಗಾರ ತಾ.ಪಂ. ಸಭಾಂಗಣ ದಲ್ಲಿ ಜ.5ರಂದು ನಡೆಯಿತು.

ಕಾರ್ಯಕ್ರಮವನ್ನು ಶಾಸಕರೂ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯವರಾದ ಶಕುಂತಳಾ ಶೆಟ್ಟಿ ದೀಪ ಬೇಳಗಿಸಿ ಉದ್ಘಾಟಿಸಿ ಮಾತನಾಡಿ, ‘ಮಗು ಮಗುವಾಗಿ ಬೆಳೆಯಲು ಮಕ್ಕಳ ರಕ್ಷಣಾ ಕಾಯ್ದೆ ಪರಿಣಾಮ ಬೀರುತ್ತದೆ. ಬಾಲ್ಯವಿವಾಹ ಪದ್ಧತಿ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ದಾರಿ ತಪ್ಪದಂತೆ ಸಾಕಷ್ಟು ಮಹಿತಿ ನೀಡಬೇಕಾದ ಅವಶ್ಯಕತೆ ಇದೆ’ ಎಂದು ನುಡಿದರು.

ಸಭಾಧ್ಯಕ್ಷತೆ ವಹಿಸಿದ ತಾ.ಪಂ. ಅಧ್ಯಕ್ಷೆ ಪುಲಸ್ತ್ಯಾ ರೈ ಮಾತನಾಡಿ, ‘ಮಗುವಿನಿಂದ ಮುದುಕಿವರೆಗೆ ಇಂದು ಲೈಂಗಿಕ ಕಿರುಕುಳ ನಡೆಯುತ್ತಿರುವುದು ವಿಷಾದನೀಯ. ಇದನ್ನು ಕೇವಲ ಕಾನೂನಿಂದ ಮಾತ್ರ ತಡೆಗಟ್ಟಲು ಕಷ್ಟಸಾಧ್ಯ. ಮಾನವೀಯತೆಯಲ್ಲಿ ತಡೆಗಟ್ಟುವ ಪ್ರಯತ್ನವಾಗಬೇಕು. ಮನಸ್ಸಿನಲ್ಲಿ ಪ್ರತಿಜ್ಞೆ ಮೂಡಿಸುವ ಕೆಲಸವಾಗಬೇಕು’ ಎಂದರು.

ವೇದಿಕೆಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಸಿಸ್ಟರ್ ಡುಲ್ಸಿನ್ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಂಗಳೂರು ಇದರ ರಕ್ಷಣಾಧಿಕಾರಿ ಉಸ್ಮಾನ್ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸುಂದರ ಪೂಜಾರಿ ಪ್ರಸ್ತಾವನೆಗೈದರು. ರಕ್ಷಣಾ ಘಟಕ ಸಮಾಲೋಚಕರಾದ ಪೂರ್ಣಿಮಾ ವಂದಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಡಿ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿರವರು ‘ಜೀವನ ಕೌಶಲ್ಯ’ ಮತ್ತು ತಾ.ಪಂ. ಅಧ್ಯಕ್ಷೆ ಪುಲಸ್ತ್ಯಾ ರೈರವರು ‘ನಮ್ಮೆಲ್ಲರ ಹೊಣೆ’ ಪುಸ್ತಕವನ್ನು  ಬಿಡುಗಡೆಗೊಳಿಸಿದರು.

ಬಳಿಕ ಜರುಗಿದ ಕಾರ್ಯಗಾರದಲ್ಲಿ ಬಾಲ ನ್ಯಾಯ ಕಾಯಿದೆ ಬಗ್ಗೆ ಸಿಸ್ಟರ್ ಡುಲ್ಸಿನ್ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಕಸ್ತೂರಿ ಬೊಳುವಾರು, ದತ್ತು ಪ್ರಕ್ರಿಯೆ ಬಗ್ಗೆ ರಾಮಕೃಷ್ಣ ಸೇವಾ ಸಮಾಜ ಮುಖ್ಯಸ್ಥ ಗುಣಪಾಲ್ ಜೈನ್, ಫೋಕ್ಸೊ ಕಾಯಿದೆ ಬಗ್ಗೆ ಇಂಚರಾ ಫೌಂಡೇಶನ್ ನಿರ್ದೇಶಕ ಪ್ರೀತರ್ಮ ರೋಡ್ರಿಗಸ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.

ಕಾರ್ಯಗಾರದಲ್ಲಿ ಶಿಕ್ಷಣ ಇಲಾಖೆಯ ದೈ.ಶಿ. ಪರಿವೀಕ್ಷಕ ಸುಂದರ ಗೌಡ ಎನ್, ಪೊಲೀಸ್ ಇಲಾಖೆಯ ಪ್ರಮೀಳಾ ಎಂ.ಎನ್., ಜಯಶ್ರೀ, ಚಿನ್ನಮ, ಎಎಸ್‌ಐ ಶೇಷಪ್ಪ ಗೌಡ ಕೆ., ಗೋಪಾಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಡಿ. ಹೆಗಡೆ ಕಛೇರಿಯ ವಿಜಯಲಕ್ಷ್ಮಿ, ಆರತಿ ಪಿ., ಸುಜಾತ ಎಸ್., ಹರಿಣಾಕ್ಷಿ ಬಿ., ರಾಜೇಶ್ವರಿ ಎಂ., ಕಾರ್ಮಿಕ ಇಲಾಖೆಯ ಚಿದಾನಂದ ಕಾಮತ್ ಕಾಸರಗೋಡು, ಸ್ತ್ರೀಶಕ್ತಿ ಸೊಸೈಟಿಯ ಅಧ್ಯಕ್ಷೆ ಜಯಂತಿ ಆರ್. ಗೌಡ ಮತ್ತು ಸ್ತ್ರೀಶಕ್ತಿ ಸೊಸೈಟಿಯ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಶಿಕ್ಷಣ ಇಲಾಖೆಯ ಸಿ.ಆರ್.ಪಿ.ಯವರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಕಾರ್ಯಗಾರದಲ್ಲಿ ೧೦೦ ರಷ್ಟು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

20160104211308

20160104211308 (1)

20160104211315

Taluk panchayat function. News collect from teju

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.